ಉಳ್ಳಾಲ : ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ನಡೆದ ವೀರ ರಾಣಿ ಅಬ್ಬಕ್ಕ ಉತ್ಸವದ ಸಮಾರೋಪದಲ್ಲಿ ಸಾಹಿತಿ ಡಾ| ಪಾರ್ವತಿ ಜಿ. ಐತಾಳ್ ಅವರಿಗೆ ವೀರ ರಾಣಿ ಅಬ್ಬಕ್ಕ ಪ್ರಶಸ್ತಿ ಮತ್ತು ಜಾನಪದ ಕಲಾವಿದೆ ಭವಾನಿ ಅವರಿಗೆ ವೀರ ರಾಣಿ ಅಬ್ಬಕ್ಕ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ವೀರರಾಣಿ ಅಬ್ಬಕ್ಕಳ ಹೆಸರಿನಲ್ಲಿ ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಭವನ ಶೀಘ್ರವೇ ನಿರ್ಮಾಣ ಗೊಳ್ಳಲಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಅಧ್ಯಕ್ಷತೆ ವಹಿಸಿದ್ದ ರಾಣಿ ಅಬ್ಬಕ್ಕ ಅಧ್ಯಯನ ಪೀಠ ಸಂಯೋಜಕ ಗಣೇಶ್ ಅಮೀನ್ ಸಂಕಮಾರ್ ಮಾತನಾಡಿದರು.
ಪ್ರಮುಖರಾದ ಕೆ.ಟಿ. ಸುವರ್ಣ, ಸಂತೋಷ್ ಕುಮಾರ್ ರೈ ಬೋಳಿಯಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ ಉಳ್ಳಾಲ್, ಚಂದ್ರಶೇಖರ ಉಚ್ಚಿಲ, ದಯಾನಂದ ಕತ್ತಲ್ ಸಾರ್, ಅಬ್ದುಲ್ ರಶೀದ್, ರವಿ ಶಂಕರ್ ಮಿಜಾರ್, ವಿಠಲ ಶ್ರೀಯಾನ್, ಸೀತಾರಾಂ ಬಂಗೇರ, ಸದಾ ನಂದ ಬಂಗೇರ, ವಂ| ಸಿಪ್ರಿಯನ್ ಪಿಂಟೋ, ಅರುಣ್ ಡಿ’ಸೋಜಾ, ವಿದ್ಯಾ ಕಾಳೆ, ನಮೀತಾ ಗಟ್ಟಿ, ಸಪ್ನಾ ಹರೀಶ್, ಇಸ್ಮಾಯಿಲ್ ಉಪಸ್ಥಿತರಿದ್ದರು.
ಡಾ| ಪಾರ್ವತಿ ಜಿ. ಐತಾಳ್ ಅವರ ಅನುಪಸ್ಥಿತಿಯಲ್ಲಿ ಸಹೋದರಿ ಸರಸ್ವತಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ ಸ್ವಾಗತಿಸಿದರು. ಅಬ್ಬಕ್ಕ ಉತ್ಸವ ಸಮಿತಿ ಸ್ವಾಗತಾಧ್ಯಕ್ಷ ಕೆ. ಜಯ ರಾಮ ಶೆಟ್ಟಿ ಪ್ರಾಸ್ತಾವಿಸಿದರು. ಪ್ರ. ಕಾರ್ಯದರ್ಶಿ ಧನಲಕ್ಷ್ಮೀ ಕಾರ್ಯ ಕ್ರಮ ನಿರೂಪಿಸಿದರು. ಕೋಶಾಧಿ ಕಾರಿ ಆನಂದ ಅಸೈಗೋಳಿ ವಂದಿಸಿದರು.