Advertisement
ಭಾರತ ಮತ್ತು ರಷ್ಯಾ ನಡುವಿನ “ವಿಶೇಷ ಸಂಬಂಧ” ವನ್ನು ಸೂಚಿಸಿದ ಕುಲೇಬಾ, “ಭಾರತದೊಂದಿಗೆ ವಿಶೇಷ ಸಂಬಂಧವನ್ನು ಹೊಂದಿರುವ ಎಲ್ಲಾ ದೇಶಗಳು ಅಧ್ಯಕ್ಷ ಪುಟಿನ್ ಅವರಿಗೆ ಮನವಿ ಮಾಡಬಹುದು. ನಾವು ಅಧ್ಯಕ್ಷ ಪುಟಿನ್ ಅವರನ್ನು ತಲುಪಲು ಮತ್ತು ವಿವರಿಸಲು ನಾವು ಪ್ರಧಾನಿ ಮೋದಿಗೆ ಕರೆ ನೀಡುತ್ತೇವೆ. ಈ ಯುದ್ಧವು ಎಲ್ಲರ ಹಿತಾಸಕ್ತಿಗೆ ವಿರುದ್ಧವಾಗಿದೆ” ಎಂದಿದ್ದಾರೆ.
Related Articles
Advertisement
ಈ ಯುದ್ಧದಿಂದ ಭಾರತಕ್ಕೆ ರಫ್ತು ಸೇರಿದಂತೆ ಜಾಗತಿಕ ಕೃಷಿ ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಅಂಶವನ್ನೂ ಉಕ್ರೇನ್ ವಿದೇಶಾಂಗ ಸಚಿವರು ಗಮನಸೆಳೆದಿದ್ದಾರೆ.
“ಭಾರತವು ಉಕ್ರೇನಿಯನ್ ಕೃಷಿ ಉತ್ಪನ್ನಗಳ ಅತಿದೊಡ್ಡ ಗ್ರಾಹಕರಲ್ಲಿ ಒಂದಾಗಿದೆ ಎಂದು ನಾವು ಗಣನೆಗೆ ತೆಗೆದುಕೊಳ್ಳಬೇಕಾಗಿದೆ. ಈ ಯುದ್ಧವು ಮುಂದುವರಿದರೆ, ನಮಗೆ ಹೊಸ ಬೇಸಾಯವನ್ನು ಬಿತ್ತಲು ಮತ್ತು ನಂತರ ಸಂಗ್ರಹಿಸಲು ಕಷ್ಟವಾಗುತ್ತದೆ. ಜಾಗತಿಕ ಆಹಾರ ಭದ್ರತೆ ಮತ್ತು ಭಾರತೀಯ ಆಹಾರ ಭದ್ರತೆಯ ವಿಷಯದಲ್ಲಿ ಈ ಯುದ್ಧವನ್ನು ನಿಲ್ಲಿಸುವುದು ಅಗತ್ಯವಾಗಿದೆ” ಎಂದು ಉಕ್ರೇನ್‌ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಹೇಳಿದರು.