Advertisement

Ullala: ಗ್ಯಾಸ್‌ ಸೋರಿಕೆ: ಚಿಕಿತ್ಸೆ ಫಲಿಸದೇ ಗೃಹಿಣಿ ಸಾವು

03:03 AM Dec 14, 2024 | Team Udayavani |

ಉಳ್ಳಾಲ: ಮಂಜನಾಡಿ ಗ್ರಾಮದ ಕಂಡಿಕದಲ್ಲಿ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಾಗಿ ಮನೆಯೊಳಗೆ ಸ್ಫೋಟಗೊಂಡು ಗಂಭೀರ ಗಾಯಗೊಂಡು ದೇರಳಕಟ್ಟೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖುಬ್ರ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಖುಬ್ರ ಅವರ ಮೂವರು ಮಕ್ಕಳು ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆ ನಡೆಯುತ್ತಿದೆ.

Advertisement

ಮಂಜನಾಡಿ ಕಂಡಿಕ ನಿವಾಸಿ ಮುತ್ತಲಿಬ್‌ ವಿದೇಶದಲ್ಲಿ ಉದ್ಯೋಗದಲ್ಲಿದ್ದು ಅವರ ಪತ್ನಿ ಖುಬ್ರ ಮತ್ತು ಅವರ ಮೂವರು ಪುತ್ರಿಯರು ಶನಿವಾರ ಊಟ ಮುಗಿಸಿ ಮಲಗಿದ್ದರು. ತಡರಾತ್ರಿ ಖುಬ್ರ ಶೌಚಾಲಯಕ್ಕೆ ತೆರಳಲು ಕೋಣೆಯ ವಿದ್ಯುತ್‌ ದೀಪ ಉರಿಸಲು ಸ್ವಿಚ್‌ ಹಾಕಿದಾಗ ಬೆಂಕಿಯುಂಡೆಯಂತೆ ಮನೆಯೊಳಗೆ ಬೆಂಕಿ ಆವರಿಸಿ ನಾಲ್ವರು ಸುಟ್ಟ ಗಾಯಗಳೊಂದಿಗೆ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿದ್ದರು.

ಘಟನೆ ಸಂದರ್ಭದಲ್ಲಿ ಮನೆಯಲ್ಲಿ ನಾಲ್ವರು ಮಾತ್ರವಿದ್ದು, ಬೆಡ್‌ರೂಂ ಬಳಿ ಇಟ್ಟಿದ್ದ ಗ್ಯಾಸ್‌ ಸಿಲಿಂಡರ್‌ನಲ್ಲಿ ಗ್ಯಾಸ್‌ ಸೋರಿಕೆಯಾಗಿ ಈ ಘಟನೆ ಸಂಭವಿಸಿತ್ತು ಎನ್ನಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next