Advertisement
ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಪಿಎಲ್ ಕಾರ್ಡ್ ರದ್ದಾಗಿರುವ ವಿಚಾರ ಪ್ರಸ್ತಾಪವಾದ ಖಾದರ್ ಸಿಟ್ಟಿಗೆದ್ದರು.
Related Articles
Advertisement
ಸಿಬಂದಿ ಸುಧಾ ನಾಡಗೀತೆ ಹಾಡಿದರು. ಸದಸ್ಯ ಲತೀಫ್ ಕಾಪಿಕಾಡ್ ಸ್ವಾಗತಿಸಿದರು. ಅಬ್ದುಲ್ ರಹ್ಮಾನ್ ಚಂದಹಿತ್ಲು ವಂದಿಸಿದರು.
ತಾಲೂಕು ಪಂಚಾಯತ್ ಮಾಜಿ ಸದಸ್ಯ ಹೈದರ್ ಕೈರಂಗಳ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜನಿ ಡಿ. ಕಾರ್ಯಕ್ರಮ ನಿರೂಪಿಸಿದರು. ಸ್ವತ್ಛತಾ ರಾಯಭಾರಿ ಶೀನ ಶೆಟ್ಟಿ ಅವರ ನೇತೃತ್ವದಲ್ಲಿ ಶೂನ್ಯ ಕಸ ಮುಕ್ತ ಗ್ರಾಮಕ್ಕೆ ಚಾಲನೆ ನೀಡಲಾಯಿತು. ಮತದಾರ ಪಟ್ಟಿಗೆ ನೋಂದಣಿ, ಗ್ಯಾರಂಟಿ ಯೋಜನೆ ಸಮಸ್ಯೆಗಳ ಪರಿಹಾರ, ಪಡಿತರ ಚೀಟಿ ಸಮಸ್ಯೆ ಪರಿಹಾರ, ಆಧಾರ್ ನೋಂದಣಿ, ತಿದ್ದುಪಡಿ ನಡೆಯಿತು.
ಮಹಿಳೆಗೆ ಯು.ಟಿ.ಕೆ ಕುಠೀರ ಹಸ್ತಾಂತರಜನಸಂಪರ್ಕ ಸಭೆಯ ಪೂರ್ವಭಾವಿಯಾಗಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಶಾಂತಿ ಪಳಿಕೆಯ ಪದ್ಮಾವತಿ ಎಂಬ ಪರಿಶಿಷ್ಟ ಮಹಿಳೆಗೆ ಸುಮಾರು ಎಂಟು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ “ಯು.ಟಿ.ಕೆ. ಕುಠೀರ”ದ ಕೀಲಿ ಕೈ ಹಸ್ತಾಂತರ, ಕಳ್ಳರಕೋಡಿ ಶಾಲಾ ಕೊಠಡಿ ಉದ್ಘಾಟನೆ, ಸಾಧಕ ಸಂಘ ಸಂಸ್ಥೆ, ಸಾಧಕರಿಗೆ ಸಮ್ಮಾನ, ಉಳ್ಳಾಲ ಹಾಗೂ ಬಂಟ್ವಾಳ ತಾಲೂಕಿನ ಎಸ್ಸಿ, ಎಸ್ಟಿ ಕುಂದು ಕೊರತೆ ಸಭೆ, ಹಕ್ಕು ಪತ್ರ ವಿತರಣೆಗೆ ಬಾಕಿ ಇದ್ದವರಿಗೆ ಹಕ್ಕು ಪತ್ರ ವಿತರಣೆ, ಪಂಚಾಯತ್ ಕಚೇರಿ ಆವರಣದಲ್ಲಿ ಅಳವಡಿಸಿದ ಇಂಟರ್ ಲಾಕ್ ಹಾಗೂ ಮುಖ್ಯದ್ವಾರ ಉದ್ಘಾಟಿಸಿ ವಿವಿಧ ಕಾಮಗಾರಿಗಳನ್ನು ಅವರು ಉದ್ಘಾಟಿಸಿದರು. ಸಕ್ರಿಯ ಪಂಚಾಯತ್ಗೆ ಹೆಚ್ಚು ಅನುದಾನ
ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಪ್ರತೀ ಗ್ರಾಮಕ್ಕೂ 75 ಲಕ್ಷದಿಂದ ಒಂದು ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಸರಿಯಾಗಿ ಕೆಲಸ ಮಾಡಿದ ಪಂಚಾಯತ್ಗೆ ಹೆಚ್ಚಿನ ಅನುದಾನ ನೀಡುತ್ತೇನೆ ಎಂದು ಯು.ಟಿ. ಖಾದರ್ ಹೇಳಿದರು. ಕುಡಿಯುವ ನೀರು, ರಸ್ತೆ, ಪಡಿತರ, ವಿದ್ಯುತ್, ಸರ್ವೇ ಇಲಾಖೆಯ ಸಮಸ್ಯೆ ಪ್ರಮುಖವಾಗಿದೆ. ತಾಲೂಕು ಕಚೇರಿಗೆ ಹೋಗಿ ಕೆಲಸ ಮಾಡಿಸಲು ಸಾಧ್ಯ ಇಲ್ಲದವವರಿಗಾಗಿ ಕಾಲಬುಡಕ್ಕೇ ಅ ಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಲು ಜನಸಂಪರ್ಕ ಸಭೆ ಅಯೋಜಿಸಲಾಗಿದೆ. ಅರ್ಜಿ ಕೊಟ್ಟವರಿಗೆ ವಾರದಲ್ಲೇ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಸೂಚಿಸಿದರು. ಜನಪ್ರತಿನಿಧಿಗಳು ಐದು ವರ್ಷ ರಾಜಕೀಯ ಮಾಡುತ್ತಾ ಇರಬೇಡಿ, ಚುನಾವಣೆ ಬಂದಾಗ ಮಾತ್ರ ರಾಜಕೀಯ ಇರಲಿ. ಇತರ ಸಮಯದಲ್ಲಿ ರಾಜಕೀಯ ಆಫ್ ಮಾಡಿ ಅಭಿವೃದ್ಧಿ ಕೆಲಸ ಮಾಡಿ ಎಂದು ತಿಳಿಸಿದರು.