ಯುಎನ್‌ಎಚ್‌ಆರ್‌ಸಿ ವರದಿ ಬಹಿರಂಗವಾದಾಗಿನಿಂದಲೂ ವಿಶ್ವಸಂಸ್ಥೆಯಲ್ಲಿ ಪ್ರಬಲವಾಗಿವಾದ ಮುಂದುವರಿಸಿರುವ ಭಾರತ, ಶುಕ್ರವಾರವೂ ಇದೊಂದು ವೈಯಕ್ತಿಕ ವರದಿಯಾಗಿದ್ದು, ಒಪ್ಪಿಕೊಳ್ಳುವ ಮಾತೇ ಇಲ್ಲ ಎಂದು ಪುನರುಚ್ಚರಿಸಿದೆ.
Advertisement
ಗುರುವಾರ ರಾತ್ರಿ ಪತ್ರಕರ್ತರ ಜತೆ ಮಾತನಾಡಿದ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟಾನಿಯೋ ಗುಟೆರಸ್, ಮಾನವ ಹಕ್ಕುಗಳ ಸಮಿತಿಯ ಅಧ್ಯಕ್ಷ ಝೈದ್ ರಾದ್ ಅಲ್ ಹುಸೇನ್ ಅವರ ವರದಿ ಒಪ್ಪಿಕೊಳ್ಳುವ ಸುಳಿವು ನೀಡಿದರು. ಎಲ್ಲ ಸಂಗತಿಗಳನ್ನು ಅಧ್ಯಯನ ಮಾಡಿಯೇ ಈ ವರದಿ ನೀಡಿದ್ದಾರೆ. ಅಲ್ಲಿನ ರಾಜಕೀಯ ಸ್ಥಿತಿಗಳೇನಾದರೂ ಇರಲಿ. ಆದರೂ ಈ ವರದಿ ಒಪ್ಪಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
Related Articles
ಕಾಶ್ಮೀರದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿದೆ ಎಂಬ ವರದಿ ಕೊಟ್ಟಿರುವ ಯುಎನ್‌ಎಚ್ಚಾರ್ಸಿ ಅಧ್ಯಕ್ಷರಿಗೆ ಸಂಪೂರ್ಣವಾಗಿ ಸಹಾಯ ಮಾಡಿರುವುದು ಪಾಕಿಸ್ತಾನ ಮೂಲಕ ಕೆನಡಾದಲ್ಲಿರುವ ಪತ್ರಕರ್ತ. ಈತನೇ ಒಪ್ಪಿಕೊಂಡಿರುವ ಪ್ರಕಾರ, ಝೈದಿಗೆ ವರದಿ ತಯಾರಿಸಲು ಎಲ್ಲಾ ರೀತಿಯ ಸಹಾಯ ಮಾಡಿದ್ದಾನೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿಯೇ ಭಾರತ ಇದೊಂದು ತೀರಾ ವೈಯಕ್ತಿಕ ಮಟ್ಟದಲ್ಲಿ ಸಿದ್ಧ ಮಾಡಿರುವ ವರದಿ ಎಂದು ಹೇಳಿಕೊಂಡು ಬರುತ್ತಿದೆ.
Advertisement