Advertisement

ಹೆಣ್ಣು ಮಕ್ಕಳ ಕಾರ್ಯನೀತಿ ಕರಡು ಸಿದ್ಧ ಉಮಾ ಮಹದೇವನ್‌

03:45 AM Feb 02, 2017 | Team Udayavani |

ಬೆಂಗಳೂರು: ಮಕ್ಕಳ ಹಕ್ಕುಗಳ, ಮಕ್ಕಳ ಕಾಯ್ದೆಗಳನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಯುನಿಸೆಫ್ ಜತೆಗೂಡಿ ರೂಪಿಸಿರುವ ಕರ್ನಾಟಕ ರಾಜ್ಯ ಮಕ್ಕಳ ಮತ್ತು ಹೆಣ್ಣು ಮಕ್ಕಳ ಕಾರ್ಯನೀತಿ ಕರಡು ಸಿದ್ಧಪಡಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಮಹದೇವನ್‌ ಅವರು ಹೇಳಿದ್ದಾರೆ.

Advertisement

ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ತಾರತಮ್ಯ ಮುಂದುವರಿದಿದೆ. ಹೀಗಾಗಿ ಅವರ ಹಕ್ಕುಗಳ ರಕ್ಷಣೆಗಾಗಿ ಪ್ರತ್ಯೇಕ ಕಾರ್ಯನೀತಿ ರೂಪಿಸಲಾಗುತ್ತಿದೆ. ಮಕ್ಕಳ ಮತ್ತು ಹೆಣ್ಣು ಮಕ್ಕಳ ಹೊಸ ಕಾರ್ಯನೀತಿ ಅನುಷ್ಠಾನಕ್ಕೆ ಎಲ್ಲರ ಸಲಹೆ -ಸೂಚನೆಗಳ ಅಗತ್ಯ ಇದೆ ಎಂದು ತಿಳಿಸಿದರು.

ಮಕ್ಕಳಲ್ಲಿ ಸಕಾರಾತ್ಮಕ ಧೋರಣೆಯನ್ನು ಅವರ ಹೆತ್ತವರು, ಶಿಕ್ಷಕರು ಬೆಳೆಸಬೇಕು. ಮಕ್ಕಳ ವಿರುದ್ಧದ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಲೈಂಗಿಕ ಶೋಷಣೆ ಮೊದಲಾದವುಗಳ ತಡೆಗೆ ಇಲಾಖೆ ಮತ್ತು ಸಮಾಜ ಪಣ ತೊಡಬೇಕಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next