Advertisement

ಈಗಲೂ ಪಾಕಿಸ್ಥಾನ ಉಗ್ರರ ತವರು

06:00 AM Apr 05, 2018 | Team Udayavani |

ಇಸ್ಲಾಮಾಬಾದ್‌/ನ್ಯೂಯಾರ್ಕ್‌: ಭಾರತ ಅಥವಾ ಇನ್ನಾವುದೇ ದೇಶದ ವಿರುದ್ಧ ಸಂಚು ರೂಪಿಸಲು ಅವಕಾಶ ಕೊಡೆವು ಎಂದು ಜಗತ್ತಿಗೆ ಸಾರಿ ಹೇಳುವಂತೆ ನಾಟಕವಾಡುವ ಪಾಕಿಸ್ಥಾನಕ್ಕೆ ವಿಶ್ವಸಂಸ್ಥೆ ಮತ್ತೆ ತಪರಾಕಿ ನೀಡಿದೆ. ವಿಶ್ವದ ನಿಷೇಧಿತ ಉಗ್ರರ ಹೊಸ ಪಟ್ಟಿ ಸಿದ್ಧಪಡಿಸಿರುವ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಪಾಕಿಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿರುವ 139 ಸಂಘಟನೆಗಳ ಹೆಸರು ಮುಂಚೂಣಿಯಲ್ಲಿದೆ ಎಂದಿದೆ.

Advertisement

ಈ ಹಿಂದಿನ ಪಟ್ಟಿಯಲ್ಲಿರುವಂತೆ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ, 2008ರ ಮುಂಬಯಿ ದಾಳಿ ರೂವಾರಿ ಉಗ್ರ ಹಫೀಜ್‌ ಸಯೀದ್‌ ಉಗ್ರವಾದದ ರೂವಾರಿಗಳಾಗಿದ್ದಾರೆ. ಅಷ್ಟೇ ಅಲ್ಲ, ದಾವೂದ್‌ ಕರಾಚಿಯಲ್ಲಿ ವೈಭವೋಪೇತ ಬಂಗಲೆಯಲ್ಲೇ ವಾಸವಾಗಿದ್ದಾನೆ ಎಂದು ಹೇಳಿದೆ.

ಈ ಕುರಿತು ಪಾಕಿಸ್ಥಾನದ ಪತ್ರಿಕೆ “ದ ಡಾನ್‌’ ವರದಿ ಮಾಡಿದ್ದು, ಪಟ್ಟಿಯಲ್ಲಿ ಅಲ್‌ ಕಾಯಿದಾ ಉಗ್ರ ಸಂಘಟನೆಯ ಆಯ್‌ಮನ್‌ ಅಲ್‌-ಜವಾಹಿರಿ ಮೊದಲ ಸ್ಥಾನದಲ್ಲಿದ್ದಾನೆ. ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಅಲ್ಲದೆ, ನಿಕಟವರ್ತಿ ಇಬ್ರಾಹಿಂ ಕಸ್ಕರ್‌ ಕೂಡ ಉಗ್ರರ ಸಾಲಿನಲ್ಲಿದ್ದಾನೆ. ಆತಂಕಕಾರಿ ಅಂಶವೆೆಂದರೆ ಈತ ಹಲವು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾನೆ ಎನ್ನ‌ಲಾಗಿದೆ.
1993ರ ಮುಂಬಯಿ ಸರಣಿ ಸ್ಫೋಟದಲ್ಲಿ ಭಾಗಿಯಾಗಿ ರುವ ಆರೋಪವನ್ನು ಕಸ್ಕರ್‌ ಎದುರಿಸುತ್ತಿದ್ದಾನೆ. 

ಮ್ಯಾಚ್‌ ಫಿಕ್ಸಿಂಗ್‌, ಸುಲಿಗೆ ಸೇರಿ ಹಲವು ಅಕ್ರಮಗಳಲ್ಲಿ ಭಾಗಿಯಾಗಿದ್ದಾನೆ. ಯುಎಇ, ಸ್ಪೈನ್‌, ಮೊರಾಕ್ಕೋ, ಟರ್ಕಿ, ಸೈಪ್ರಸ್‌, ಆಸ್ಟ್ರೇಲಿಯ ಸಹಿತ ಹಲವು ರಾಷ್ಟ್ರಗಳಲ್ಲಿ ಆತ ಅಪಾರ ಪ್ರಮಾಣದ ಆಸ್ತಿ ಹೊಂದಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ. ಉಗ್ರ ಸಂಘಟನೆ ಲಷ್ಕರ್‌-ಎ-ತಯ್ಯಬಾ ಸಂಘಟನೆಯ ಮಾಧ್ಯಮ ವಕ್ತಾರ ಹಾಜಿ ಮೊಹಮ್ಮದ್‌ ಯಾಹ್ಯಾ ಮುಜಾಹಿದ್‌, ಉಗ್ರ ಹಫೀಜ್‌ ಸಯೀದ್‌ನ ಸಂಗಡಿಗರಾಗಿರುವ ಅಬ್ದುಲ್‌ ಸಲ್ಮಾನ್‌, ಝಫ‌ರ್‌ ಇಕ್ಬಾಲ್‌ರ ಹೆಸರುಗಳೂ ಭದ್ರತಾ ಮಂಡಳಿ ಪಟ್ಟಿಯಲ್ಲಿವೆ.

