ಕಾಸರಗೋಡು: ಕೊಲ್ಲಿ ಉದ್ಯಮಿ ಪಳ್ಳಿಕ್ಕೆರೆ ಪೂಚಕ್ಕಾಡ್ ಫಾರೂಕಿ ಮಸೀದಿ ಬಳಿಯ ಬೈತುಲ್ ಮಂಜಿಲ್ ನಿವಾಸಿ ಎಂ.ಸಿ. ಅಬ್ದುಲ್ ಗಫೂರ್ ಹಾಜಿ (55) ಅವರನ್ನು ಕೊಲೆಗೈದು 596 ಪವನ್ ಚಿನ್ನಾಭರಣವನ್ನು ದರೋಡೆ ಮಾಡಿದ ಪ್ರಕರಣದಲ್ಲಿ ಬಂಧಿತರಾದ ನಾಲ್ವರು ಕಣ್ಣೂರು ಸೌತ್ ಬಜಾರ್‌ನಲ್ಲಿ ಬ್ಯೂಟಿ ಪಾರ್ಲರ್ ಆರಂಭಿಸಿದ್ದು 10 ಲಕ್ಷ ರೂ. ವ್ಯಯಿಸಿದ್ದಾರೆಂದೂ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಅಲ್ಲದೆ ಕಣ್ಣೂರು ಪೇಟೆಯಲ್ಲಿ ಅಕ್ಯುಪಂಕ್ಚರ್ ಕೇಂದ್ರವನ್ನು ಆರಂಭಿಸಿದ್ದಾರೆಂದು ತಿಳಿದು ಬಂದಿದೆ.
ಕಣ್ಣೂರಿನಲ್ಲಿ ವಾಸಿಸುತ್ತಿದ್ದ ಆರೋಪಿಗಳ ವಸತಿಯನ್ನು ಪರಿಶೀಲಿಸಿ ಅಲ್ಲಿಂದ ಮಂತ್ರವಾದಕ್ಕಾಗಿ ಬಳಸುವ ಭಸ್ಮ, ನೂಲು, ತಾಯತ ಮೊದಲಾದವುಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪ್ರಕರಣದ ಹೆಚ್ಚಿನ ತನಿಖೆಗಾಗಿ ಕಾಸರಗೋಡು ಜಿಲ್ಲಾ ಸೆಶನ್ಸ್ ನ್ಯಾಯಾಲಯ ಆರೋಪಿಗಳನ್ನು ಐದು ದಿನಗಳ ಅವಧಿಗೆ ಪೊಲೀಸರ ಕಸ್ಟಡಿಗೆ ನೀಡಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಧೂರು ಉಳಿಯತ್ತಡ್ಕ ನ್ಯಾಶನಲ್ ನಗರ ತುರ್ತಿ ನಿವಾಸಿ ಟಿ.ಎಂ. ಉಬೈಸ್ (32), ಪತ್ನಿ ಮಂತ್ರವಾದಿ ಶಮೀಮ ಕೆ.ಎಚ್. (35), ಪೂಚಕ್ಕಾಡ್‌ನ ಅನ್ಸಿàಫ್ ಟಿ.ಎಂ. (36) ಮತ್ತು ಮಧೂರು ಕೊಲ್ಯದ ಆಯಿಷ (43) ಅವರನ್ನು ಬಂಧಿಸಲಾಗಿತ್ತು.