Advertisement

ಉಮೇಶ್‌ ಶೆಟ್ಟಿ ಕೊಲೆ: ನಾಲ್ವರ ಸೆರೆ

03:45 AM Jan 12, 2017 | Harsha Rao |

ಮಂಗಳೂರು: ಕಿನ್ನಿಗೋಳಿಯ ಯುವ ಉದ್ಯಮಿ ಕಿಲೆಂಜೂರು ಗ್ರಾಮದ ಉಮೇಶ್‌ ಶೆಟ್ಟಿ (30) ಅವರ ನಿಗೂಢ ಸಾವು ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇದು ಆಪ್ತ ಸ್ನೇಹಿತನು ತನ್ನ ಸಹಚರರ ಜತೆಗೂಡಿ ಹಣಕ್ಕಾಗಿ ವ್ಯವಸ್ಥಿತಧಿವಾಗಿ ಎಸಗಿದ ಕೊಲೆ ಪ್ರಕರಣ ಎಂಬುದನ್ನು ಪತ್ತೆಹಚ್ಚಿ 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಮಂಗಳೂರು ತಾಲೂಕು ನಡುಧಿಗೋಡು ಗ್ರಾಮದ ಕೊಡೆಧಿತ್ತೂರು ಪ್ರಸಾದ್‌ ಆಚಾರ್ಯ (27), ನಿಡ್ಡೋಡಿ
ಗ್ರಾಮದ ರಾಜೇಶ ಶೆಟ್ಟಿ (32), ತಿಲಕ್‌ ಪೂಜಾರಿ (26) ಮತ್ತು ಚಿಕ್ಕಮಗಧಿಳೂರು ಮೂಡಿಧಿಗೆರೆ ತಾಲೂಕಿನ ಎಸ್‌. ಗಲ್‌. ಗ್ರಾಮದ ಪ್ರಕಾಶ್‌ (28) ಬಂಧಿತರು. 

ಆರೋಪಿಗಳಾದ ಪ್ರಸಾದ್‌ ಆಚಾರ್ಯ, ರಾಜೇಶ್‌ ಶೆಟ್ಟಿ ಮತ್ತು ತಿಲಕ್‌ ಪೂಜಾರಿ ಅವರು ಸುರತ್ಕಲ್‌ನ ಎಂಆರ್‌ಪಿಎಲ್‌ ಮತ್ತು ಪಣಂಧಿಬೂರಿನ ಎಂಸಿಎಫ್‌ ಕಾರ್ಖಾನೆಯ ಕ್ರೇನ್‌ ಆಪರೇಟರ್‌ಗಳಾಗಿದ್ದರು. ಪ್ರಕಾಶ್‌ ಮೂಡಿಗೆರೆಯಲ್ಲಿ ಮರದ ಕೆಲಸ ಮಾಡುತ್ತಿದ್ದನು. 

ಪೊಲೀಸ್‌ ಆಯುಕ್ತ ಎಂ. ಚಂದ್ರಶೇಖರ್‌ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ವಿವರ ನೀಡಿದರು. 
ಉಮೇಶ್‌ ಶೆಟ್ಟಿ ಮಂಗಳೂರಿನ ಕುಳಾçಯಲ್ಲಿ ಪ್ರಭಾವತಿ ಟ್ರಾನ್ಸ್‌ ಪೋರ್ಟ್‌ ಎಂಬ ಸರಕು ಸಾಗಾಟ ಸಂಸ್ಥೆಯನ್ನು ನಡೆಸುತ್ತಿದ್ದು, ಪ್ರತಿದಿನ ಕಿನ್ನಿಗೋಳಿಯಿಂದ ಬೆಳಗ್ಗೆ ಬಸ್‌ನಲ್ಲಿ ಕುಳಾçಗೆ ಬಂದು ಸಂಜೆ ಹಿಂದಿರುಗುತ್ತಿದ್ದರು. 2016ರ ಡಿ. 28ರಂದು ಎಂದಿನಂತೆ ಕುಳಾçಯ ಟ್ರಾನ್ಸ್‌ಪೋರ್ಟ್‌ ಕಚೇರಿಯಲ್ಲಿ ಕೆಲಸ ಮುಗಿಸಿ ಸಂಜೆ ತಾನು ದಿನ ನಿತ್ಯ ಬರುತ್ತಿದ್ದ ಸರ್ವಾಣಿ ಬಸ್‌ನಲ್ಲಿ ಕಿಲೆಂಜೂರಿಗೆ ಹೊರಟಿದ್ದು, ದಾರಿ ಮಧ್ಯೆ ಪಕ್ಷಿಕೆರೆಯಲ್ಲಿ ಇಳಿದ ಬಳಿಕ ಮನೆಗೆ ತಲುಪದೆ ಕಾಣೆಯಾಗಿದ್ದರು. ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಉಮೇಶ್‌ ಶೆಟ್ಟಿ ನಿಗೂಢವಾಗಿ ಸಾವನ್ನಪ್ಪಿದ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ತನಿಖೆ ಕೈಗೆತ್ತಿಕೊಂಡಾಗ ಕೆಲವು ಸುಳಿವು ಸಿಕ್ಕಿದ್ದವು. 

