Advertisement
ಮರದಿಂದ ನಿರ್ಮಾಣಗೊಂಡ ಕುದುರೆಯನ್ನು ಇಚ್ಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ವೈಭವದ ಮೆರವಣಿಗೆಯ ಮೂಲಕ ನೇರ್ಲ ಮಾರ್ಗವಾಗಿ ಉಳ್ಳಾಕ್ಲು ದೈವಸ್ಥಾನಕ್ಕೆ ತರಲಾಯಿತು. ಚೆಂಡೆ, ಬ್ಯಾಂಡ್, ವಾದನದೊಂದಿಗೆ ಆಗಮಿಸಿದ ಮೆರವಣಿಗೆಯಲ್ಲಿ ಮಹಿಳೆಯರು ಸಹಿತ ನೂರಾರು ಮಂದಿ ಭಾಗವಹಿಸಿದ್ದರು. ಪಟಾಕಿ ಸಿಡಿಸಿ ಮೆರವಣಿಗೆಯನ್ನು ಸ್ವಾಗತಿಸಲಾಯಿತು. ಉಳ್ಳಾಕ್ಲು ಮಾಡದಲ್ಲಿ ದೇವತಾ ಪ್ರಾರ್ಥನೆ, ಪುಣ್ಯಾಹ ವಾಚನ, ಗಣಪತಿ ಹೋಮ, ಕಲಶಪೂಜೆ ನಡೆಯಿತು. ಬಳಿಕ 11.36ಕ್ಕೆ ನೂತನ ವಾಹನ ಕುದುರೆಯ ಸಮರ್ಪಣೆ, ಮಹಾಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಎ. 14ರಂದು ಸಂಜೆ ಧ್ವಜಾರೋಹಣ ನಂತರ ಭಂಡಾರ ತೆಗೆದು ಕುದುರೆಮುಖ ಮತ್ತು ಉದ್ರಾಂಡಿ ದೈವಗಳ ನೇಮ ನಡೆಯಿತು. ಎ. 15ರಂದು ಬೆಳಗ್ಗೆ ಬಿಸು ಕಾಣಿಕೆ, ಎ. 17ರಂದು ಮಧ್ಯಾಹ್ನ ಶ್ರೀ ಉಳ್ಳಾಕ್ಲು ದೈವಕ್ಕೆ ಎಣ್ಣೆ ವೀಳ್ಯ ಕೊಡುವುದು, ಅನಂತರ ನೇಮ ನಡೆಯಲಿದೆ. ಎ. 18ರಂದು ಶ್ರೀ ಹಳ್ಳತ್ತಾಯ ದೈವಕ್ಕೆ ಎಣ್ಣೆ ವೀಳ್ಯ ಕೊಡುವುದು, ಅನಂತರ ನೇಮ, ಶ್ರೀ ಪನ್ಯಾಡಿತ್ತಾಯ, ಪೊಟ್ಟ ದೈವಗಳ ನೇಮ ನಡೆಯಲಿದೆ.