Advertisement

ಪ್ರತ್ಯೇಕತಾವಾದಿ, ನಕ್ಸಲರಿಂದ ಮಕ್ಕಳ ನೇಮಕಾತಿಗೆ ಕಳವಳ

06:35 AM Oct 08, 2017 | |

ವಿಶ್ವಸಂಸ್ಥೆ: ಭಾರತದಲ್ಲಿ ಪ್ರತ್ಯೇಕತಾವಾದಿಗಳು ಮತ್ತು ನಕ್ಸಲರು ಮಕ್ಕಳನ್ನು ತಮ್ಮ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುತ್ತಿರುವ ಕುರಿತು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್‌ ಆತಂಕ ವ್ಯಕ್ತಪಡಿಸಿದ್ದಾರೆ.

Advertisement

ಸಶಸ್ತ್ರ ಬಂಡುಕೋರರು ಮತ್ತು ಸರ್ಕಾರದ ನಡುವೆ ಹಿಂಸಾಚಾರದಂಥ ಘಟನೆಗಳು ನಡೆದಾಗಲೆಲ್ಲಾ ಮಕ್ಕಳು ಬಲಿಪಶುಗಳಾಗುತ್ತಾರೆ. ಮುಖ್ಯವಾಗಿ ಇಂಥ ಘಟನೆಗಳು ಛತ್ತೀಸ್‌ಗಢ, ಜಾರ್ಖಂಡ್‌ ಮತ್ತು ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿವೆ ಎಂದಿದ್ದಾರೆ. ಸಶಸ್ತ್ರ ಗುಂಪುಗಳು ಮಕ್ಕಳನ್ನು ನೇಮಕ ಮಾಡಿಕೊಳ್ಳುವ ಮತ್ತು ಹಿಂಸಾಚಾರದಲ್ಲಿ ಬಳಸಿಕೊಳ್ಳುವ ಕುರಿತು ನಮಗೆ ಭಾರತದಿಂದ ವರದಿಗಳು ಬರುತ್ತಲೇ ಇವೆ ಎಂದು “ಮಕ್ಕಳ ವಿರುದ್ಧ ಶಸ್ತ್ರಾಸ್ತ್ರ ಹಿಂಸಾಚಾರ’ ಕುರಿತ ವಾರ್ಷಿಕ ವರದಿಯಲ್ಲಿ ಅವರು ಹೇಳಿದ್ದಾರೆ. ಕಣಿವೆ ರಾಜ್ಯದಲ್ಲಿ ಸಶಸ್ತ್ರ ಗುಂಪುಗಳು ಕನಿಷ್ಠ 30 ಶಾಲೆಗಳನ್ನು ಸುಟ್ಟು ಹಾಕಿವೆ. ಛತ್ತೀಸ್‌ಗಢದಂಥ ರಾಜ್ಯ ಗಳಲ್ಲಿ ಹಲವು ಶಾಲೆಗಳನ್ನು ನಕ್ಸಲರೇ ನಿರ್ವಹಿಸುತ್ತಿದ್ದಾರೆ. ಪಠ್ಯಕ್ರಮಗಳಲ್ಲಿ ಸಮರಕಲೆಗಳನ್ನು ಸೇರಿಸಲಾಗಿದೆ. ಇದು ಕಳವಳಕಾರಿ ಸಂಗತಿ ಎಂದಿದ್ದಾರೆ ಗುಟೆರಸ್‌.

Advertisement

Udayavani is now on Telegram. Click here to join our channel and stay updated with the latest news.

Next