Advertisement

ಅನಧಿಕೃತ ಜಾಹೀರಾತು ಫಲಕ ತೆರವು; ಸ್ಥಾಯಿ ಸಮಿತಿ

06:19 PM Dec 15, 2022 | Team Udayavani |

ಬಳ್ಳಾರಿ: ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ರಸ್ತೆ, ವೃತ್ತಗಳಲ್ಲಿ ಅನ ಧಿಕೃತವಾಗಿ ಅಳವಡಿಸಿರುವ ಜಾಹೀರಾತು ಫಲಕಗಳನ್ನು ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಬುಧವಾರ ತೆರವುಗೊಳಿಸಿತು.

Advertisement

ನಗರದ ಸಂಗಮ್‌ ವೃತ್ತದಲ್ಲಿ ಜೆಸಿಬಿಯೊಂದಿಗೆ ತೆರವು ಕಾರ್ಯಾಚರಣೆಗಿಳಿದ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಾಂಜಿನಿ, ಸದಸ್ಯ ಮುಂಡ್ಲೂರು ಪ್ರಭಂಜನ್‌, ಸದಸ್ಯ ಮುಲ್ಲಂಗಿ ನಂದೀಶ್‌, ಪಾಲಿಕೆ ಅ ಧಿಕಾರಿಗಳಾದ ಕಿರಣ್‌, ಶ್ರೀನಿವಾಸ್‌, ಹರ್ಷವರ್ಧನ್‌ ಇತರರು ವೃತ್ತದಲ್ಲಿ ಅನ ಧಿಕೃತವಾಗಿ ಅಳವಡಿಸಿದ್ದ ನಾಲ್ಕು ಫಲಕ ತೆರವುಗೊಳಿಸುವ ಮೂಲಕ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದರು.

ಪಾಲಿಕೆಯಿಂದ ಅನುಮತಿ ಪಡೆದು ಅಳವಡಿಸಿರುವ ಅಧಿಕೃತ ನಾಮಫಲಕಗಳಷ್ಟೇ ಶೇ.50ರಷ್ಟು ಅನಧಿಕೃತ ನಾಮಫಲಕಗಳನ್ನೂ ಅಳವಡಿಸಲಾಗಿದೆ. ಕಳೆದೊಂದು ವಾರದಿಂದ ಸಿಬ್ಬಂದಿಗಳಿಂದ ಸರ್ವೇ ಮಾಡಿಸಲಾಗಿದೆ. ಅನಧಿಕೃತ ಫಲಕಗಳಿಂದ ಪಾಲಿಕೆಗೆ ಆದಾಯದ ಕೊರತೆ ಎದುರಾಗಿದೆ. ಹೀಗಾಗಿ ಜಾಹೀರಾತು ಫಲಕಗಳ ಪಟ್ಟಿ ಇಟ್ಟುಕೊಂಡು ಜಾಹೀರಾತು ಫಲಕಗಳ ಬಳಿಗೆ ತೆರಳುತ್ತಿದ್ದೇವೆ. ಸಂಬಂಧಪಟ್ಟವರು ಈ ಕುರಿತು ಪಾಲಿಕೆಯಿಂದ ಅನುಮತಿ ಪಡೆದಿರುವ ಅಧಿಕೃತ ದಾಖಲೆ ತೋರಿಸಿದಲ್ಲಿ ಬಿಡುತ್ತೇವೆ. ಇಲ್ಲದಿದ್ದಲ್ಲಿ ತೆರವುಗೊಳಿಸುತ್ತೇವೆ. ಹೀಗಾಗಿ ಸಂಗಮ್‌ ವೃತ್ತದಲ್ಲಿದ್ದ 8 ಜಾಹೀರಾತು ಫಲಕಗಳ ಪೈಕಿ ಮೂರು ಅ ಧಿಕೃತವಾಗಿದ್ದು, ಉಳಿದ 5 ಅನಧಿಕೃತ ಫಲಕ ತೆರವುಗೊಳಿಸಲಾಯಿತು ಎಂದು ಸಮಿತಿ ಸದಸ್ಯ ಮುಂಡ್ಲೂರು ಪ್ರಭಂಜನ್‌ ತಿಳಿಸಿದ್ದಾರೆ.

