Advertisement

160ಕ್ಕೂ ಹೆಚ್ಚಿನ ಸೇವೆ ಪಡೆಯಲು ಉಪಯೋಗಿಸಿ UMANG APP

06:09 PM Feb 15, 2018 | Sharanya Alva |

ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರವು ಸಾರ್ವಜನಿಕರ ಸೇವೆಗಳಿಗೆ  ಒಂದು ವಿಶೇಷವಾದ ಅಧಿಕೃತ ಮೊಬೈಲ್ ಆಪ್ ಸೇವೆಯನ್ನು ಬಿಡುಗಡೆ ಮಾಡಿದ್ದು, ಇನ್ಮುಂದೆ ನೀವು ಸರ್ಕಾರದ ಸೇವೆಗಳಿಗೆ ಅಲೆಯುವ ಬದಲು ಈ ಚಿಕ್ಕ ಆಪ್ ನಿಮ್ಮ ಮೊಬೈಲಿನಲಿದ್ರೆ ಸಾಕು ಭಾರತ ಸರ್ಕಾರದ 160ಕ್ಕೂ ಹೆಚ್ಚಿನ ಸೇವೆಗಳನ್ನು ಒಂದೇ ವ್ಯವಸ್ಥೆಯಲ್ಲಿ ಪಡೆದುಕೊಳ್ಳಬಹುದು.

Advertisement

ಉಮಾಂಗ್ – UMANG ( Unified Mobile Application for New-age Governance ) ಎಂಬ ಹೆಸರಿನ ಈ ಸೇವೆ ಆಂಡ್ರಾಯ್ಡ್ ಆಪ್ , ಆಪಲ್ ಆಪ್ ಹಾಗೂ ಡೇಸ್ಕ್ಟಾಪ್ ತಂತ್ರಾಂಶದಲ್ಲೂ ಲಭ್ಯವಿದೆ.

ಇದರ ಅಡಿಯಲ್ಲಿ ನೀವು ಬಳಸಬಹುದಾದಂತ ಪ್ರಮುಖ ಸೇವೆಗಳೆಂದರೆ :

ಕೇಂದ್ರ ಸರ್ಕಾರದ ಸೇವೆಗಳಾದ ಆಧಾರ್ , ಪಾನ್ ಕಾರ್ಡ್ ,ಅಡುಗೆ ಅನಿಲದ ಬುಕ್ಕಿಂಗ್ & ಸಬ್ಸಿಡಿ, ಪಿಂಚಣಿ ಹಣ, ಪಾಸ್ ಫೋರ್ಟ್ ಅರ್ಜಿ, ವಾಹನದ ದಾಖಲೆ  ಪತ್ರಗಳು , ನೌಕರರ ಕಲ್ಯಾಣ ನಿಧಿ ( EPF ಮಾಹಿತಿ ) , ರೈತರ ಸೇವೆಗಳು , ವಿದ್ಯಾರ್ಥಿ ವೇತನ, ಜಿ.ಎಸ.ಟಿ , ಉದ್ಯೋಗ ಮಾಹಿತಿ ಹಾಗೂ ಕರೆಂಟ್ ಬಿಲ್, ನೀರಿನ ಬಿಲ್, ಮೊಬೈಲ್ ರೀಚಾರ್ಜ್ ಹಾಗೂ ಆದಾಯ ತೆರಿಗೆ ಸಂದಾಯ ಸೇರಿದಂತೆ 160ಕ್ಕೂ ಹೆಚ್ಚು ಸೇವೆಗಳನ್ನು ಪಡೆಯಬಹುದಾಗಿದೆ.

Advertisement

ಈ ಸೇವೆಯನ್ನು ನೀವು ಬಳಸಿಕೊಳ್ಳಲು – ಆಪ್ ಅಥವಾ ಜಾಲತಾಣದ ಮೂಲಕ ನಿಮ್ ಫೋನ್ ನಂ ಬಳಸಿ ನೋಂದಣಿ ಮಾಡಿಕೊಳ್ಳಬೇಕು.

