Advertisement
ಕೈಕೋರೋಡ್‌ನ ಇಂದಿರಾನಗರದಲ್ಲಿರುವ ದಿ. ಲತೀಫ್ ಅವರ ಮನೆ ಸಮುದ್ರದ ಅಲೆಗಳಿಗೆ ತುತ್ತಾಗಿ ಕುಸಿದು ಬಿದ್ದಿದೆ. ಮನೆಯಲ್ಲಿದ್ದವರು ಎರಡು ದಿನಗಳ ಹಿಂದೆಯೇ ಪಕ್ಕದ ಮನೆಗೆ ಸ್ಥಳಾಂತರಗೊಂಡಿದ್ದು, ಸಾಮಾನುಗಳನ್ನು ಮಂಗಳವಾರ ಸ್ಥಳೀಯರು ಮತ್ತು ಕುಟುಂಬದ ಸದಸ್ಯರು ಸ್ಥಳಾಂತರಗೊಳಿಸಿದರು.
ಸೋಮೇಶ್ವರ ಮತ್ತು ಉಚ್ಚಿಲ ಬೀಚ್‌ನಲ್ಲಿ ಕಡಲ್ಕೊರೆತ ಪ್ರಾರಂಭವಾಗಿದೆ. ಉಚ್ಚಿಲದಲ್ಲಿ ಫಿಶರಿಸ್ ರಸ್ತೆ ಸಮುದ್ರ ಪಾಲಾಗುವ ಭೀತಿಯಲ್ಲಿದೆ. ಸೋಮೇಶ್ವರದಿಂದ ಉಚ್ಚಿಲ ಬಟ್ಟಪ್ಪಾಡಿಯನ್ನು ಸಂಪರ್ಕಿಸುವ ಏಕೈಕ ರಸ್ತೆ ಇದಾಗಿದ್ದು, ನ್ಯೂ ಉಚ್ಚಿಲದ ಬಳಿ ರಸ್ತೆಗೆ ಕೆಲವೇ ಮೀಟರ್ ದೂರದಲ್ಲಿ ಸಮುದ್ರವಿದ್ದು, ಅಲ್ಲಿ ತಾತ್ಕಾಲಿಕ ಕಾಮಗಾರಿ ನಡೆಸದಿದ್ದಲ್ಲಿ ರಸ್ತೆ ಕುಸಿಯುವ ಸಾಧ್ಯತೆ ಹೆಚ್ಚಿದೆ.
Related Articles
ಉಳ್ಳಾಲದ ಮೊಗವೀರಪಟ್ಣ ಮತ್ತು ಕೋಟೆ ಪುರ ಗಳಲ್ಲಿ ನಡೆದ ಕಡಲ್ಕೊರೆತ ಶಾಶ್ವತ ಕಾಮಗಾರಿ ಯಿಂದಾಗಿ ಇಲ್ಲಿ ಇದುವರೆಗೆ ಕಡಲ್ಕೊರೆತ ಉಂಟಾಗಿಲ್ಲ. ಆದರೆ ಉಳ್ಳಾಲದ ಕೈಕೋ, ಕಿಲೇರಿಯಾನಗರ, ಸೋಮೇ ಶ್ವರ ಉಚ್ಚಿಲದಲ್ಲಿ ಕಡಲ್ಕೊರೆತ ಹೆಚ್ಚಾಗಲು ಕಾರಣವಾಗಿದೆ. ಕಾಮಗಾರಿಯ ಪ್ರದೇಶದಲ್ಲಿ ಅಲೆ ಗಳು ದಕ್ಷಿಣಕ್ಕೆ ತಿರುಗುತ್ತಿದ್ದು, ಕೈಕೋದಲ್ಲಿ ಹಾಕ ಲಾಗಿದ್ದ ಕಲ್ಲಿನ ತಾತ್ಕಾಲಿಕ ತಡೆಗೋಡೆಗಳು ಸಮುದ್ರಪಾಲಾಗಿವೆ. ಉಚ್ಚಿಲ ದಲ್ಲಿಯೂ ಕಳೆದ ಬಾರಿ ಹಾಕಲಾಗಿದ್ದ ತಡೆಗೋಡೆಗಳು ಸಮುದ್ರಪಾಲಾಗು ತ್ತಿದ್ದು, ಜನರು ಆತಂಕದಲ್ಲಿದ್ದಾರೆ.
Advertisement
ಬಮ್ಸ್ì ರಚನೆಗೆ ಆಗ್ರಹಕೋಟೆಪುರ ಮತ್ತು ಮೊಗವೀರಪಟ್ಣ ಬಳಿ ನಡೆಸಿದ ಕಾಮಗಾರಿಯ ಮಾದರಿಯಲ್ಲೇ ಕೈಕೋ ಮತ್ತು ಕಿಲೇ ರಿಯಾ ನಗರದಲ್ಲಿ ಕಾಮಗಾರಿ ನಡೆಸುತ್ತಿದ್ದರೆ ಕೊರೆತ ಪ್ರಮಾಣ ಕಡಿಮೆಯಾಗುತ್ತಿತ್ತು ಎಂದು ಸ್ಥಳೀಯ ಕೌನ್ಸಿಲರ್ ಮಹಮ್ಮದ್ ಮುಕ್ಕಚ್ಚೇರಿ ಅವರು ತಿಳಿಸಿದ್ದಾರೆ. ಉಳ್ಳಾಲ: ಲತೀಫ್ ಅವರ ಮನೆಗೆ ಸಮುದ್ರದ ಅಲೆಗಳು ಅಪ್ಪಳಿಸಿ ಹಾನಿಯಾಗಿರುವುದು.