Advertisement

ದೇವೇಗೌಡರಂತೆ ಆಗಬಯಸುತ್ತೀರಾ?; ನಿತೀಶ್ ಕುಮಾರ್ ಗೆ ಬಿಜೆಪಿ ಪ್ರಶ್ನೆ

02:52 PM Feb 19, 2023 | Team Udayavani |

ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಆಡಳಿತ ಪಕ್ಷವನ್ನು 100ಕ್ಕೂ ಕಡಿಮೆ ಸ್ಥಾನಗಳಿಗೆ ಇಳಿಸಲು ಸಾಧ್ಯವಾಗುತ್ತದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ ಒಂದು ದಿನದ ನಂತರ, ಜೆಡಿಯು ನಾಯಕರ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಕೈಜೋಡಿಸುವಂತೆ ನಿತೀಶ್ ಕುಮಾರ್ ಶನಿವಾರ ಮತ್ತೊಮ್ಮೆ ಕರೆ ನೀಡಿದ್ದರು.

Advertisement

ಹಿರಿಯ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಎಎನ್‌ಐಗೆ ಪ್ರತಿಕ್ರಿಯಿಸಿ, “ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಏನಾಯಿತು? ಬಿಹಾರವನ್ನು ನಿಭಾಯಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಮತ್ತು ರಾಜ್ಯವು ತೊಂದರೆಯಲ್ಲಿದೆ. ಅಲ್ಲಿ ಅವರ ಪಕ್ಷದಲ್ಲಿ ಅವ್ಯವಸ್ಥೆ ಇದೆ, ಕಾಂಗ್ರೆಸ್ ಅವರಿಗೆ ಯಾವುದೇ ಲಿಫ್ಟ್ ನೀಡುತ್ತಿಲ್ಲ, ನಿತೀಶ್ ಜೀ, ನೀವು ದೇವೇಗೌಡರಂತೆ ಅಥವಾ ಐದು-ಆರು ತಿಂಗಳ ಕಾಲ ಇದ್ದ ಇಂದರ್ ಕುಮಾರ್ ಗುಜ್ರಾಲ್ ಅವರಂತೆ ಆಗಲು ಬಯಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

“ಅದು ನಿತೀಶ್ ಕುಮಾರ್ ಅಥವಾ ಬೇರೆ ಯಾರೇ ಆಗಿರಲಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಅವರಿಗೆ ಅರ್ಥವಾಗುತ್ತಿಲ್ಲ. ಇದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಯುಕೆ ಪ್ರಧಾನಿಗಳು, ಏರ್ ಇಂಡಿಯಾ ಒಪ್ಪಂದಕ್ಕಾಗಿ ಅಮೆರಿಕ ಮತ್ತು ಫ್ರಾನ್ಸ್ ಭಾರತವನ್ನು ಹೊಗಳುತ್ತಿವೆ, ಇದು ತಮ್ಮ ದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳುತ್ತಿದೆ. ದೇಶವು ಸಾಕಷ್ಟು ಬದಲಾಗಿದೆ, ”ಎಂದು ಪಾಟ್ನಾ ಸಾಹಿಬ್ ಸಂಸದ ರವಿಶಂಕರ್ ಪ್ರಸಾದ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next