Advertisement

ಉಳ್ಳಾಲ: ನಾಡದೋಣಿಯ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳ ಕಳವು, ಪ್ರಕರಣ ದಾಖಲು

10:44 PM Feb 16, 2023 | Team Udayavani |

ಉಳ್ಳಾಲ: ಡಾ| ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಯೋಜನೆಯಡಿಯಲ್ಲಿ ಧನಸಹಾಯ ಮಂಜೂರಾದ ನಾಡದೋಣಿಯ 7,90,000 ರೂ. ಬೆಲೆಬಾಳುವ ಸಲಕರಣೆಗಳನ್ನು ಕಳವು ನಡೆಸಿರುವ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಕಟಿಲೇಶ್ವರಿ ಹೆಸರಿನ ದೋಣಿಯಲ್ಲಿ ಕಳವು ನಡೆದಿದೆ. ಪರಿಶಿಷ್ಟ ಜಾತಿಯವರಿಗೆ ಸಿಗುವ ಅಂಬೇಡ್ಕರ್‌ ಯೋಜನೆಯಡಿ ಬ್ಯಾಂಕ್‌ ಸಾಲ ಪಡೆದು ದೋಣಿಯನ್ನು ಖರೀದಿಸಲಾಗಿತ್ತು. ಅದನ್ನು ಮಾಲಕರು 3 ವರ್ಷಗಳ ಹಿಂದೆ ಮಲ್ಪೆ ಕೊಳ ನಿವಾಸಿ ಕಿರಣ್‌ ಮಾಸ್ಟರ್‌ ಅವರಿಗೆ ನಡೆಸಲು ನೀಡಿದ್ದರು. ದೋಣಿಯ ಹಣವನ್ನು ಕಿರಣ್‌ ನೀಡದೇ ಇದ್ದಾಗ ಅವರ ಮೊಬೈಲಿಗೆ ಕರೆ ಮಾಡಿದ್ದರು. ಆದರೆ ಸಂಪರ್ಕಕ್ಕೆ ಸಿಗದೇ ದೋಣಿ ನಾಪತ್ತೆಯಾಗಿತ್ತು.

ಅನಂತರ ಮಾಲಕರು ಎಲ್ಲ ಧಕ್ಕೆಗಳಲ್ಲಿ ಹುಡುಕಾಡಿದಾಗ ಉಳ್ಳಾಲದ ಕೋಟೆಪುರದ ಡಿ.ರೋಡ್‌ ಎಂಬಲ್ಲಿ ದೋಣಿ ಇರುವ ಮಾಹಿತಿ ಪಡೆದುಕೊಂಡು ಉಳ್ಳಾಲಕ್ಕೆ ಆಗಮಿಸಿದ್ದರು. ಈ ವೇಳೆ ದೋಣಿ ಪರಿಶೀಲಿಸಿದಾಗ ದೋಣಿಗೆ ಅಳವಡಿಸಿದ 2 ಯಮಹಾ ಎಂಜಿನ್‌, ಮೀನು ಹಿಡಿಯುವ ಬಲೆ, ಸಿಂಟೆಕ್ಸ್‌ ಟ್ಯಾಂಕ್‌, ಕ್ಯಾನ್‌ 10, ಮೀನು ಹಿಡಿಯುವ ಹಗ್ಗ, ಬ್ಯಾಟರಿ ಮತ್ತು ನೆಟ್‌, ಗ್ಯಾಸ್‌ ಸಿಲಿಂಡರ್‌-2, ಟರ್ಪಾಲು-3 ಕಳವಾಗಿರುವುದು ಕಂಡುಬಂದಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 7.90 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next