Advertisement
ಉಕ್ಕುಡ ನಿವಾಸಿ ಅಬ್ಟಾಸ್ ಹಾಜಿ ಮನೆ ಮಂದಿ ಬುಧವಾರ ಸಂಜೆ ಗಂಟೆ 5.30ಕ್ಕೆ ಮನೆಗೆ ಬೀಗ ಹಾಕಿ ಕುಂಬ್ರದಲ್ಲಿರುವ ಬಂಧುಗಳ ಮನೆಗೆ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ, ರಾತ್ರಿ 12.30ಕ್ಕೆ ಮನೆಗೆ ಹಿಂದಿರುಗಿದ್ದು, ಬಾಗಿಲು ತೆಗೆದು ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಕಳ್ಳತನ ನಡೆದಿರುವುದು ತಿಳಿದುಬಂತು. ಹಿಂಬಾಗಿಲು ತೆರೆದುಕೊಂಡಿತ್ತು. ಮನೆಯೊಳಗೆ ಬಟ್ಟೆ ಬರೆಗಳು ಚೆಲ್ಲಾಪಿಲ್ಲಿಯಾಗಿದ್ದವು. ಕಳ್ಳರು ಕಪಾಟುಗಳನ್ನು ಜಾಲಾಡಿರುವುದು ಸ್ಪಷ್ಟವಾಯಿತು.
ಚಿನ್ನ ಅಕ್ಕಿ ಡಬ್ಬದಲ್ಲಿತ್ತು !
Related Articles
Advertisement
ಮನೆಯವರು ರಾತ್ರಿಯೇ ವಿಟ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ತತ್‌ಕ್ಷಣ ಆಗಮಿಸಿದ ಪೊಲೀಸರು ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಗುರುವಾರ ಬಂಟ್ವಾಳ ವೃತ್ತ ನಿರೀಕ್ಷಕ ಪ್ರಕಾಶ್ ಭೇಟಿ ನೀಡಿ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ಜತೆ ತನಿಖೆ ಆರಂಭಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮುಖ್ಯ ರಸ್ತೆಗೆ ತಲುಪಿ ಅತ್ತಿತ್ತ ನೋಡಿದ ಶ್ವಾನ !ಉಕ್ಕುಡ ಚೆಕ್ ಪೋಸ್ಟ್‌ನಿಂದ ಆಲಂಗಾರು ಸಂಪರ್ಕಿಸುವ ಡಾಮರು ರಸ್ತೆಯಲ್ಲಿ ಚೆಕ್ ಪೋಸ್ಟ್ ನಿಂದ ಸುಮಾರು 100 ಮೀಟರ್ ಹೋಗುತ್ತಿದ್ದಂತೆ ಎಡ ಬದಿಗೆ 50 ಮೀಟರ್ ದೂರದಲ್ಲಿ ಅಬ್ಟಾಸ್ ಹಾಜಿ ಅವರ ಮನೆಯಿದೆ. ಮನೆಯ ಹಿಂಭಾಗದಿಂದ ಹೊರಟ ಶ್ವಾನದಳ ಮನೆಗೆ ಸುತ್ತು ಹೊಡೆದು 50 ಮೀಟರ್ ಕಚ್ಛಾ ರಸ್ತೆಯಲ್ಲಿ ಓಡಿ ಡಾಮರು ರಸ್ತೆಯ ಬಳಿ ಹೋಗಿ ನಿಂತು ಅತ್ತಿತ್ತ ನೋಡಿದೆ. ಆದುದರಿಂದ ಕಳ್ಳರು ಮುಖ್ಯ ರಸ್ತೆಯಿಂದ ವಾಹನದಲ್ಲಿ ತೆರಳಿರುವ ಸಾಧ್ಯತೆಯಿದೆ ಎನ್ನಲಾಗುತ್ತದೆ. ಸಿಸಿಟಿವಿಯಲ್ಲಿ ದಾಖಲಾಗಿರಬಹುದೇ ?
ಉಕ್ಕುಡ ಚೆಕ್ ಪೋಸ್ಟ್ ನಲ್ಲಿರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಮುಂಭಾಗದಲ್ಲಿ ಹೋಗುವ ರಸ್ತೆಯನ್ನೇ ಕಳ್ಳರು ಬಳಸಿರುವ ಸಾಧ್ಯತೆಯನ್ನು ಶ್ವಾನದಳದ ತನಿಖೆ ಖಚಿತ ಪಡಿಸಿದೆ. ಚೆಕ್ ಪೋಸ್ಟ್ ನಲ್ಲಿರುವ ಸಿಸಿಟಿವಿಯಲ್ಲಿ ರಸ್ತೆಯ ಮುಂಭಾಗ ದಾಖಲಾಗುತ್ತಿದೆ. ಆ ಮೂಲಕ ಮಾಹಿತಿ ಸಿಗುವ ಸಾಧ್ಯತೆ ಇದೆ ಎಂದು ನಾಗರಿಕರು ಆಡಿಕೊಳ್ಳುತ್ತಿದ್ದರು.