ನಂತರ ನಿಮ್ಮ ಆಯ್ಕೆಯ 4 ಅಂಕೆಗಳ ಪಿನ್.ನಂ ರಚಿಸಿಕೊಳ್ಳಿ , ಹಾಗೆಯೇ  ” ಆಧಾರ “ನ್ನು ಈ ಸೇವೆಗೆ ಲಿಂಕ್ ಕೂಡ ಮಾಡಬಹುದು ( ಆಧಾರ್ ಕಡ್ಡಾಯವಲ್ಲ ). ನಂತರ ನೀವು ನಿಮ್ಮ ವ್ಯಯಕ್ತಿಕ ಮಾಹಿತಿಯನ್ನು ನೀಡಿದರೆ ಯಶಸ್ವಿಯಾಗಿ ನೊಂದಣಿಯಾಗುತ್ತೀರಿ.

ಮುಂದೆ ನಿಮ್ಮ ಪರದೆಯ ಮೇಲೆ ಕಾಣುವಂತಹ ಸೇವೆಗಳ ಮೇಲೆ ಕ್ಲಿಕ್ ಮಾಡಿ – ಆ ಸೇವೆಯನ್ನು ಪಡೆಯಬಹುದು.  ಕೇಂದ್ರ ಸರ್ಕಾರ & ರಾಜ್ಯ ಸರ್ಕಾರದ ಸೇವೆಗಳನ್ನು ಆಯ್ದುಕೊಳ್ಳಲು ವಿಭಿನ್ನ ಆಯ್ಕೆಗಳು ಕೂಡ ಲಭ್ಯವಿದೆ.

ನಿಮ್ಮ ಯಾವುದೇ ಪ್ರಶ್ನೆ / ಸಮಸ್ಯೆಗಳ ಪರಿಹಾರಕ್ಕಾಗಿ ಆ “ಆಪ್” ನಲ್ಲೇ ” ಲೈವ್ ಚಾಟ್ ” ಎಂಬ ಆಯ್ಕೆಯಿದ್ದು ವಾರದ 7 ದಿನ ಬೆಳಗೆ 8 ರಿಂದ ರಾತ್ರಿ 8ರ ವರೆಗೆ ಇದರ ಸದುಪಯೋಗ ಮಾಡಿಕೊಳ್ಳಬಹುದು.

ಸದ್ಯ ಈ ಸೇವೆ ಪ್ರಾಥಮಿಕ ಹಂತದಲ್ಲಿದ್ದು ಕರ್ನಾಟಕ ರಾಜ್ಯ ಸರ್ಕಾರದ ಸೇವೆಗಳು ಅಲಭ್ಯವಾಗಿದ್ದು – ಮುಂದಿನ ದಿನಗಳಲ್ಲಿ ಸೇರ್ಪಡೆಯಾಗಲಿದೆ.

ಈ ಆಪ್ ಅನ್ನು ನಿಮ್ಮ ಮೊಬೈಲ್ಗೆ ಡೌನ್ಲೋಡ್ ಮಾಡಿಕೊಳ್ಳಲು ಈ ನಂ 97183 97183  ಗೆ ಮಿಸ್ ಕಾಲ್ ಕೊಡುವುದರ ಮೂಲಕ ಅಧಿಕೃತ ಡೌನ್ಲೋಡ್ ಲಿಂಕ್ ಪಡೆಯಬಹುದು, ಹಾಗೆಯೇ ಇದು ಪ್ಲೇಸ್ಟೋರ್ , ಆಪಲ್ ಸ್ಟೋರ್ & ವಿಂಡೋಸ್ ಸ್ಟೋರ್ ನಿಂದಲೂ ಡೌನ್ಲೋಡ್ ಮಾಡಿಕೊಳ್ಳಬಹುದು.

*ಸೂರಜ್ ಅಣ್ವೇಕರ್, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next