Advertisement
ವಿಶ್ವದ ಮೇಲೆ ಪರಿಣಾಮಯುದ್ಧದಿಂದ ಜಾಗತಿಕ ತೈಲ, ಆಹಾರ ಪದಾರ್ಥಗಳ ಆಮದಿನ ಮೇಲೆ ಪರಿಣಾಮ ಉಂಟಾಗಿದೆ. ಅಲ್ಲದೇ ಇದರಿಂದ ಜಾಗತಿಕ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಜಾಗತಿಕ ಶೃಂಗಸಭೆಯೊಂದರಲ್ಲಿ, ಇದು ಯುದ್ಧದ ಸಮಯವಲ್ಲ. ಯುದ್ಧ ನಿಲ್ಲಿಸಿ ಎಂದು ರಷ್ಯಾ ಅಧ್ಯಕ್ಷ ಪುತಿನ್‌ಗೆ ಪ್ರಧಾನಿ ಮೋದಿ ಸಲಹೆ ನೀಡಿದ್ದರು. ಇತ್ತೀಚೆಗೆ ರಷ್ಯಾ ಸಂಸತ್ ಅಧಿವೇಶನದಲ್ಲಿ ಪುತಿನ್ ಯುದ್ಧ ನಿಲ್ಲಿಸುವ ಸುಳಿವು ನೀಡಿದ್ದಾರೆ. ಸಾವಿರಾರು ಮಂದಿ ನಿರಾಶ್ರಿತರು
ಯುದ್ಧ ಆರಂಭವಾದ ಅನಂತರದಿಂದ 80 ಲಕ್ಷಕ್ಕೂ ಹೆಚ್ಚು ಉಕ್ರೇನಿಯರು ಬಲವಂತವಾಗಿ ಉಕ್ರೇನ್ ತೊರೆಯಬೇಕಾಯಿತು. ಪಕ್ಕದ ಪೋಲೆಂಡ್‌ನಲ್ಲಿ 15 ಲಕ್ಷ ಉಕ್ರೇನ್ ನಿರಾಶ್ರಿತರು ನೆಲೆಸಿದ್ದಾರೆ. ಉಕ್ರೇನ್ ಒಳಗೇ 50 ಲಕ್ಷ ಮಂದಿ ಬೇರೆ ಸ್ಥಳಗಳಿಗೆ ಗುಳೇ ಹೋಗಿದ್ದಾರೆ.
Related Articles
ಉಕ್ರೇನ್ ರಾಜಧಾನಿ ಕೀವ್‌ನ ಮನೆಗಳು, ಉದ್ಯಮಗಳು, ಕೈಗಾರಿಕೆಗಳ ಮೇಲೆ ರಷ್ಯಾ ದಾಳಿ ನಡೆಸಿದೆ. ಧ್ವಂಸವಾಗಿರುವ ಕಟ್ಟಡಗಳನ್ನು ಪುನಃ ನಿರ್ಮಿಸಲು 138 ಬಿಲಿಯನ್ ಡಾಲರ್ ಬೇಕಾಗಲಿದೆ ಎಂದು ಕೀವ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂದಾಜಿಸಿದೆ. ಇದೇ ವೇಳೆ 2022ರಲ್ಲಿ ಉಕ್ರೇನ್‌ನ ಆರ್ಥಿಕತೆ ಶೇ.35ರಷ್ಟು ಕುಸಿದಿದೆ ಎಂದು ವಿಶ್ವ ಬ್ಯಾಂಕ್ ಅಕ್ಟೋಬರ್‌ನಲ್ಲಿ ಹೇಳಿತ್ತು.
Advertisement
ಯುದ್ಧಕ್ಕೆ ಸಾಕ್ಷಿಯಾಗಿ ನಿಂತ ನಗರಗಳು – 2022ರ ಫೆ.24ರಂದು ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ದಾಳಿ ಆರಂಭ
– 2ನೇ ವಿಶ್ವ ಯುದ್ಧದ ಬಳಿಕ ಅತೀ ದೊಡ್ಡ ಮಿಲಿಟರಿ ಸಂಷರ್ಷ
– ರಷ್ಯಾ ಪಡೆಗಳಿಂದ ಮರಿಯುಪೋಲ್, ಬಖು¾ತ್ ನಗರ ವಶಕ್ಕೆ
– ಉಕ್ರೇನ್‌ನ ಹಲವು ನಗರಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ.