Advertisement

ಬೆಲಾರಸ್‌ನಿಂದ ಉಕ್ರೇನ್‌ನತ್ತ ರಷ್ಯಾ ಗುರಿ

08:10 PM Feb 07, 2022 | Team Udayavani |

ಮಾಸ್ಕೊ: ಉಕ್ರೇನ್‌ ವಿರುದ್ಧ ತೊಡೆ ತಟ್ಟಿ ನಿಂತಿರುವ ರಷ್ಯಾ, ತನ್ನ ಮತ್ತೊಂದು ನೆರೆಯ ರಾಷ್ಟ್ರವಾದ ಬೆಲಾರಸ್‌ನ ಕಡೆಯಿಂದಲೂ ಉಕ್ರೇನ್‌ನತ್ತ ಗುರಿಯಿಟ್ಟಿರುವುದು ಉಪಗ್ರಹ ಚಿತ್ರಗಳ ಮೂಲಕ ತಿಳಿದುಬಂದಿದೆ.

Advertisement

ಅತ್ಯಾಧುನಿಕವಾದ ಜಗತ್ತಿನ ಅತ್ಯಂತ ಪ್ರಬಲವಾದದ್ದೆಂದು ಪರಿಗಣಿಸಲ್ಪಟ್ಟಿರುವ, ಸ್ವದೇಶಿ ನಿರ್ಮಿತ “ಎಸ್‌-400 ಕ್ಷಿಪಣಿ ನಿಗ್ರಹ ವ್ಯವಸ್ಥೆ’ಯನ್ನು, ಅತ್ಯಂತ ಶಕ್ತಿಶಾಲಿಯಾದ ಕ್ಷಿಪಣಿಗಳಲ್ಲೊಂದಾದ “ಇಸ್ಕಾಂಡರ್‌’ ಮಾದರಿಯ ಖಂಡಾಂತರ ಕ್ಷಿಪಣಿ ಉಡಾವಣಾ ವ್ಯವಸ್ಥೆಯನ್ನು ಉಕ್ರೇನ್‌-ಬೆಲಾರಸ್‌ ಗಡಿಯುದ್ದಕ್ಕೂ ನಿಯೋಜಿಸಲಾಗಿದೆ.

ಉಕ್ರೇನ್‌ ಗಡಿಯಿಂದ ಕೇವಲ 50 ಕಿ.ಮೀ. ದೂರದಲ್ಲೇ ಇವನ್ನು ಅಳವಡಿಸಿವೆ ಎಂದು ನ್ಯಾಟೋ ಪಡೆಗಳು ತಿಳಿಸಿವೆ. ರಷ್ಯಾ ಮತ್ತು ಬೆಲಾರಸ್‌ ಕೂಡ ಈ ಜಮಾವಣೆ ಕುರಿತಂತೆ ಜಂಟಿ ಪ್ರಕಟಣೆ ಹೊರಡಿಸಿವೆ.

ಮತ್ತೊಂದೆಡೆ, ರಷ್ಯಾ ಮತ್ತು ಉಕ್ರೇನ್‌ನ ನಡುವೆ ಯಾವುದೇ ಕ್ಷಣದಲ್ಲೂ ಯುದ್ಧ ಸಂಭವಿಸಬಹುದು ಎಂದು ಅಮೆರಿಕ ಹೇಳಿದೆ.

ಇದನ್ನೂ ಓದಿ:ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 5030 ಕೋಟಿ ರೂ. ಅನುದಾನಕ್ಕಾಗಿ ಮುಖ್ಯಮಂತ್ರಿ ಮನವಿ

Advertisement

ಮ್ಯಾಕ್ರನ್‌ ಸಂಧಾನ ಯತ್ನ
ಉಕ್ರೇನ್‌- ರಷ್ಯಾ ನಡುವಿನ ಸಂಭಾವ್ಯ ಯುದ್ಧವನ್ನು ನಿಲ್ಲಿಸಲು ಪ್ರಯತ್ನಿಸುತ್ತಿರುವ ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರನ್‌, ರಷ್ಯಾಕ್ಕೆ ಸದ್ಯದಲ್ಲೇ ಭೇಟಿ ನೀಡಿ, ಅಲ್ಲಿನ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಮತ್ತೊಂದೆಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಂಧಾನ ಕಾರ್ಯಗಳು ನಡೆಯುತ್ತಿದ್ದು, ಇವೆಲ್ಲವೂ ಫ‌ಲಪ್ರದವಾಗಲಿವೆ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next