ಗದಗ: ರಾಜ್ಯದಲ್ಲಿ ಕೋವಿಡ್ ಪರಿಷ್ಕೃತ ಆದೇಶದ ಹಿನ್ನೆಲೆಯಲ್ಲಿ ಅಘೋಷಿತ ಲಾಕ್‌ಡೌನ್ ಶುಕ್ರವಾರವೂ ಮುಂದುವರಿಯಿತು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಬಗೆಯ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿಸಲಾಯಿತು.
ವಾರಾಂತ್ಯದ ಮುನ್ನಾ ದಿನವಾದ ಶುಕ್ರವಾರ ಸಂಜೆ ವೇಳೆಗೆ ಸಾರಿಗೆ ಬಸ್‌ಗಳ ಸಂಖ್ಯೆಯೂ ವಿರಳವಾಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು. ಬೆಳಗ್ಗೆ 11 ಗಂಟೆ ವರೆಗೆ ಎಲ್ಲ ಬಗೆಯ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿದ್ದ ಅಧಿ ಕಾರಿಗಳು ನಂತರ ಬಾಗಿಲು ಮುಚ್ಚಿಸಿದರು. ಔಷ ಧ ಅಂಗಡಿಗಳು, ಹೋಟೆಲ್‌ಗಳಲ್ಲಿ ಪಾರ್ಸೆಲ್, ಬೇಕರಿ, ಹಾಲು, ತರಕಾರಿ, ಹಣ್ಣು, ಕಿರಾಣಿ, ಎಲೆಕ್ಟ್ರಿಕಲ್ಸ್ ಅಂಗಡಿ, ಪೆಟ್ರೋಲ್ ಬಂಕ್ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಅಭಾದಿತವಾಗಿ ನಡೆಯಿತು.
ಇನ್ನುಳಿದಂತೆ ಚಿನ್ನಾಭರಣ ಅಂಗಡಿ, ಬಟ್ಟೆ, ಪಾತ್ರೆಗಳ ಅಂಗಡಿ ಸೇರಿದಂತೆ ಬಹುತೇಕ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಲಾಯಿತು. ವಿವಾಹ ಮತ್ತಿತರೆ ಕಾರಣಗಳಿಗಾಗಿ ಚಿನ್ನ, ಬಟ್ಟೆ ಖರೀದಿಗೆಂದು ಆಗಮಿಸಿದ್ದ ಜನರು ಗಲ್ಲಿ ಗಲ್ಲಿಗಳಲ್ಲಿ ಅಂಗಡಿಗಳಿಗಾಗಿ ಹುಡುಕಾಡುವಂತಾಯಿತು.
ಎಲ್ಲೆ ಮೀರಿದರೆ ಠಾಣೆಗೆ: ಈ ನಡುವೆ ಕೆಲ ವರ್ತಕರು ಪೊಲೀಸರ ಎಚ್ಚರಿಕೆಯನ್ನೂ ಮೀರಿ ಕದ್ದುಮುಚ್ಚಿ ವ್ಯಾಪಾರ ನಡೆಸುತ್ತಿದ್ದವರನ್ನು ಪೊಲೀಸರು ಠಾಣೆಗೆ ಕರೆದೊಯ್ದು, ಕೆಲ ಸಮಯದ ಬಳಿಕ ಬಿಟ್ಟು ಕಳುಹಿಸಿದರು. ಇನ್ನೂ ಕೆಲವರಿಗೆ ಎಚ್ಚರಿಕೆ ನೀಡಿ, ಅಂಗಡಿಗಳನ್ನು ಬಂದ್ ಮಾಡಿಸಿದರು. ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದವರಿಗೆ ನಗರಸಭೆ ಸಿಬ್ಬಂದಿ 100, 200 ರೂ. ದಂಡ ವಿಧಿ ಸಿ ಬಿಸಿ ಮುಟ್ಟಿಸಿದರು.
ಬಸ್‌ಗಾಗಿ ಪ್ರಯಾಣಿಕರ ಪರದಾಟ: ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಘೋಷಿಸಿರುವ ವಾರಾಂತ್ಯದ ಕಫೂÂì ಬಿಸಿ ಜಿಲ್ಲೆಯ ಜನತೆಗೆ ಶುಕ್ರವಾರ ಸಂಜೆಯೇ ತಟ್ಟಿತು. ಇಲ್ಲಿನ ಪಂ|ಪುಟ್ಟರಾಜ ಕವಿಗವಾಯಿಗಳ ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ಬಳಿಕ ಬಸ್‌ಗಳ ಆಗಮನ ಕ್ಷೀಣಿಸಿತು. ಪರ ಜಿಲ್ಲೆಗಳಿಗೆ ತೆರಳುವ ಹಾಗೂ ಜಿಲ್ಲೆಯ ಗ್ರಾಮೀಣ ಮಾರ್ಗಗಳಲ್ಲಿ ಬಸ್‌ಗಳ ಓಡಾಟ ವಿರಳವಾಗಿತ್ತು. ಖಾಸಗಿ ಬಸ್ ಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಕೋವಿಡ್ ನಿಯಮಗಳ ಪಾಲನೆ ಯಾಗದೇ, ಜನರು ಕೊರೊನಾ ವ್ಯಾಪಿಸುವ ಭಯದಲ್ಲೇ ಪ್ರಯಾಣ ಬೆಳೆಸಿದರು.