Advertisement

ಮಳೆ, ಬಿಸಿಲಿಗೆ ಎಲ್ಲರ ಆಪ್ತಮಿತ್ರ ಕೊಡೆ

06:15 AM Jul 14, 2018 | |

ಕೊಡೆ ಜೀವನದ ಅವಿ ಭಾಜ್ಯ ಅಂಗ. ಅದಕ್ಕೇ ಇರಬೇಕು ಮಳೆಗಾಲದಲ್ಲಿ ಕೊಡೆ ಬಿಟ್ಟವ ಹೆಡ್ಡ, “ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿ ಕೊಡೆ ಹಿಡಿಯುತ್ತಾನೆ’ ಮುಂತಾದ ನುಡಿಕಟ್ಟುಗಳು ಕೊಡೆಯಸುತ್ತ ಹುಟ್ಟಿಕೊಂಡಿವೆ. 
ಈ ಕೊಡೆಗಳ ಇತಿಹಾಸ ಕ್ರಿ.ಪೂ. 800ರಷ್ಟು ಹಿಂದಿನದ್ದೆಂದು ನಂಬಲಾಗಿದೆ. ಮಾನವ ಒಂದಲ್ಲಾ ಒಂದು ಹೊಸತನ್ನು ಹುಡುಕುತ್ತಾನೆ.

Advertisement

ಹಿಂದಿನ ಕಾಲದಲ್ಲಿ ಗೊರಬೆ (ಆಡು ಬಾಷೆಯಲ್ಲಿ ಕಿಡಿಂಜಲು) ಯಿಂದ ಮಳೆಗೆ ರಕ್ಷಣೆ ಪಡೆಯುತ್ತಿದ್ದರು. ಈಗ ಕೊಡೆಗಳ ಕಾಲ ಕೊಡೆ (ಪುರಾಣ) ಬಿಚ್ಚುತ್ತಾ ಹೋದರೆ 3000 ವರ್ಷಗಳ ಹಿಂದಿನ ಈಜಿಪ್ತಿನ ಭಿತ್ತಿಚಿತ್ರಗಳಲ್ಲಿ ಫರೋವಾ ರಾಜಕುಮಾರಿಯರಿಗೆ ದಾಸಿಯರು ಕೊಡೆ ಹಿಡಿದು ನಿಂತಿರುವುದನ್ನು ನೋಡಬಹುದು. 

17ನೇ ಶತಮಾನದ ವೇಳೆಗೆ ಕೊಡೆಗಳ ಬಳಕೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಕಂಡುಬಂದಿದೆ. ಕೊಡೆ ಆರಂಭದಲ್ಲಿ ಅಧಿ ಕಾರ ಗೌರವದ ಲಾಂಛನವಾಗಿತ್ತು. ಶಿನಾಜಿ ಛತ್ರಪತಿ ಎನಿಸಿದ್ದ. ದೇವರ ಮೆರವಣಿಗೆಗೂ ಕೊಡೆ ಬೇಕಾಗಿದೆ. ಈಗಲೂ ದೇವಸ್ಥಾನಗಳಲ್ಲಿ ಬಲಿಯ ಸಂದರ್ಭದಲ್ಲಿ ಓಲೆ ಕೊಡೆ ಹಿಡಿಯುವುದನ್ನು ನಾವು ಕಾಣಬಹುದು.

ದೊಡ್ಡ ಕೊಡೆ (ಅಜ್ಜನ ಕೊಡೆ) ಕೆಲವೊಂದು ಕಡೆಗಳಲ್ಲಿ ಅಪರೂಪಕ್ಕೆ ಕಾಣಸಿಗುವುದಿದೆ. ಈಗ ಸ್ಟೀಲ್‌ ಯುಗ ನಿಕ್ಕೆಲ್‌ ಸ್ಟೀಲ್‌ ಕೋಟೆಡ್‌ ಕಾಲುಗಳು ಹೊಂದಿರುವ ಕೊಡೆ ಮಡಚಿ ಕಂಕುಳನಲ್ಲೋ ಬ್ರಿàಫ್‌ಕೇಸ್‌ಗಳಲ್ಲೋ ಇಡುವಂತಹ ಚಿಕ್ಕ ಕೊಡೆ, ಬಣ್ಣದ ಆಕರ್ಷಕ  ಕೊಡೆಗÙಳ ಕಾಲ ವಿದು.  ಆದರೂ ಈ ಕಾಲದಲ್ಲಿ ಶಾಲಾ ಕಾಲೇಜುಗಳ ಹೊಸ ಹುಡುಗರು ದಿನಪತ್ರಿಕೆಗೆ ಅಥವಾ ಪುಸ್ತಕವನ್ನು ತಲೆಗೆ ಅಡ್ಡ ಹಿಡಿದು ಹೋಗುವುದನ್ನೂ ನೋಡಬಹುದು. ಮಳೆಯಿಲ್ಲದಿದ್ದರೆ ಕೊಡೆ ಮರೆತು ಹೋಗುವುದಂತೂ ಸಾಧಾರಣ. ಈ ಸಲ ಮಳೆ ಹೆಚ್ಚು. ಆದ ಕಾರಣ ಕೊಡೆಗೆ ಬೇಡಿಕೆಯೂ ಹೆಚ್ಚು.

100ರಿಂದ  750ರೂ.  
100ರಿಂದ ತೊಡಗಿ 750ರೂಗಳ ಕೊಡೆಗಳೂ ಈಗ ಮಾರುಕಟ್ಟೆಯಲ್ಲಿವೆ. ಈಗಿನ ಮಡಚುವ ಕೊಡೆಗಳುಜಪಾನ್‌ ಮತ್ತು ತೈವಾನ್‌ ಕೊಡುಗೆ. ತ್ರೀ ಫೋಲ್ಡ್‌ ಕೊಡೆಗಳಿಗೆ ಈಗ ಬೇಡಿಕೆ ಜಾಸ್ತಿ. ಜೂನ್‌ ಜುಲೈ ತಿಂಗಳಲ್ಲಿ ಕೊಡೆಗಳಿಗೆ ಅ ಧಿಕ ಬೇಡಿಕೆ. ಮದುವೆಗೆ ಕೊಡೆ ಖರೀದಿಸುವ ಸಂಪ್ರದಾಯ ಈಗಲೂ ಇದೆ. 25 ಇಂಚುಗಳ ದೊಡ್ಡ ಕೊಡೆ ಮಾರಾಟವಾಗುವುದು ಕಡಿಮೆ 19 ಇಂಚುಗಳ ಲೇಡಿಸ್‌ ಕೊಡೆಗಳಿಗೆಬೇಡಿಕೆ ಅಧಿಕ.

Advertisement

– ಪ್ರಸಾದ ಮೈರ್ಕಳ
ಚಿತ್ರ : ಶ್ಯಾಮಪ್ರಸಾದ ಸರಳಿ

Advertisement

Udayavani is now on Telegram. Click here to join our channel and stay updated with the latest news.

Next