Advertisement

Ullal: ಹಿರಿಯರ ಬಡಾವಣೆಗೆ ಸೌಲಭ್ಯಗಳೇ ಇಲ್ಲ

01:09 PM Sep 20, 2024 | Team Udayavani |

ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯ ವಿದ್ಯಾರಣ್ಯನಗರ ಬಡಾವಣೆಯ ನಿವಾಸಿಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸುವ ಅಭಿವೃದ್ಧಿ ಕಾಮಗಾರಿಗಳನ್ನು ತಿಂಗಳ ಒಳಗಾಗಿ ಆರಂಭಿಸದಿದ್ದರೆ ಬಡಾವಣೆಯ ನಿವಾಸಿಗಳನ್ನು ಒಟ್ಟು ಸೇರಿಸಿ ನಗರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಟೆಂಟ್‌ ಹಾಕಿ ಪ್ರತಿಭಟಿಸಲಾಗುವುದೆಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಜಪ್ಪು ಎಚ್ಚರಿಕೆ ನೀಡಿದ್ದಾರೆ.

Advertisement

ಬಡಾವಣೆಯು ಅನೇಕ ವರುಷಗಳಿಂದ ನಿರ್ಲಕ್ಷ್ಯ ಕ್ಕೊಳಗಾಗಿದ್ದು ಇಲ್ಲಿಗೆ ಮೂಲ ಸೌಲಭ್ಯಗಳನ್ನ ಒದಗಿಸು ವಂತೆ ಆಗ್ರಹಿಸಿ ವಿದ್ಯಾರಣ್ಯ ನಗರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದೊಂದಿಗೆ ಗುರುವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ನಿವೃತ್ತ ಶಿಕ್ಷಕಿ ಜಾನಕಿ ಟೀಚರ್‌ ಮಾತನಾಡಿ, ಬಡಾವಣೆ ಯಲ್ಲಿ ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಹಿರಿಯ ನಾಗರಿಕರಿಂದ ಏನೂ ಮಾಡಲು ಅಸಾಧ್ಯ ಇಷ್ಟರವರೆಗೆ ನಾವು ಸಾಕಷ್ಟು ಸಹಿಸಿದ್ದೇವೆ ಎಂದರು. ರಕ್ಷಣಾ ವೇದಿಕೆಯ ಜ್ಯೋತಿಕಾ ಜೈನ್‌,  ಪ್ರಶಾಂತ್‌ ಭಟ್‌ ಕಡಬ, ಶೇಖ್‌ ಬಾವಾ, ಸುಕೇಶ್‌ ಜಿ. ಉಚ್ಚಿಲ, ಯಶುಪಕ್ಕಳ, ಅಝೀಝ್ ಉಳ್ಳಾಲ, ರಹಮತುಲ್ಲಾ, ಬಾಲಚಂದ್ರ, ತನ್ವೀರ್‌, ಕೆ.ಸಿ. ನಾರಾಯಣನ್‌, ಡಾ| ಸುಧೀರ್‌, ಯೋಗೀಶ್‌ ಬೆಳ್ಚಾಡ, ಕೇಶವ ಪುತ್ರನ್‌, ಪಿ. ಉಮೇಶ್‌ ಕಾಮತ್‌, ವಿದ್ಯಾರಣ್ಯ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ| ಸದಾಶಿವ ಪೊಳ್ನಾಯ, ವೆಂಕಟಗಿರಿ, ಸುಹಾಲ್‌, ಸುಹೈಝ್, ಮುರಳಿ ಮತ್ತಿತರಿದ್ದರು.

