Advertisement
ಸಿಡ್ನಿ ಪಂದ್ಯದ ಮೂರನೇ ದಿನದಾಟದಲ್ಲಿ ರವೀಂದ್ರ ಜಡೇಜಾ ಬೌಲಿಂಗ್ ಗೆ ಬ್ಯಾಟಿಂಗ್ ಮಾಡುತ್ತಿದ್ದ ಆಸೀಸ್ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ಹೊಡೆದ ಚೆಂಡನ್ನು ರಾಹುಲ್ ಡೈವ್ ಹೊಡೆದು ಆಕರ್ಷಕ ರೀತಿಯಲ್ಲಿ ಹಿಡಿದಿದ್ದರು. ಈ ವೇಳೆ ಬೌಲರ್ ಜಡೇಜಾ ಸೇರಿದಂತೆ ಭಾರತೀಯ ಆಟಗಾರರು ಮೊದಲ ವಿಕೆಟ್ ಪಡೆದ ಖುಷಿಯಲ್ಲಿ ಸಂಭ್ರಮಿಸಿದ್ದರು. ಆದರೆ ತಕ್ಷಣ ಕೆ.ಎಲ್.ರಾಹುಲ್ ಚೆಂಡು ನೆಲಕ್ಕೆ ತಾಗಿದೆ, ಔಟ್ ಇಲ್ಲ ಎಂದು ಸನ್ನೆ ಮಾಡಿದರು.
ಕನ್ನಡಿಗನ ಕ್ರೀಡಾ ಸ್ಪೂರ್ತಿಗೆ ಅಂಪೈರ್ ಇಯಾನ್ ಗೂಲ್ಡ್ ಮೆಚ್ಚುಗೆ ಸೂಚಿಸಿದ್ದಾರೆ. ಮೂರನೇ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 236 ರನ್ ಗಳಿಸಿದೆ. ಭಾರತ 386 ರನ್ ಗಳ ಬೃಹತ್ ಮುನ್ನಡೆ ಹೊಂದಿದೆ. ಆಸೀಸ್ ಪರ ಮಾರ್ಕಸ್ ಹ್ಯಾರಿಸ್ ಗರಿಷ್ಠ 79 ರನ್ ಗಳಿಸಿದರೆ, ಭಾರತದ ಕುಲದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರು.