Advertisement

ಉಳವಿ ಚೆನ್ನಬಸವೇಶ್ವರ ಮಹಾರಥೋತ್ಸವ ನಾಳೆ

04:42 PM Feb 26, 2021 | Team Udayavani |

ಜೋಯಿಡಾ: ವೀರಶೈವರ ಪುಣ್ಯ ಕ್ಷೇತ್ರ ಉಳವಿಯಲ್ಲಿ ಫೆ.27 ರಂದು ಮಹಾರಥೋತ್ಸವ ನಡೆಯಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಜನ ಗುಂಪುಗೂಡದಂತೆ ಮುನ್ನೆಚ್ಚರಿಕಾ ಕ್ರಮಕೈಗೊಂಡು ಸರಳರೀತಿಯಲ್ಲಿ ನಡೆಸುವುದಾಗಿ ಟ್ರಸ್ಟ್‌ಕಮೀಟಿ ಅಧ್ಯಕ್ಷ ಗಂಗಾಧರ ಕಿತ್ತೂರ ತಿಳಿಸಿದ್ದಾರೆ.

Advertisement

ಈಗಾಗಲೆ ದೂರದೂರದಿಂದ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ದೇವರದರ್ಶನಕ್ಕೆ ಸಾಲುಗಟ್ಟಿ ನಿಲ್ಲುವ ಮೂಲಕ ದೇವರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಆದರೆ ದೇವಸ್ಥಾನ ಕಮೀಟಿ ಸರಕಾರದ ಆದೇಶದಂತೆ ಕೊರೋನಾ ನಿಯಮ ಪಾಲನೆಗೆ ಭಕ್ತಾದಿಗಳಲ್ಲಿ ಎಚ್ಚರಿಕೆ ನೀಡುತ್ತಿದ್ದು, ಗುಂಪುಗೂಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು ಕಂಡುಬಂದಿದೆ.

ಉಳವಿ ಗ್ರಾಪಂ ಚೆನ್ನಬಸವೇಶ್ವರನ ಭಕ್ತಾದಿಗಳಿಗೆ ಜಾತ್ರಾ ಆವರಣದಲ್ಲಿ ಕುಡಿಯವ ನೀರು ಹಾಗೂ ಕಸದ ತೊಟ್ಟಿ ಇಟ್ಟು ಸ್ವತ್ಛತೆ ಕಾಪಾಡಿದೆ. ಉಳವಿ ಜಾತ್ರೆಯಲ್ಲಿ ಬಂದುಹೋಗುವ ಭಕ್ತಾದಿಗಳಿಗೆ  ಹಾಗೂ ಎತ್ತುಗಳಿಗೆ ನೀರಿನ ಕೊರತೆ ಆಗದಂತೆ ಗ್ರಾಪಂ ಅಗತ್ಯ ಕ್ರಮಕೈಗೊಂಡಿದೆ. ಉಳವಿ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಚಕ್ಕಡಿಗಾಡಿ ಎತ್ತುಗಳಿಗೆ ಚಿಕಿತ್ಸೆ, ಔಷಧೋಪಚಾರಕ್ಕೆ ಪಶುಸಂಗೋಪನೆ ಇಲಾಖೆ ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರೆ, ಭಕ್ತಾದಿಗಳ ಆರೋಗ್ಯ ತಪಾಸಣೆ ಹಾಗೂ ಕೋವಿಡ್‌ ಸಂಬಂಧಿ ಮುನ್ನೆಚ್ಚರಿಕಾ ಕ್ರಮಕ್ಕಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಮ್ಮ ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.

ಚೆನ್ನಬಸವೇಶ್ವರರ ಜಾತ್ರೆಗೆ ಆಗಮಿಸುತ್ತಿರುವ ಎಲ್ಲಾ ಭಕ್ತಾದಿಗಳಿಗೆ ಉಳವಿ ಗ್ರಾಪಂ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಬಂದಂತಹ ಭಕ್ತಾದಿಗಳು ಕ್ಷೇತ್ರದಲ್ಲಿ ಸ್ವತ್ಛತೆ  ಹಾಗೂ ಕೋವಿಡ್‌ ನಿಯಮ ಪಾಲಿಸುವಲ್ಲಿ ಸಹಕರಿಸಬೇಕಾಗಿ ವಿನಂತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next