Advertisement
ಹಲವಾರು ರಾಜ್ಯ ವಿಧಾನಸಭಾ ಚುನಾವಣೆಗಳು ಹಾಗೂ ಆ ಬಳಿಕ ನಡೆಯಲಿರುವ 2019ರ ಮಹಾ ಚುನಾವಣೆಗೆ ಸಿದ್ಧತೆಯ ರೂಪದಲ್ಲಿ ಸಚಿವ ಸಂಪುಟದಲ್ಲಿ ಹೊಸ ತರುಣ ಮುಖಗಳನ್ನು ಸೇರಿಸಿಕೊಳ್ಳುವ ಉದ್ದೇಶ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ.
Related Articles
Advertisement
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ನಿನ್ನೆ ರಾಜೀನಾಮೆ ನೀಡಿರುವ ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅನಂತರ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿಯಾಗಿದ್ದಾರೆ.
ಈಚೆಗೆ ನಿರಂತರ ರೈಲು ಅವಘಡಗಳಿಂದ ಮನನೊಂದು ರಾಜೀನಾಮೆಗೆ ಮುಂದಾಗಿದ್ದು ಪ್ರಧಾನಿ ಮೋದಿ ಅವರಿಂದ ತತ್ಕಾಲಕ್ಕೆ ತಡೆಯಲ್ಪಟ್ಟಿದ್ದ ರೈಲ್ವೇ ಸಚಿವ ಸುರೇಶ್ ಪ್ರಭು ಅವರ ಸ್ಥಾನಕ್ಕೆ ಬೇರೊಬ್ಬ ವ್ಯಕ್ತಿಯನ್ನು ಸಚಿವರನ್ನಾಗಿ ನೇಮಿಸುವ ಸಾಧ್ಯತೆ ಇದೆ.
ಉಪರಾಷ್ಟ್ರಪತಿಯಾಗಿ ಚುನಾಯಿತರಾಗಿ ತಮ್ಮ ಸಚಿವ ಪದವನ್ನು ತೆರವು ಗೊಳಿಸಿರುವ ವೆಂಕಯ್ಯ ನಾಯ್ಡು ಅವರ ಸ್ಥಾನವನ್ನು ಸದ್ಯಕ್ಕೆ ಹರ್ಷ ವರ್ಧನ್‌ಗೆ ಹೆಚ್ಚುವರಿಗೆ ಯಾಗಿ ನೀಡಲಾಗಿತ್ತು. ಇದೀಗ ಆ ಸಚಿವ ಪದ ಬೇರೊಬ್ಬರಿಗೆ ದಕ್ಕಲಿದೆ.