Advertisement

UK ವಿಶ್ವದಲ್ಲೇ ಬಲಿಷ್ಠ ಲೇಸರ್‌ ನಿರ್ಮಾಣ? ಸೂರ್ಯನಿಗಿಂತಲೂ ