Advertisement

‘ಸಿಡ್ನಿ ಟೆಸ್ಟ್‌ನಲ್ಲಿ ಎರಡು ಎಡವಟ್ಟು ಮಾಡಿದ್ದೆ’: ಸ್ಟೀವ್‌ ಬಕ್ನರ್

02:03 AM Jul 20, 2020 | Hari Prasad |

ಹೊಸದಿಲ್ಲಿ: ಭಾರತ-ಆಸ್ಟ್ರೇಲಿಯ ನಡುವಿನ 2008ರ ಸಿಡ್ನಿ ಟೆಸ್ಟ್‌ ಪಂದ್ಯ ಹಗರಣಗಳಿಂದಲೇ ಸುದ್ದಿಯಾಗಿತ್ತು.

Advertisement

ಅಂಪಾಯರ್‌ಗಳಾದ ಸ್ಟೀವ್‌ ಬಕ್ನರ್‌ ಮತ್ತು ಮಾರ್ಕ್‌ ಬೆನ್ಸನ್‌ ಮಾಡಿದ ಎಡವಟ್ಟುಗಳು, ಸೈಮಂಡ್ಸ್‌-ಹರ್ಭಜನ್‌ ಒಳಗೊಂಡ ‘ಮಂಕಿಗೇಟ್‌’ ಪ್ರಕರಣವೆಲ್ಲ ಈ ಪಂದ್ಯಕ್ಕಷ್ಟೇ ಅಲ್ಲ, ಕ್ರಿಕೆಟಿಗೇ ಕಳಂಕವಾಗಿ ಉಳಿದಿದೆ.

12 ವರ್ಷಗಳ ಹಿಂದಿನ ಈ ಪಂದ್ಯವನ್ನು ಆಸ್ಟ್ರೇಲಿಯ ನಾಟಕೀಯ ರೀತಿಯಲ್ಲಿ ಜಯಿಸಿತ್ತು. ಈ ಸಂದರ್ಭದಲ್ಲಿ ತಾನು ನೀಡಿದ ಎರಡು ತಪ್ಪು ತೀರ್ಪುಗಳನ್ನು ಸ್ಟೀವ್‌ ಬಕ್ನರ್‌ ಒಪ್ಪಿಕೊಂಡಿದ್ದಾರೆ.

‘ಮೊದಲ ತಪ್ಪು, ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದಾಗ ಸಂಭವಿಸಿತು. ಎರಡನೇ ತಪ್ಪು, ಪಂದ್ಯದ 5ನೇ ದಿನ ಕಂಡುಬಂತು. ಇದರಿಂದ ಭಾರತಕ್ಕೆ ಬಹಳ ನಷ್ಟವಾಯಿತು. ಆದರೆ ಟೆಸ್ಟ್‌ ಪಂದ್ಯವೊಂದರಲ್ಲಿ ಎರಡು ತಪ್ಪು ಮಾಡಿದ ಅಂಪಾಯರ್‌ ನಾನೊಬ್ಬನೆಯೇ ಎಂದು ಕೇಳಿಕೊಂಡರೂ ಇವು ಈಗಲೂ ನನ್ನನ್ನು ಕಾಡುತ್ತಿವೆ’ ಎಂದು ಬಕ್ನರ್‌ ಹೇಳಿದ್ದಾರೆ.

ಸೈಮಂಡ್ಸ್‌ಗೆ ಜೀವದಾನ
ಪಂದ್ಯದ ಮೊದಲ ದಿನದಾಟದಲ್ಲಿ ಬಕ್ನರ್‌ ನೀಡಿದ ತೀರ್ಪಿನಿಂದ ಸೈಮಂಡ್ಸ್‌ ಸ್ಟಂಪ್ಡ್ ಆಗುವುದರಿಂದ ಬಚಾವಾಗಿದ್ದರು. 6ಕ್ಕೆ 135ರಲ್ಲಿದ್ದ ಆಸೀಸ್‌, ಸೈಮಂಡ್ಸ್‌ ಅವರ 160 ರನ್‌ ಸಾಹಸದಿಂದ 463ರ ತನಕ ಸಾಗಿತ್ತು. 5ನೇ ದಿನ 333 ರನ್‌ ಗುರಿ ಪಡೆದಿದ್ದ ಭಾರತ ಉತ್ತಮ ಸ್ಥಿತಿಯಲ್ಲಿತ್ತು.

Advertisement

ಆಗ ದ್ರಾವಿಡ್‌ ವಿರುದ್ಧ ಕಾಟ್‌ ಬಿಹೈಂಡ್‌ ತೀರ್ಪು ಬಂತು. ಆದರೆ ಚೆಂಡು ದ್ರಾವಿಡ್‌ ಪ್ಯಾಡ್‌ ಸವರಿ ಹೋಗಿತ್ತು. ಪಂದ್ಯ ಭಾರತದ ಕೈಜಾರಿತು. ‘ಬಲವಾದ ಗಾಳಿ ಬೀಸುವಾಗ, ವೀಕ್ಷಕರ ಕೂಗು ವಿರೀತವಾಗಿರುವಾಗ ಇಂಥ ತಪ್ಪು ಸಂಭವಿಸುವುದು ಸಹಜ. ಆದರೆ ಇದು ಸಮರ್ಥನೆ ಅಲ್ಲ’ ಎಂಬುದಾಗಿ ಸ್ಟೀವ್‌ ಬಕ್ನರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next