ಪಾಕ್‌ನಲ್ಲೇ ಪಾಸ್‌ಪೋರ್ಟ್‌ ನವೀಕರಣ: ಲಷ್ಕರ್‌-ಎ-ತಯ್ಯಬಾ ಸಂಘ ಟನೆ ಹಲವಾರು ಅಲಿಯಾಸ್‌ ಹೆಸರುಗಳನ್ನು ಹೊಂದಿರುವ ಬಗ್ಗೆ ಭದ್ರತಾ ಮಂಡಳಿ ಎಚ್ಚರಿಸಿದೆ. ಅಲ್‌-ಮನ್ಸೂರಿಯಾನ್‌, ಪಾಸºನ್‌-ಇ-ಕಾಶ್ಮೀರ್‌, ಪಾಸºನ್‌-ಐ-ಅಹೆ ಹಾದಿತ್‌, ಜಮಾತುದ್‌ ದಾವಾ ಮತ್ತು ಫ‌ಲಾ-ಐ-ಇನ್ಸಾನಿಯತ್‌ ಫೌಂಡೇಶನ್‌ ಎಂಬ ಹೆಸರುಗಳಲ್ಲಿ ಕಾರ್ಯಾಚರಣೆ ನಡೆಸು ತ್ತಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದ ಲ್ಲಿರುವ ವ್ಯಕ್ತಿಯೆಂದರೆ ಯೆಮನ್‌ ಪ್ರಜೆ ರಂಝಿ ಮೊಹಮ್ಮದ್‌ ಬಿನ್‌ ಅಲ್‌-ಶೆಬಾ. ಕರಾಚಿಯಲ್ಲಿ ಬಂಧಿತನಾಗಿರುವ ಆತನನ್ನು ಅಮೆರಿಕ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಇನ್ನು ಕೆಲವರಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿರುವ ಪಾಕಿಸ್ಥಾನ ರಾಯಭಾರ ಕಚೇರಿಯಿಂದ ಪಾಸ್‌ಪೋರ್ಟ್‌ ನೀಡಲಾಗಿದ್ದು, ಅದನ್ನು ಪಾಕಿಸ್ಥಾನದಲ್ಲಿಯೇ ನವೀಕರಿಸಲಾಗಿರುವ ಅಂಶಗಳನ್ನು ವರದಿ ಉಲ್ಲೇಖೀಸಿದೆ.

Advertisement

ವಿಶ್ವವ್ಯಾಪಿ ಬೆಳೆದ ಉಗ್ರ ಸಂಘಟನೆಗಳು
ಜೈಷ್‌-ಎ-ಮೊಹಮ್ಮದ್‌, ಅಫ್ಘಾನ್‌ ಸಪೋರ್ಟ್‌ ಕಮಿಟಿ, ಲಷ್ಕರ್‌-ಐ-ಜಿಂ Ì, ಅಲ್‌-ಅಖ್ತರ್‌ ಟ್ರಸ್ಟ್‌ ಇಂಟರ್‌ನ್ಯಾಶನಲ್‌, ಹರ್ಕತುಲ್‌ ಜೆಹಾದ್‌, ಇಸ್ಲಾಮಿ, ತೆಹ್ರೀಕ್‌-ಐ-ತಾಲಿಬಾನ್‌, ಜಮಾತುಲ್‌ ಅಹ್ರಾರ್‌ ಮತ್ತು ಖಟಿಬಾ ಇಮಾಮ್‌ ಅಲ್‌-ಬುಖಾರಿ ಹೆಸರಿನ ಸಂಘಟನೆಗಳೆಲ್ಲವೂ ಉಗ್ರ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಅಲ್ಲದೆ ಕೆಲವು ಸಂಘಟನೆಗಳು ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನ ಗಡಿ ಪ್ರದೇಶದಲ್ಲಿ ಕಾರ್ಯಾ ಚರಣೆ ನಡೆಸುತ್ತಿವೆ ಎಂದಿದೆ. ಪಾಕಿಸ್ಥಾನ ನಾಗರಿಕರ ಜತೆ ನಿಕಟ  ಸಂಪರ್ಕ ಇರುವ ಕೆಲವು ವ್ಯಕ್ತಿಗಳ ಹೆಸರುಗಳೂ ಸೇರಿವೆ.

Advertisement

Udayavani is now on Telegram. Click here to join our channel and stay updated with the latest news.

Next