ಕಿವ್: ರಷ್ಯಾದ ಆಕ್ರಮಣದ ವಿರುದ್ಧ ತಮ್ಮ ದೇಶವನ್ನು ರಕ್ಷಿಸಲು ಬಯಸುವ ಎಲ್ಲಾ ಉಕ್ರೇನಿಯನ್ ನಾಗರಿಕರಿಗೆ ಸರ್ಕಾರವು ಶಸ್ತ್ರಾಸ್ತ್ರಗಳನ್ನು ನೀಡುತ್ತದೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಘೋಷಣೆ ಮಾಡಿದ್ದಾರೆ.
“ರಷ್ಯಾದಲ್ಲಿ ಇನ್ನೂ ತಮ್ಮ ಆತ್ಮಸಾಕ್ಷಿಯನ್ನು ಕಳೆದುಕೊಳ್ಳದ ಎಲ್ಲರಿಗೂ, ಉಕ್ರೇನ್‌ನೊಂದಿಗೆ ಸೇರಿ ಯುದ್ಧದ ವಿರುದ್ಧ ಪ್ರತಿಭಟಿಸುವ ಸಮಯ ಬಂದಿದೆ. ನಮ್ಮ ದೇಶವನ್ನು ರಕ್ಷಿಸಲು ಸಿದ್ಧರಾಗಿರುವ ಉಕ್ರೇನ್‌ನ ಎಲ್ಲಾ ನಾಗರಿಕರ ಮೇಲೆ ನಾವು ನಿರ್ಬಂಧಗಳನ್ನು ತೆಗೆದುಹಾಕುತ್ತೇವೆ. ಪ್ರಾದೇಶಿಕ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳನ್ನು ಬಳಸಿ” ಎಂದು ಅಧ್ಯಕ್ಷ ಝೆಲೆನ್ಸ್ಕಿ ಹೇಳಿದರು,
ಉಕ್ರೇನ್‌ಗೆ ಸೈನ್ಯವನ್ನು ಕಳುಹಿಸುವ ಮಾಸ್ಕೋದ ನಿರ್ಧಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಲು ಝೆಲೆನ್ಸ್ಕಿ ರಷ್ಯನ್ನರಿಗೆ ಮನವಿ ಮಾಡಿದರು.
ಇದನ್ನೂ ಓದಿ:ಆರ್ಥಿಕತೆಯ ಮೇಲೆ ಯುದ್ಧದ ಪರಿಣಾಮ: ತೈಲ ಬೆಲೆ, ಚಿನ್ನದ ಬೆಲೆ ಭಾರಿ ಏರಿಕೆ
ರಷ್ಯಾದ ದಾಳಿಯನ್ನು ನಾಜಿ ಜರ್ಮನಿಯ ದಾಳಿಗೆ ಹೋಲಿಸಿದ ಝೆಲೆನ್ಸ್ಕಿ, “ಎರಡನೇ ವಿಶ್ವಯುದ್ಧದಲ್ಲಿ ನಾಜಿ ಜರ್ಮನಿ ಮಾಡಿದಂತೆ ರಷ್ಯಾ ವಿಶ್ವಾಸಘಾತುಕವಾಗಿ ಆಕ್ರಮಣ ಮಾಡಿತು. ರಷ್ಯಾ ದುಷ್ಟ ಮಾರ್ಗವನ್ನು ಪ್ರಾರಂಭಿಸಿದೆ. ಆದರೆ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ ಮತ್ತು ಮಾಸ್ಕೋ ಏನು ಯೋಚಿಸಿದರೂ ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಡುವುದಿಲ್ಲ” ಎಂದು ಝೆಲೆನ್ಸ್ಕಿ ಟ್ವೀಟ್ ನಲ್ಲಿ ಬರೆದಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಂದು ಬೆಳಗ್ಗೆ ಉಕ್ರೇನ್ ವಿರುದ್ಧ ಯುದ್ಧ ಸಾರಿದ್ದಾರೆ.
ಇದನ್ನೂ ಓದಿ:ಉಕ್ರೇನ್ ಮೇಲ್ಯಾಕೆ ರಷ್ಯಾ ಕಣ್ಣು? ವಿವಾದದ ಮೂಲವೇನು? NATO ಕಂಡರೆ ಪುಟಿನ್ ಗೆ ಯಾಕೆ ಉರಿ?