ಜೈಪುರ: ದೇಶದಲ್ಲಿ ಬಿಡಿ, ರಾಜಸ್ಥಾನದಲ್ಲಿ ಶತಕೋಟ್ಯ ಧಿಪತಿಗಳು ಇದ್ದಾರೆನ್ನುವುದು ದೊಡ್ಡ ವಿಚಾರವೇ ಅಲ್ಲ. ಆದರೆ ರಾಜಸ್ಥಾನದ ನಾಗೌರ್ ಜಿಲ್ಲೆಯ ಜಸ್ನಗರ ಎಂಬ ಸಣ್ಣ ನಗರದಲ್ಲಿ ಪಾರಿವಾಳಗಳು ಎಕರೆಗಟ್ಟಲೇ ಜಾಗ, ಲಕ್ಷಗಟ್ಟಲೆ ಹಣದ ಒಡೆಯರಾಗಿವೆ ಎಂಬುದನ್ನು ನಂಬುತ್ತೀರಾ? ನಂಬಿ.
ಇಲ್ಲಿನ ಪಾರಿವಾಳಗಳು ಕೋಟಿ ಗಟ್ಟಲೇ ಮೌಲ್ಯದ ಆಸ್ತಿಗಳನ್ನು ಹೊಂದಿವೆ, ಅವುಗಳ ಹೆಸರಲ್ಲಿ ಎಕರೆಗಟ್ಟಲೆ ಜಾಗ ಇದೆ. 27 ಅಂಗಡಿಗಳಿವೆ, ಬ್ಯಾಂಕ್ ಖಾತೆಯಲ್ಲಿ 30 ಲಕ್ಷ ರೂ. ಹಣವಿದೆ. ಅಷ್ಟು ಮಾತ್ರವಲ್ಲ ಈ ಪಾರಿವಾಳಗಳ ಹಣದಿಂದ ಒಟ್ಟಾರೆ 500 ಗೋವುಗಳಿಗೆ ಆಶ್ರಯ ನೀಡಿರುವ ಗೋಶಾಲೆಗಳನ್ನು ನಡೆಸಲಾಗುತ್ತಿದೆ!
ಪಾರಿವಾಳಗಳ ಇಷ್ಟೆಲ್ಲ ಶ್ರೀಮಂತಿಕೆಯ ಹಿಂದೆ ಏನಿದೆ ಎಂಬ ಕುತೂಹಲವೇ? ಅದಕ್ಕೆಲ್ಲ ಹಲವು ದಶಕಗಳ ಇತಿಹಾಸವೇ ಇದೆ. ಕೈಗಾರಿ ಕೋದ್ಯಮಿ ಸಜ್ಜನ್‌ರಾಜ್ ಜೈನ್ ಎನ್ನುವವರು ಆ ಕಾಲದ ಮಾಜಿ ಸರಪಂಚ ರಾಮಿªನ್ ಚೋಟಿಯ, ಮರುಧರ್ ಕೇಸರಿಯಿಂದ ಪ್ರೇರಣೆ ಪಡೆದರು. ಯಾವ ಪಕ್ಷಿಗಳೂ ಆಹಾರ, ನೀರಿನ ಕೊರತೆ ಎದುರಿಸಬಾರದೆಂಬ ಸಂಕಲ್ಪ ಮಾಡಿ, ಅವಕ್ಕಾಗಿ ಕಬೂತರಣ್ ಟ್ರಸ್ಟ್ ಅನ್ನು ಆರಂಭಿಸಿದರು!
ಇದನ್ನೂ ಓದಿ:ಸ್ಕೋಡಾ ಕೋಡಿಯಾಕ್ ಫೇಸ್ ಲಿಫ್ಟ್ ; ಹಳೆ ಕಾರಿಗೆ ಹೊಸ ಲುಕ್
ಜನ ಕಬೂತರಣ್ ಟ್ರಸ್ಟ್‌ಗೆ ತುಂಬುಹೃದಯ ದಿಂದ ಆರ್ಥಿಕ ನೆರವು ನೀಡಿದರು. ಪರಿಣಾಮ ಈ ಹಣದಿಂದ ತೆರೆಯಲ್ಪಟ್ಟ ಅಂಗಡಿಗಳಿಂದ ಮಾಸಿಕ 80,000 ರೂ. ಬಾಡಿಗೆ ಬರುತ್ತಿದೆ.
ಹಾಗೆಯೇ ಜಮೀನನ್ನು ಗೇಣಿಗೆ ನೀಡಲಾಗಿದೆ. ಇದರಿಂದಲೂ ಹಣ ಬರುತ್ತಿದೆ. ಈಗ ಜಸ್ನಗರ ದಲ್ಲಿನ ಪಾರಿವಾಳಗಳು ಆಹಾರ, ನೀರಿನ ಕೊರತೆಯಿಲ್ಲದೇ ಆರಾಮಾಗಿ ಬದುಕುತ್ತಿವೆ.