Advertisement

ರಣಜಿ: ಸತತ 2ನೇ ಫೈನಲ್‌ನಲ್ಲಿ ಸೌರಾಷ್ಟ್ರ

10:08 AM Mar 06, 2020 | sudhir |

ರಾಜ್‌ಕೋಟ್‌: ಸೌರಾಷ್ಟ್ರ ಸತತ 2ನೇ ಸಲ ರಣಜಿ ಟ್ರೋಫಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ರಾಜ್‌ಕೋಟ್‌ನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಅದು ಗುಜರಾತ್‌ಗೆ 92 ರನ್‌ ಸೋಲುಣಿಸಿ ಮುನ್ನಡೆಯಿತು. ನಾಯಕ, ಪ್ರಧಾನ ಪೇಸ್‌ ಬೌಲರ್‌ ಜೈದೇವ್‌ ಉನಾದ್ಕತ್‌ 56 ರನ್ನಿಗೆ 7 ವಿಕೆಟ್‌ ಉಡಾಯಿಸಿ ಸೌರಾಷ್ಟ್ರ ಗೆಲುವಿನ ರೂವಾರಿಯಾಗಿ ಮೂಡಿಬಂದರು.

Advertisement

ಗೆಲುವಿಗೆ 327 ರನ್ನುಗಳ ಗುರಿ ಪಡೆದ ಗುಜರಾತ್‌, 4ನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟಿಗೆ 7 ರನ್‌ ಮಾಡಿತ್ತು. ಬುಧವಾರ ಬ್ಯಾಟಿಂಗ್‌ ಮುಂದುವರಿಸಿ 234 ರನ್ನಿಗೆ ಸರ್ವಪತನ ಕಂಡಿತು.

ಒಂದು ಹಂತದಲ್ಲಿ ಗುಜರಾತ್‌ 63 ರನ್ನಿಗೆ 5 ವಿಕೆಟ್‌ ಕಳೆದುಕೊಂಡು ದೊಡ್ಡ ಸೋಲಿನತ್ತ ಮುಖ ಮಾಡಿತ್ತು. ಆದರೆ ಪಾರ್ಥಿವ್‌ ಪಟೇಲ್‌ (93) ಮತ್ತು ಚಿರಾಗ್‌ ಗಾಂಧಿ (96) 158 ರನ್‌ ಜತೆಯಾಟ ನಡೆಸಿ ಭರವಸೆ ಮೂಡಿಸಿದರು. ಆದರೆ ಈ ಜೋಡಿ ಬೇರ್ಪಟ್ಟ ಕೂಡಲೇ ಗುಜರಾತ್‌ ಪತನ ತೀವ್ರಗೊಂಡಿತು. ಇವರಿಬ್ಬರ ವಿಕೆಟ್‌ಗಳನ್ನು ಉನಾದ್ಕತ್‌ ಉರುಳಿಸಿದರು. ಅಂತಿಮ 5 ವಿಕೆಟ್‌ಗಳು ಬರೀ 13 ರನ್‌ ಅಂತರದಲ್ಲಿ ಉದುರಿದವು!

ರಾಜ್‌ಕೋಟ್‌ನಲ್ಲಿ ಫೈನಲ್‌
ಸೌರಾಷ್ಟ್ರ-ಬಂಗಾಲ ನಡುವಿನ ರಣಜಿ ಫೈನಲ್‌ ಮಾ. 9ರಿಂದ 13ರ ತನಕ ರಾಜ್‌ಕೋಟ್‌ ಅಂಗಳದಲ್ಲೇ ನಡೆಯಲಿದೆ. ಇದು ಸೌರಾಷ್ಟ್ರ ಕಾಣುತ್ತಿರುವ ಸತತ 2ನೇ ರಣಜಿ ಫೈನಲ್‌. ಕಳೆದ ಸಲ ಅದು ವಿದರ್ಭ ವಿರುದ್ಧ ಎಡವಿತ್ತು.
ಸಂಕ್ಷಿಪ್ತ ಸ್ಕೋರ್‌: ಸೌರಾಷ್ಟ್ರ-304 ಮತ್ತು 274. ಗುಜರಾತ್‌-242 ಮತ್ತು 234 (ಪಾರ್ಥಿವ್‌ ಪಟೇಲ್‌ 93, ಚಿರಾಗ್‌ ಗಾಂಧಿ 96, ಉನಾದ್ಕತ್‌ 56ಕ್ಕೆ 7).

ಪಂದ್ಯಶ್ರೇಷ್ಠ: ಅರ್ಪಿತ್‌ ವಸವಾಡ.

Advertisement
Advertisement

Udayavani is now on Telegram. Click here to join our channel and stay updated with the latest news.

Next