ಗುದ್ದಲಿ ಪೂಜೆಗೆ ಆರು ವರ್ಷ!
ವಿದ್ಯಾರಣ್ಯ ನಗರದ ಪ್ರಮುಖ ಮತ್ತು ಅಡ್ಡರಸ್ತೆಯ – ಕಾಂಕ್ರೀಟ್‌ ಕಾಮಗಾರಿಗೆ ಹಣ ಮಂಜೂರಾಗಿ 2018ರ ಮಾರ್ಚ್‌ ತಿಂಗಳಲ್ಲಿ ಕ್ಷೇತ್ರದ ಶಾಸಕರು ಗುದ್ದಲಿ ಪೂಜೆ ನೆರವೇರಿಸಿ ಆರು ವರ್ಷಗಳು ಕಳೆದರೂ ಈವರೆಗೂ ಕಾಮಗಾರಿ ಆರಂಭವಾಗಿಲ್ಲ. ಇಲ್ಲಿಗೆ ಮಂಜೂರಾದ ಹಣವನ್ನು ಬೇರೆ ವಾರ್ಡಿನ ರಸ್ತೆ ಅಭಿವೃದ್ಧಿಗೆ ವರ್ಗಾಯಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

ಮಳೆಗಾಲ ಕಳೆದ ಕೂಡಲೇ ಕಾಮಗಾರಿ
ಉಳ್ಳಾಲ ನಗರಸಭೆಯ ಅಭಿವೃದ್ಧಿ ಕಾರ್ಯಕ್ಕೆ 9 ಕೋಟಿ ರೂ. ಬಿಡುಗಡೆಯಾಗಿದ್ದು, ಅದರಲ್ಲಿ ಬಡಾವಣೆಯ ರಸ್ತೆ ಮತ್ತಿತರ ಮೂಲ ಸೌಕರ್ಯಕ್ಕೆ 40 ಲಕ್ಷ ರೂ. ಮೀಸಲು ಇಡಲಾಗಿದೆ. ಮಳೆಗಾಲ ಕಳೆದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು.
-ತುಳಸಿ, ಎಂಜಿನಿಯರ್‌, ಉಳ್ಳಾಲ ನಗರಸಭೆ

ಬಡಾವಣೆಯ ಸಮಸ್ಯೆ ಏನೇನು?
ತುಂಬಾ ಹಳೆಯ ಬಡಾವಣೆಯಾದ ಇಲ್ಲಿ 40ರಿಂದ 50 ಮನೆಗಳಿವೆ. ಹಿಂದೆ ಉಳ್ಳಾಲದಲ್ಲಿ ಸುಂದರ, ಸ್ವತ್ಛ ಬಡಾವಣೆಯೆಂದೇ ಪ್ರಸಿದ್ಧಿಯನ್ನು ಪಡೆದಿದ್ದ ಇಲ್ಲಿ ಈಗ ರಸ್ತೆ, ನೀರು,ನೈರ್ಮಲ್ಯದ ಕೊರತೆ ಕಾಡುತ್ತಿದೆ.

ಮುಖ್ಯ ರಸ್ತೆಗೆ ಕಾಂಕ್ರೀಟ್‌ ಹಾಕಲಾಗಿದ್ದರೂ ದಶಕಗಳ ಹಿಂದೆ ಒಳಚರಂಡಿ ಕಾಮಗಾರಿಗೆ ರಸ್ತೆ ಅಗೆದು ಸರಿಪಡಿಸದೆ ಹಾಗೆಯೇ ಉಳಿದಿದ್ದು, ಇದೀಗ ಹೊಂಡ ಬಿದ್ದಿದೆ.

ಒಳರಸ್ತೆಗಳು ಡಾಮರು ಕಾಣದೆ ಹಲವು ವರುಷ ಗಳು ಕಳೆದರೆ, ಮಳೆಗಾಲದಲ್ಲಿ ಚರಂಡಿ ಇಲ್ಲದೆ ನೀರು ರಸ್ತೆಯಲ್ಲೇ ಹರಿದು ರಸ್ತೆಗಳು ಕಿತ್ತು ಹೋಗಿವೆ. ಕೆಲವು ಕಡೆ ಜಲ್ಲಿ ಹಾಕಿದರೂ ಕಾಮಗಾರಿ ನಡೆದಿಲ್ಲ.

ಹೊಂಡಗಳಲ್ಲಿ ಮಳೆ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next