ಇನ್ನು ನಗರದ ಪ್ರಮುಖ ವೃತ್ತ ಗಡಗಿ ಚನ್ನಪ್ಪ ವೃತ್ತದಲ್ಲಿ ಪಾಲಿಕೆ ಆವರಣದಲ್ಲಿನ ಒಂದು ಜಾಹೀರಾತು ನಾಮಫಲಕ ಹೊರತುಪಡಿಸಿದರೆ ಉಳಿದಂತೆ ನಾಲ್ಕು ಫಲಕಗಳು ಅನಧಿಕೃತವಾಗಿದ್ದು ತೆರವುಗೊಳಿಸಲಾಗಿದೆ. ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಪಾಲಿಕೆ ಆವರಣದಲ್ಲಿನ ಅಧಿಕೃತ ಜಾಹೀರಾತು ಫಲಕ ಸಹ ತೆರವುಗೊಳಿಸಲಾಗಿದೆ.

ತೆರವಿಗೂ ಮುನ್ನ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗುವುದು. ಅವರು ಪಾಲಿಕೆಗೆ ಹಣ ಸಂದಾಯ ಮಾಡಿದ್ದಾರಾ-ಇಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಲಾಗುವುದು. ಇಲ್ಲದಿದ್ದಾಗ ನೋಟೀಸ್‌ ನೀಡಿ, ಹಣ ಪಾವತಿಸುವಂತೆ ಗಡುವು ನೀಡಲಾಗುವುದು. ಈಗಾಗಲೇ ಪಡೆದು ನಿರ್ಲಕ್ಷ್ಯ ವಹಿಸಿದ್ದಲ್ಲಿ ಅಂಥವರ ಅನಧಿಕೃತ ಫಲಕಗಳನ್ನು ತೆರವುಗೊಳಿಸಲಾಗುವುದು ಎಂದರು.

Advertisement

ಅರ್ಜಿ ಸಲ್ಲಿಸದೆ ಫಲಕ ಅಳವಡಿಕೆ: ಪಾಲಿಕೆಯಿಂದ ಗುರುತಿಸಲಾಗಿದ್ದ ಸ್ಥಳಗಳಲ್ಲಿ ಜಾಹೀರಾತು ಫಲಕ ಅಳವಡಿಸುವ ಕುರಿತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಆಸಕ್ತರು, ವಾರ್ಷಿಕವಾಗಿ ಇಂತಿಷ್ಟು ಹಣ ಸಂದಾಯ ಮಾಡುವ ಸಲುವಾಗಿ ಪಾಲಿಕೆ ಶುಲ್ಕ ನಮೂದಿಸುತ್ತದೆ. ಅರ್ಜಿದಾರರು ಪಾಲಿಕೆ ಸೂಚಿಸುವ ಶುಲ್ಕಕ್ಕಿಂತ ಹೆಚ್ಚು ಹಣ ಸಂದಾಯ ಮಾಡುವುದಾಗಿ ಅರ್ಜಿಯಲ್ಲಿ ನಮೂದಿಸಿದವರಿಗೆ ಸ್ಥಳದಲ್ಲಿ ಜಾಹೀರಾತು ಫಲಕ
ಅಳವಡಿಸಲು ಅನುಮತಿ ನೀಡಲಾಗುತ್ತದೆ. ಆದರೆ, ಸದ್ಯ ತೆರವುಗೊಳಿಸಿರುವ ಫಲಕಗಳಿಗೆ ಸಂಬಂಧಪಟ್ಟವರು ಅನುಮತಿ ಕೋರಿ ಪಾಲಿಕೆಗೆ ಅರ್ಜಿ ಸಲ್ಲಿಸಿಲ್ಲ, ಅನುಮತಿ ಪಡೆದಿಲ್ಲ. ಹಾಗಾಗಿ ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆ ಹೀಗೆ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ. ಈ ವೇಳೆ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next