Advertisement
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಪ್ರತಿನಿಧಿಸುವ ಮಂಗಳೂರು ವಿಧಾನ ಸಭಾ ಕ್ಷೇತ್ರದ ನಾಲ್ಕು ಗ್ರಾಮಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಗ್ರಾಮಗಳು ನೂತನ ತಾಲೂಕಿನ ವ್ಯಾಪ್ತಿಗೆ ಬರಲಿದ್ದು, ಮಂಗಳೂರಿಗೆ ಪರ್ಯಾಯ ನಗರವಾಗಿ ಬೆಳೆಯುತ್ತಿರುವ ಉಳ್ಳಾಲ ಇನ್ನಷ್ಟು ಅಭಿವೃದ್ಧಿಯಾಗಲಿದೆ.
ಉಳ್ಳಾಲ ತಾಲೂಕಿನಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಗೆ ಸೇರುವ ಉಳ್ಳಾಲ ನಗರಸಭೆ, ಕೋಟೆಕಾರು ಪಟ್ಟಣ ಪಂಚಾಯತ್, ತಲಪಾಡಿ, ಸೋಮೇಶ್ವರ, ಕಿನ್ಯ, ಬೆಳ್ಮ, ಮುನ್ನೂರು, ಅಂಬ್ಲಿಮೊಗರು, ಹರೇಕಳ, ಪಾವೂರು, ಮಂಜನಾಡಿ, ಕೊಣಾಜೆ, ಬೋಳಿಯಾರು ಗ್ರಾಮಗಳು ಮತ್ತು ಬಂಟ್ವಾ ತಾಲೂಕಿನ ಮುಡಿಪು ಹೋಬಳಿಗೆ ಸೇರಿದ ನರಿಂಗಾನ, ಬಾಳೆಪುಣಿ- ಕೈರಂಗಳ, ಕುರ್ನಾಡು, ಸಜಿಪ ಪಡು, ಸಜಿಪ ನಡು, ಇರಾ, ಪಜೀರು ಗ್ರಾಮಗಳು ಸೇರ್ಪಡೆಯಾಗಲಿದ್ದು, ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ರಾಷ್ಟಿÅàಯ ಹೆದ್ದಾರಿ 75ನ್ನು ಸಂಪರ್ಕಿಸುವ ಮೇರೆಮಜಲು -ಕೊಡಾ¾ಣ್, ಪುದು, ತುಂಬೆ ಗ್ರಾಮಗಳು ಮಾತ್ರ ಬಂಟ್ವಾಳ ತಾಲೂಕಿನಲ್ಲಿ ಉಳಿಯಲಿದ್ದು ಉಳಿದ ಎಲ್ಲ ಗ್ರಾಮಗಳು ಉಳ್ಳಾಲ ತಾಲೂಕಿನ ವ್ಯಾಪ್ತಿಗೆ ಬರಲಿವೆ. ನೂತನ ತಾಲೂಕು ರಚನೆಯಿಂದ ಬಂಟ್ವಾಳ ತಾಲೂಕು ವ್ಯಾಪ್ತಿಯ ಮುಡಿಪು ಹೋಬಳಿಯ ಗ್ರಾಮಗಳ ಜನರಿಗೆ ಸಹಕಾರಿಯಾಗಲಿದ್ದು, ಮುಖ್ಯವಾಗಿ ಉಳ್ಳಾಲದಲ್ಲಿ ಸರಕಾರಿ ಜಾಗದ ಕೊರತೆಯಿಂದ ನಾಟೆಕಲ್ಲು, ದೇರಳಕಟ್ಟೆ ವ್ಯಾಪ್ತಿಯಲ್ಲಿ ಮಂಗಳೂರು ತಾಲೂಕಿನ ಕೇಂದ್ರ ಸ್ಥಾನ ಬರಲಿದೆ. ಹೊಸ ತಾಲೂಕು ರಚನೆಯಿಂದ ಹಲವು ವರ್ಷಗಳ ಬೇಡಿಕೆಯಾಗಿರುವ ಆಟದ ಮೈದಾನ, ಅಗ್ನಿಶಾಮಕ ಠಾಣೆ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರಿಕೆಯಾಗಲಿವೆ.