ಕೀವ್: ಉಕ್ರೇನ್ ರಾಜಧಾನಿ ಕೀವ್ ಮೇಲೆ ಮತ್ತೊಮ್ಮೆ ರಷ್ಯಾದ ಪಡೆ ದಾಳಿ ನಡೆಸಿದೆ. ಕೆಲ ದಿನಗಳ ಹಿಂದೆ ಕ್ಷಿಪಣಿ ದಾಳಿ ನಡೆಸಿ, 19 ಮಂದಿಯನ್ನು ಬಲಿ ಪಡೆದುಕೊಂಡಿದ್ದ ರಷ್ಯಾ ಪಡೆ ಈ ಬಾರಿ ಡ್ರೋನ್‌ಗಳ ಮೂಲಕವೇ ಕೀವ್‌ನಲ್ಲಿ ದಾಳಿ ನಡೆಸಿದೆ.
ರವಿವಾರ ರಾತ್ರಿಯಿಂದ ನಡೆದಿರುವ ದಾಳಿಗೆ ಕನಿಷ್ಠ 8 ಮಂದಿ ಬಲಿಯಾಗಿದ್ದಾಗಿ ವರದಿಯಾಗಿದೆ.
ಕೀವ್, ಸುಮಿ ಮತ್ತು ದ್ನಿಪ್ರೊ ಪ್ರದೇಶದಲ್ಲಿ ದಾಳಿ ನಡೆದಿದೆ. ಮುಖ್ಯವಾಗಿ ವಿದ್ಯುತ್ ಉತ್ಪಾದಕ ಘಟಕಗಳನ್ನೇ ಗುರಿ ಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಇರಾನ್ ನಿರ್ಮಿತ ಕಾಮಿಕಾಜೆ ಡ್ರೋನ್‌ಗಳು ಉಕ್ರೇನ್ ರೆಡಾರ್‌ಗಳ ಕಣ್ಣು ತಪ್ಪಿಸಿ, ಉಕ್ರೇನ್ ಭಾಗಕ್ಕೆ ನುಗ್ಗಿ ಆತ್ಮಾಹುತಿ ದಾಳಿ ನಡೆಸಿವೆ. ದಾಳಿಗೆಂದು ಕಳುಹಿಸಿಕೊಡ ಲಾಗಿದ್ದ 37 ಡ್ರೋನ್‌ಗಳನ್ನು ನಾವು ಹೊಡೆದುರುಳಿಸಿದ್ದೇವೆ ಎಂದು ಉಕ್ರೇನ್ ವಾಯು ಪಡೆ ತಿಳಿಸಿದೆ.
ಕಾಮಿಕಾಜೆ ಡ್ರೋನ್‌ಗಳನ್ನು ರಷ್ಯಾಕ್ಕೆ ಸರಬರಾಜು ಮಾಡಿರುವ ಹಿನ್ನೆಲೆ ಇರಾನ್ ಮೇಲೂ ನಿರ್ಬಂಧ ಹೇರಬೇಕೆಂದು ಉಕ್ರೇನ್ ಒತ್ತಾಯಿಸಿದೆ. ಆದರೆ ಇರಾನ್ ಈ ಆರೋಪವನ್ನು ತಳ್ಳಿ ಹಾಕಿದೆ. ಸ್ಫೋಟ ಕಗಳನ್ನು ತುಂಬಿರುವ ಕಾಮಿಕಾಜೆ ಡ್ರೋನ್‌ಗಳು ರೆಡಾರ್ ಕಣ್ತಪ್ಪಿಸಿ ಗುರಿಯತ್ತ ಬಂದು, ನಿಖರವಾದ ಗುರಿಯಲ್ಲಿ ಸ್ಫೋಟಿಸುತ್ತವೆ.