Advertisement

ಕುಲಭೂಷಣ್‌ಗೆ ಪಾಕ್‌ ಗಲ್ಲು: ಪ್ರಶ್ನೆಯಿಂದ ನುಣುಚಿಕೊಂಡ ವಿಶ್ವಸಂಸ್ಥೆ

03:56 PM Apr 13, 2017 | Team Udayavani |

ಇಸ್ಲಾಮಾಬಾದ್‌ : ಭಾರತೀಯ ಬೇಹುಗಾರನೆಂದು ಆರೋಪಿಸಲ್ಪಟ್ಟ ಕುಲಭೂಷಣ್‌ ಜಾಧವ್‌ಗೆ ಪಾಕಿಸ್ಥಾನ ಗಲ್ಲು ಶಿಕ್ಷೆ ನೀಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ವಿಶ್ವಸಂಸ್ಥೆ  ಉತ್ತರ ನೀಡದೆ ನುಣುಚಿಕೊಂಡಿದೆ. ‘ಜಾಧವ್‌ ಪ್ರಕರಣವನ್ನು ವಿಶ್ಲೇಷಿಸುವ, ತೀರ್ಮಾನಿಸುವ ಸ್ಥಿತಿಯಲ್ಲಿ ತಾನಿಲ್ಲ’ ಎಂದು ಅದು ಹೇಳಿದೆ.

Advertisement

“ಜಾಧವ್‌ಗೆ ಪಾಕಿಸ್ಥಾನ ಗಲ್ಲು ಶಿಕ್ಷೆ ನೀಡಿರುವ ಪ್ರಕರಣದಲ್ಲಿ  ನಮ್ಮದೇ ಆದ ನಿಲುವನ್ನು ಹೊಂದುವ ಸ್ಥಿತಿಯಲ್ಲಿ ನಾವಿಲ್ಲ; ಈ ಪ್ರಕರಣವನ್ನು ವಿಶ್ಲೇಷಿಸುವ ಸ್ಥಿತಿಯಲ್ಲೂ ನಾವಿಲ್ಲ’ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಗಳ ವಕ್ತಾರ ಸ್ಟೀಫ‌ನ್‌ ಡ್ಯುಜಾರಿಕ್‌ ಅವರು ಪ್ರಶ°ಕನೋರ್ವನಿಗೆ ನೀಡಿರುವ ಉತ್ತರವನ್ನು ಡಾನ್‌ ಉಲ್ಲೇಖೀಸಿ ವರದಿ ಮಾಡಿದೆ. 

ಭಾರತ – ಪಾಕಿಸ್ಥಾನದ ಒಟ್ಟಂದದ ವಿಚಾರದಲ್ಲಿ ನಾವು ಈಗಲೂ ಒತ್ತಿ ಹೇಳುವುದೇನೆಂದರೆ ಉಭಯ ದೇಶಗಳು ತಮ್ಮೊಳಗಿನ ಎಲ್ಲ ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತ ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಂಡು ಈ ವಲಯದಲ್ಲಿ ಶಾಂತಿ ಪುನಃಸ್ಥಾಪನೆಗೆ ಯತ್ನಿಸಬೇಕು ಎಂಬುದೇ ಆಗಿದೆ’ ಎಂದು ವಿಶ್ವಸಂಸ್ಥೆ ಹೇಳಿದೆ.  
 

Advertisement

Udayavani is now on Telegram. Click here to join our channel and stay updated with the latest news.

Next