Advertisement

ಭಾರತದಿಂದ ಇನ್ನು 20 ವರ್ಷ ಶೇ.8ರ ಪ್ರಗತಿ ಸಾಧ್ಯ: UN ವಿಶ್ವಾಸ

11:56 AM Dec 18, 2017 | udayavani editorial |

ವಾಷಿಂಗ್ಟನ್‌ : ದೇಶದ ಜನಜೀವನ ಮಟ್ಟವನ್ನು ಗಮನಾರ್ಹವಾಗಿ ಸುಧಾರಿಸಿರುವ ಹಾಗೂ ಹೂಡಿಕೆಗೆ ವಿಶೇಷ ಉತ್ತೇಜನ ನೀಡಿರುವ ಕಾರಣ ಭಾರತ ಮುಂದಿನ ಎರಡು ದಶಕಗಳ ಕಾಲ ಶೇ.8ರ ಆರ್ಥಿಕ ಪ್ರಗತಿಯನ್ನು (ಜಿಡಿಪಿ) ಸಾಧಿಸಿ ಕಾಯ್ದುಕೊಳ್ಳಬಲ್ಲುದು ಎಂದು ವಿಶ್ವಸಂಸ್ಥೆಯ ಹಿರಿಯ ಆರ್ಥಿಕ ಪರಿಣತ  ಅಧಿಕಾರಿಯೋರ್ವರು ಹೇಳಿದ್ದಾರೆ.

Advertisement

ಭಾರತದ ಹಾಲಿ ಆರ್ಥಿಕ ಸ್ಥಿತಿಗತಿ ಬಹುಮಟ್ಟಿಗೆ ಧನಾತ್ಮಕವಾಗಿದೆ ಮತ್ತು ಇದು ಇನ್ನಷ್ಟು ಉತ್ತಮ ಪ್ರಗತಿ ಸಾಧನೆಗೆ ಅನುಕೂಲಕರವಾಗಿದೆ. ಆದರೆ ಭಾರತ ಈ ಹಂತದಲ್ಲೇ ಮುಂದಿನ ಮಟ್ಟದ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಆರ್ಥಿಕ ವ್ಯವಹಾರಗಳ ಹಿರಿಯ ಅಧಿಕಾರಿ ಸೆಬಾಸ್ಟಿಯನ್‌ ವರ್ಗಾರಾ ಹೇಳಿದ್ದಾರೆ.

ಭಾರತ ಈಗ ಸಾಧಿಸಿರುವ ತನ್ನ ಆರ್ಥಿಕ ಪ್ರಗತಿಯನ್ನು ದೀರ್ಘಾವಧಿಯಲ್ಲಿ ಉಳಿಸಿಕೊಳ್ಳುವ ಬಗೆ ಹೇಗೆ ಎಂಬುದನ್ನು ಈಗಲೇ ಚಿಂತಿಸಬೇಕು ಮತ್ತು ಆ ದಿಶೆಯಲ್ಲಿ ಸೂಕ್ತವಾದ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗೆ ಮಾಡಿದಲ್ಲಿ ಮುಂದಿನ 20 ವರ್ಷಗಳ ಕಾಲ ಭಾರತ ತನ್ನ ಆರ್ಥಿಕ ಪ್ರಗತಿಯನ್ನು  (ಜಿಡಿಪಿ) ಶೇ.8ರ ಮಟ್ಟದಲಿ ಉಳಿಸಿಕೊಳ್ಳಬಹುದು ಎಂದು ವರ್ಗಾರಾ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next