ಕೀವ್ : ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಕಾರು ಅಪಘಾತವಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಝೆಲೆನ್ಸ್ಕಿಯವರ ವಕ್ತಾರ ಸೆರ್ಹಿ ನೈಕಿಫೊರೊವ್ ಅವರು ತಿಳಿಸಿದ್ದಾರೆ.
ಝೆಲೆನ್ಸ್ಕಿ ಅವರು ಖಾರ್ಕಿವ್ನಲ್ಲಿ ತಮ್ಮ ಸೇನೆ ವಶಪಡಿಸಿಕೊಂಡ ಇಜಿಯಮ್ ನಗರಕ್ಕೆ ಭೇಟಿ ನೀಡಿದ ನಂತರ ಕೈವ್ಗೆ ತೆರಳುತ್ತಿದ್ದರು, ಅಲ್ಲಿ ಅವರು ಉಕ್ರೇನಿಯನ್ ಪಡೆಗಳನ್ನು ಭೇಟಿ ಮಾಡಿದ್ದರು.
ಖಾರ್ಕಿವ್ ಪ್ರದೇಶದಿಂದ ಹಿಂತಿರುಗುತ್ತಿದ್ದ ವೇಳೆ ಕೈವ್ನಲ್ಲಿ, ಪ್ರಯಾಣಿಕರ ಕಾರು ಉಕ್ರೇನ್ ಅಧ್ಯಕ್ಷರ ಕಾರು ಮತ್ತು ಬೆಂಗಾವಲು ವಾಹನಗಳಿಗೆ ಢಿಕ್ಕಿ ಹೊಡೆದಿದೆ” ಎಂದು ವಕ್ತಾರ ಸೆರ್ಗಿ ನಿಕಿಫೊರೊವ್ ಫೇಸ್ಬುಕ್ನಲ್ಲಿ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಅಪಘಾತ ನಡೆದ ಕೂಡಲೇ ವೈದ್ಯಕೀಯ ತಂಡ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಈ ಕುರಿತು ಹೇಳಿಕೆ ನೀಡಿದ ವಕ್ತಾರ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಸಭಾಪತಿ ಚುನಾವಣೆಗೆ ಸಂಪುಟ ಅನುಮೋದನೆ : ಮುಂದಿನ ವಾರದೊಳಗೆ ಚುನಾವಣೆ ಸಾಧ್ಯತೆ