Advertisement
ಈ ಪೈಕಿ 14 ಡ್ರೋನ್‌ಗಳನ್ನು ಹೊಡೆದುರುಳಿ ಸಿದ್ದರೆ ಬಾಕಿ ಆರು ಡ್ರೋನ್‌ಗಳನ್ನು ಜ್ಯಾಮ್ ಮಾಡಿ ನಿಷ್ಕ್ರಿಯ ಮಾಡಲಾ ಗಿದೆ. ಎರಡೂ ದೇಶಗಳ ನಡುವೆ ತೀವ್ರವಾಗಿ ಆರಂಭವಾದ ಕದನ, ಈಗ ಕೆಲವು ತಿಂಗಳುಗಳಿಂದ ನಾಮ್‌ಕೇ ವಾಸ್ತೆಗೆ ತಲುಪಿದೆ. ಹಾಗಂತ ನಿಂತಿಲ್ಲ. ಹೀಗಿರುವಾಗ ಉಕ್ರೇನ್ ಡ್ರೋನ್ ಹಾರಿಸುವುದರಿಂದ ಏನು ಲಾಭ ಎಂಬ ಪ್ರಶ್ನೆಯೂ ಇದೆ. ಇದು ಕೇವಲ ಒತ್ತಡ ತಂತ್ರ ಮಾತ್ರ, ರಷ್ಯನ್ನರ ಮೇಲೆ ನಿರಂತರವಾಗಿ ಡ್ರೋನ್ ಹಾರಿಸು ವುದರಿಂದ ಸದಾ ಭೀತಿ ಯಲ್ಲಿರುತ್ತಾರೆ, ನಿಧಾನಕ್ಕೆ ರಷ್ಯಾ ಸೇನೆ ಉಕ್ರೇನನ್ನು ಪೂರ್ಣ ವಾಗಿ ತೊರೆಯಬಹುದು ಎಂಬ ಉದ್ದೇಶದಿಂದಲೇ ಹೀಗೆ ಮಾಡ ಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಉಕ್ರೇನಿಯನ್ನರಿಗೆ ಕಡ್ಡಾಯ ಸೇನಾ ಶಿಕ್ಷಣ ನೀಡುವ 30 ಸೇನಾಧಿಕಾರಿಗಳನ್ನು ಉಚ್ಚಾಟನೆ ಮಾಡಲಾಗಿದೆ. ದೇಶ ತೀವ್ರ ಯುದ್ಧದಲ್ಲಿ ತೊಡಗಿರುವ ವೇಳೆ ಈ ಅಧಿಕಾರಿಗಳು ಹಣ ಪಡೆದು ಕೊಂಡು, ಜನರನ್ನು ದೇಶದಿಂದ ಕಳ್ಳಸಾಗಣೆ ಮಾಡುತ್ತಿದ್ದಾರೆ, ಇದು ಮಹಾ ರಾಜದ್ರೋಹ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.