Advertisement

ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ತನಿಖೆ ನಡೆಸುತ್ತಿದ್ದಂತೆ ಜ. 1ರಂದು ಉಮೇಶ್‌ ಶೆಟ್ಟಿ ಅವರ ಮೃತದೇಹ ಮೂಡಬಿದಿರೆ ಪೊಲೀಸ್‌ ಠಾಣೆ ವ್ಯಾಪ್ತಿಯ ಕಲ್ಲಮುಂಡ್ಕೂರು ಗ್ರಾಮದ ನಿಡ್ಡೋಡಿ ದಡ್ಡು ನಿರ್ಜನ ಪ್ರದೇಶದ ಹಾಡಿಯಲ್ಲಿ ಕಂಡು ಬಂದಿತ್ತು.

ಉಮೇಶ್‌ ಶೆಟ್ಟಿ ಅವರ ಸೋದರ ನಾಗರಾಜ ನೀಡಿದ ದೂರಿಧಿನಂತೆ ಮೂಡಬಿದಿರೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದರು. 

ಉಮàಶ್‌ ಶೆಟ್ಟಿ ಸಾವಿನ ಬಗ್ಗೆ ಮತ್ತಷ್ಟು ಸಂಶಯಗಳು ಕಂಡು ಬಂದ ಕಾರಣ ಮಂಗಳೂರು ಉತ್ತರ (ಪಣಂಬೂರು) ಎಸಿಪಿ ರಾಜೇಂದ್ರ ಡಿ.ಎಸ್‌. ಅವರ ನೇತೃತ್ವದಲ್ಲಿ ಮೂಲ್ಕಿ ಮತ್ತು ಮೂಡಬಿದಿರೆ ಪೊಲೀಸ್‌ ಠಾಣೆಯ ಅಧಿಕಾರಿಗಳು ಮತ್ತು ಸಿಬಂದಿಯನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು ಎಂದು ಆಯುಕ್ತರು ವಿವರಿಸಿದರು. 
ತನಿಖಾ ತಂಡವು ವಿವಿಧ ಆಯಾಮಧಿಗಳಲ್ಲಿ ತನಿಖೆ ನಡೆಸಿ ನಾಲ್ವರನ್ನು ಬಂಧಿಸಿದೆ.

ಉಮೇಶ್‌ ಶೆಟ್ಟಿ ಹತ್ಯೆ ಪ್ರಕರಣದ ಪತ್ತೆಗೆ ಎಸಿಪಿ ರಾಜೇಂದ್ರ ಡಿ.ಎಸ್‌. ಅವರ ಜತೆಗೆ ಮೂಲ್ಕಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಅನಂತ ಪದ್ಮನಾಭ, ಮೂಡಬಿದಿರೆ ಪೊಲೀಸ್‌ ಇನ್ಸ್‌ಪೆಕ್ಟರ್‌ ರಾಮಚಂದ್ರ ನಾಯಕ್‌, ಸಬ್‌ ಇನ್ಸ್‌
ಪೆಕ್ಟರ್‌ ದೇಜಪ್ಪ, ಪ್ರೊಬೇಷನರಿ ಪಿ.ಎಸ್‌.ಐ ಮಾರುತಿ, ಹೆಡ್‌ ಕಾನ್‌ಸ್ಟೆಬಲ್‌ ಚಂದ್ರಶೇಖರ್‌, ಧರ್ಮೇಂದ್ರ, ಸಿಬಂದಿ ರಾಜೇಶ, ಅಣ್ಣಪ್ಪ, ಸುಧೀರ್‌, ಬಸವರಾಜ್‌, ಅಕಿಲ್‌, ಸುಜನ್‌, ಶಿವಕುಮಾರ್‌ ಅವರು ಸಹಕರಿಸಿದ್ದರು. 

ತಂಡಕ್ಕೆ ಬಹುಮಾನ
ಪತ್ತೆ ತಂಡಕ್ಕೆ 15,000 ರೂ. ನಗದು ಬಹುಮಾನ ಮತ್ತು ಪ್ರಶಂಸಾ ಪತ್ರಧಿವನ್ನು ನೀಡಲಾಗುವುದು ಎಂದು ಪೊಲೀಸ್‌ ಆಯುಕ್ತ ಎಂ. ಚಂದ್ರಶೇಖರ್‌ ಪ್ರಕಟಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಕೆ.ಎಂ. ಶಾಂತರಾಜು ಮತ್ತು ಡಾ| ಸಂಜೀವ್‌ ಎಂ. ಪಾಟೀಲ್‌, ಎಸಿಪಿ ರಾಜೇಂದ್ರ ಡಿ.ಎಸ್‌. ಮತ್ತು ವೆಲೆಂಟೈನ್‌ ಡಿ’ಸೋಜಾ ಹಾಗೂ ಪತ್ತೆ ತಂಡದ ಅಧಿಕಾರಿ, ಸಿಬಂದಿ ಉಪಸ್ಥಿತರಿದ್ದರು.

