Advertisement

ಅನಧಿಕೃತ ಫ್ಲೆಕ್ಸ್‌ಗಳ ಹಾವಳಿಗೆ ತಡೆಯಿಲ್ಲ

12:00 PM Jan 04, 2018 | |

ಕೆ.ಆರ್‌.ಪುರ: ಕ್ಷೇತ್ರದಾದ್ಯಂತ ಅನಧಿಕೃತ ಫ್ಲೆಕ್ಸ್‌ ಬ್ಯಾನರ್‌ಗಳ ಹಾವಳಿ ಹೆಚ್ಚಾಗಿದ್ದು, ರಾಜಕಾರಣಿಗಳು ಮತ್ತುವರ ಬೆಂಬಲಿಗರು ಕಾನೂನು ಉಲ್ಲಂ ಸಿ ಅಳವಡಿಸಿರುವ ಅನಧಿಕೃತ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಬಿಬಿಎಂಪಿ ಮೀನಮೇಷ ಎಣಿಸುತ್ತಿದೆ.

Advertisement

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಚಾರದ ಭರಾಟೆ ಆರಂಭಿಸಿರುವ ವಿವಿಧ ಪಕ್ಷಗಳ ರಾಜಕೀಯ ನಾಯಕರು ಮತ್ತವರ ಬೆಂಬಲಿಗರು, ಎಲ್ಲೆಂದರಲ್ಲಿ ಫೆಕ್ಸ್‌ ಅಳವಡಿಸಿದ್ದಾರೆ. ಅಲ್ಲದೆ ಈ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಕಟ್ಟುವ ಸಂಬಂಧ ರಾಜಕೀಯ ಮುಖಂಡರುಗಳು ಜಿದ್ದಿಗೆ ಬಿದ್ದಿದ್ದಾರೆ. 

ಅಭಿವೃದ್ಧಿಗೂ ಫ್ಲೆಕ್ಸ್‌: ಹೊಸ ವರ್ಷ, ಕನಕ ಜಯಂತಿ, ಕ್ರಿಸ್ಮಸ್‌, ಮಕರ ಸಂಕ್ರಾತಿ ಹಬ್ಬ, ಕನ್ನಡ ರಾಜೋತ್ಸವ, ವೈಕುಂಠ ಏಕಾದಶಿ ಸೇರಿ ವಿವಿಧ ಧಾರ್ಮಿಕ ಆಚರಣೆ, ಸಂಭ್ರಮಗಳಿಗೆ ಶುಭ ಕೋರುವ ಫ್ಲೆಕ್ಸ್‌ಗಳು ಒಂದೆಡೆಯಾದರೆ, ಅಭಿವೃದ್ಧಿ ಕಾಮಗಾರಿಗಳಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳು ಇದೇ ಮೊದಲ ಬಾರಿ ಕಾಣಿಸಿಕೊಂಡಿವೆ. ವಿದ್ಯುತ್‌ ಕಂಬ, ಮರಗಿಡಗಳು ಮಾತ್ರವಲ್ಲದೆ, ಟ್ರಾಫಿಕ್‌ ಸಿಗ್ನಲ್‌ ಕಂಬಗಳನ್ನೂ ಬಿಡದಂತೆ ಫ್ಲೆಕ್ಸ್‌, ಬ್ಯಾನರ್‌ ಕಟ್ಟಲಾಗಿದೆ. ಆದರೆ ಟ್ರಾಫಿಕ್‌ ಪೊಲೀಸರಾಗಲಿ, ಬಿಬಿಎಂಪಿ ಅಧಿಕಾರಿಗಳಾಗಲಿ ಇದನ್ನು ಪ್ರಶ್ನಿಸುತ್ತಿಲ್ಲ.

ಅನಧಿಕೃತ ಫೆಕ್ಸ್‌ಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಫ್ಲೆಕ್ಸ್‌ ಮುದ್ರಣ ಮಳಿಗೆಗಳನ್ನು ಜಪ್ತಿ ಮಾಡಬೇಕು, ಪ್ರತಿ ವಾರ್ಡನಲ್ಲಿ ಫ್ಲೆಕ್ಸ್‌ ತೆರವು ಕಾರ್ಯಚರಣಿ ನಡೆಸಬೇಕು ಎಂದು ಮೆಯರ್‌ ಸಂಪತ್‌ರಾಜ್‌ ಅಧಿಕಾರಿಗಳಿಗೆ ಈ ಹಿಂದೆ ಆದೇಶಿಸಿದ್ದರು. ಆದರೆ ಮಹದೇವಪುರ ವಲಯದ ಬಿಬಿಎಂಪಿ ಅಧಿಕಾರಿಗಳು, ಮೇಯರ್‌ ಅದೇಶವನ್ನು ಸಾರಾಸಗಟಾಗಿ ನಿರ್ಲಕ್ಷಿಸಿದ್ದಾರೆ. ಇತ್ತೀಚೆಗೆ ಅಳವಡಿಸಿರುವ ಫ್ಲೆಕ್ಸ್‌ಗಳು ಒಂದೆಡೆಯಾದರೆ, ವರ್ಷದ ಹಿಂದೆ ಅಳವಡಿಸಿರುವ ಬ್ಯಾನರ್‌ಗಳು ಕೂಡ ತೆರವಾಗಿಲ್ಲ.

ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ 75, ರಾಮಮೂರ್ತಿನಗರ, ದೇವಸಂದ್ರ, ಟಿನ್‌ ಫ್ಯಾಕ್ಟರಿ, ವಿಜಿನಾಪುರ, ಬಸವನಪುರ, ಬಟ್ಟರಹಳ್ಳಿ, ಮೇಡಹಳ್ಳಿ ಕಲ್ಕೆರೆ ಮುಖ್ಯರಸ್ತೆಯಲ್ಲಿರುವ ವಿದ್ಯುತ್‌ ಕಂಬ, ಮರಗಳು, ರಸ್ತೆ ಬದಿಯ ಕಟ್ಟಡಗಳು ಹಾಗೂ ಪಾದಚಾರಿ ಮೇಲ್ಸೇತುವೆಯಲ್ಲಿ ಅನಧಿಕೃತ ಫ್ಲೆಕ್ಸಗಳು ರಾರಾಜಿಸುತ್ತಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. 

Advertisement

ಗಲಾಟೆಯಾದರೂ ಕ್ರಮವಿಲ್ಲ: ನ.22ರಂದು ಸಾರ್ವಜನಿಕ ಅಸ್ಪತ್ರೆ ಆವರಣದಲ್ಲಿ ಡಯಾಲಿಸಿಸ್‌ ಕೇಂದ್ರದ ಶಂಕುಸ್ಥಾಪನೆ ವೇಳೆ ಬ್ಯಾನರ್‌ ಕಟ್ಟುವ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಗಳವಾಗಿ, ಪ್ರಕರಣ ಪೊಲೀಸ ಠಾಣೆ ಮೆಟ್ಟಿಲೇರಿತ್ತು. ಆದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಅನುಮತಿ ಪಡೆಯದೆ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌ ತೆರವುಗೊಳಿಸುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next