Advertisement

ಅನಧಿಕೃತ ವಿದ್ಯುತ್‌ ಬಳಕೆ: 45 ದೂರು ದಾಖಲು

05:43 PM Jan 25, 2018 | Team Udayavani |

ತುಮಕೂರು: ನಗರದ ಹಾಗೂ ಕೊರಟಗೆರೆ ಕೆಲ ಗ್ರಾಮಗಳಲ್ಲಿ ಅನಧಿಕೃತ ವಿದ್ಯುತ್‌ ಬಳಕೆ ಮಾಡುತ್ತಿರುವ ಗ್ರಾಹಕರ ವಿರುದ್ಧ 45 ದೂರು ದಾಖಲು ಮಾಡಲಾಗಿದೆ ಎಂದು ವಿಜಲೆನ್ಸ್‌ ಪೊಲೀಸ್‌ ವರಿಷ್ಠಾಧಿಕಾರಿ ನಾರಾಯಣ್‌
ತಿಳಿಸಿದರು.

Advertisement

ಅವರು ನಗರದ ಬೆಸ್ಕಾಂ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಜಲೆನ್ಸ್‌ನಿಂದ ಸುಮಾರು 40 ಜನ ಅಧಿಕಾರಿಗಳ ತಂಡವೊಂದು ಅನಧಿಕೃತವಾಗಿ ವಿದ್ಯುತ್‌ ಬಳಕೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ಮಾಡಿದಾಗ ತುಮಕೂರು ನಗರದ ಹೆಬ್ಟಾಕ, ಜೈಪುರ, ಹೆಗಡೆ ನಗರದಲ್ಲಿ 20 ಹಾಗೂ ಕೊರಟಗೆರೆಯ ಹೊಸಕೋಟೆಯಲ್ಲಿ 25 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು 45 ಜನರು ಅನಧಿಕೃತವಾಗಿ ಕಂಬಗಳಿಂದ ನೇರವಾಗಿ ವಿದ್ಯುತ್‌ ಸಂಪರ್ಕ ಪಡೆದುಕೊಂಡಿರುವುದರ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. 

29 ಕೋಟಿ ರೂ. ನಷ್ಟ: ಸರ್ಕಾರ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದು, ವಿದ್ಯುತ್‌ ಬಿಲ್‌ ಕಟ್ಟಬೇಕಾದ ಅನಿವಾರ್ಯತೆ ಇಲ್ಲ ಎಂಬ ತಪ್ಪು ತಿಳಿವಳಿಕೆ ಇನ್ನು ಜನರಲ್ಲಿದ್ದು, ಜನರು ಅಕ್ರಮವಾಗಿ ವಿದ್ಯುತ್‌ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಸರ್ಕಾರ ವಿದ್ಯುತ್‌ ವೆಚ್ಚ ಭ್ಯರಿಸುವುದು ಕಷ್ಟವಾಗಿದೆ. ಇದರಿಂದ ಕಳೆದ 9 ತಿಂಗಳಲ್ಲಿ 29 ಕೋಟಿ ನಷ್ಟವುಂಟಾಗಿದೆ. ಗ್ರಾಹಕರು ಅಕ್ರಮ ವಿದ್ಯುತ್‌ ಸಂಪರ್ಕವನ್ನು ಪಡೆದುಕೊಳ್ಳದೇ ವಿದ್ಯುತ್‌ ಮೀಟರ್‌ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಬೆಸ್ಕಾಂ ಮಿತ್ರ ಆ್ಯಪ್‌ ಬಳಸಿ: ವಿದ್ಯುತ್‌ ಮೀಟರ್‌ ಅಳವಡಿಕೆ, ಬಿಲ್‌ ಸೇರಿದಂತೆ ಬೆಸ್ಕಾಂ ಇಲಾಖೆಯುತರುವ ಹೊಸ ಹೊಸ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳು ವುದರ ಜೊತೆ ಸಮಸ್ಯೆಗಳಿಗೆ ಪರಿಹಾರವನ್ನು ದೊರಕಿಸಲು ಬೆಸ್ಕಾಂ ಮಿತ್ರ ಎಂಬ ಆ್ಯಪ್‌ ಬಿಡುಗಡೆ ಮಾಡಲಾಗಿದ್ದು, ತಂತ್ರಜಾnನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಹಾಗೂ ಜೆಎನ್‌ಎಚ್‌ ಕ್ಯಾಟಗರಿಯಲ್ಲಿ ಗ್ರಾಹಕರಿಗೆ ಅಧಿಕಾರಿಗಳಿಂದ ಲಂಚ ಸೇರಿದಂತೆ ಇನ್ನಿತರ ಸಮಸ್ಯೆಗಳು ಎದುರಾದಲ್ಲಿ ನೇರವಾಗಿ ದೂರು ದಾಖಲಿಸಬಹುದು ಎಂದರು.

ಹೆಲ್ಪ್ ಕಮಿಟಿ ರಚನೆ: ಬೆಂಗಳೂರು ಕಚೇರಿಯಲ್ಲಿ ಗ್ರಾಹಕರಿಗೆ ನೆರವಾಗಲು ಹೆಲ್ಪ್ ಕಮಿಟಿಯನ್ನು ಆಯೋಜಿಸಲಾಗಿದ್ದು, ವಿದ್ಯುತ್‌ ಸಂಪರ್ಕಕ್ಕಾಗಿ ಅಧಿಕಾರಿಗಳಿಗೆ ಕೇಳುವ ಅನಿವಾರ್ಯತೆ ಇಲ್ಲ. ಈ ಹೆಲ್ಫ್ ಕಮಿಟಿಯಲ್ಲಿ ನೇರವಾಗಿ ಗ್ರಾಹಕ ಗಣಕಯಂತ್ರದಲ್ಲಿ ತಕ್ಷಣ ನೋಂದಣಿ ಮಾಡಿಕೊಳ್ಳಬಹುದರಿಂದ ಗ್ರಾಹಕರು ವಿದ್ಯುತ್‌ ಸಂಪರ್ಕ ಮಾಡಿಕೊಳ್ಳಲು ಪರದಾಡುವಂತಹ ಪರಿಸ್ಥಿತಿ ಕಂಡುಬರುವುದಿಲ್ಲ. ಈ ನಿಟ್ಟಿನಲ್ಲಿ ಗ್ರಾಹಕರು ಮೀಟರ್‌ ಅಳವಡಿಸಿಕೊಂಡು ಸರ್ಕಾರಕ್ಕೆ ನಷ್ಟವಾಗದಂತೆ ಬಳಕೆ ಮಾಡಿಕೊಳ್ಳಬೇಕು. ಇತ್ತೀಚಿಗೆ ಗ್ರಾಹಕರಿಲ್ಲಿ ಅರಿವು ಮೂಡಿಸುತ್ತಿರುವ ಕಾರಣ ನಗರದ ಹೆಗಡೆ ಕಾಲೋನಿಯಲ್ಲಿ ಸುಮಾರು 110 ಮನೆಗಳಿಗೆ ಮೀಟರ್‌ ಅಳವಡಿಸಿಕೊಂಡು ಬೆಸ್ಕಾಂ ಇಲಾಖೆಗೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.

Advertisement

 ಭಾಗ್ಯ ಜ್ಯೋತಿಯಡಿ, ನಿರಂತರ ಜ್ಯೋತಿಯಡಿ ಈ ಜಿಲ್ಲೆಗಳ ಗ್ರಾಮಗಳಿಗೆ ಸೇವೆಯನ್ನು ನೀಡಲಾಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಧೀಕ್ಷಕ ಅಭಿಯಂತರ ಕೆ.ವಿ.ಗೋವಿಂದಪ್ಪ, ಭಾಸ್ಕರ್‌, ಆನಂದ್‌, ಸೈಯದ್‌ ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next