ಸಾಲ ಪಡೆದ ಸ್ನೇಹಿತನಿಂದಲೇ ಕೊಲೆ
ಆರೋಪಿ ಪ್ರಸಾದ್‌ ಆಚಾರ್ಯ ಮತ್ತು ಉಮೇಶ್‌ ಶೆಟ್ಟಿ ಅವರ ಸಹೋದರ ನಾಗರಾಜ್‌ ಸ್ನೇಹಿತರಾಗಿದ್ದು, ಪ್ರಸಾದ್‌ ಆಚಾರ್ಯ ಆಗಿಂದಾಗ್ಗೆ ಮನೆಗೆ ಬಂದು ಹೋಗುತ್ತಿದ್ದನು. ಇದರಿಂದ ಉಮೇಶ್‌ ಶೆಟ್ಟಿ ಅವರಿಗೂ ಆತನ ಪರಿಚಯವಾಗಿತ್ತು. ಪರಿಚಯ ಗೆಳೆತನಕ್ಕೆ ತಿರುಗಿ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. 

ಈತನ್ಮಧ್ಯೆ ಮನೆಯ ಆಸ್ತಿ ಮಾರಾಟದಿಂದ ಉಮೇಶ್‌ ಶೆಟ್ಟಿ ಅವರಿಗೆ ಲಕ್ಷಾಂತರ ರೂಪಾಯಿ ಹಣ ಬಂದಿತ್ತು. ಗೆಳೆಯ ಪ್ರಸಾದ್‌ ಆಚಾರ್ಯ ತನಗೆ ಮನೆ ಕಟ್ಟಿಸಲು ಸಾಲ ಕೊಡುವಂತೆ ಕೇಳಿದಾಗ ಉಮೇಶ್‌ ಶೆಟ್ಟಿ 30 ಲಕ್ಷ ರೂ.ಗಳನ್ನು ನೀಡಿದ್ದರು. ಟ್ರಾನ್ಸ್‌ಪೊàರ್ಟ್‌ ವ್ಯವಹಾರ ನಡೆಸುತ್ತಿದ್ದ ಉಮೇಶ್‌ ಶೆಟ್ಟಿ ತನ್ನಲ್ಲಿರುವ ಹಣವನ್ನು ಕಲ್ಲಿನಕೋರೆಗೆ ಹೂಡಿಕೆ ಮಾಡಲು ಉದ್ದೇಶಿಸಿದ್ದರು. ಉಮೇಶ್‌ ಶೆಟ್ಟಿ ಕೊಟ್ಟ ಹಣವನ್ನು ವಾಪಸ್‌ ಕೇಳಲಾರಂಭಿಸಿದ್ದರಿಂದ ಅವರನ್ನು ಮುಗಿಸಲು ಪ್ರಸಾದ್‌ ಆಚಾರ್ಯ ಸಂಚು ಹೂಡಿದ್ದರು. ಹಾಗೆ ಡಿ. 28ರಂದು ಸಂಜೆ ಉಮೇಶ್‌ ಶೆಟ್ಟಿ ಕುಳಾಯಿಯಿಂದ ಬಸ್ಸಿನಲ್ಲಿ ವಾಪಸ್‌ ಮನೆಗೆ ಪ್ರಯಾಣಿಸುತ್ತಿದ್ದಾಗ ಅವರನ್ನು ಕಲ್ಲಿನ ಕೋರೆ ತೋರಿಸುವ ನೆಪದಲ್ಲಿ ಪಕ್ಷಿಕೆರೆಯಲ್ಲಿ ಇಳಿಸಿ ರಿಟ್ಜ್ ಕಾರಿನಲ್ಲಿ ಕರೆದುಕೊಂಡು ಕುದ್ರಿ ಪದವು ಎಂಬಲ್ಲಿಗೆ ಹೋಗಿ ಅಲ್ಲಿ ರಾಜೇಶ್‌ ಶೆಟ್ಟಿ, ತಿಲಕ್‌ ಪೂಜಾರಿ , ಪ್ರಕಾಶ್‌ ಆಚಾರಿ ಅವರೊಂದಿಗೆ ಸೇರಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಆರೋಪಿಗಳು ಮೃತ ದೇಹವನ್ನು 10 ಕಿ.ಮೀ. ದೂರದ ನಿಡ್ಡೋಡಿ ದಡ್ಡಿಯ ಎತ್ತರ ಕಾಡು ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next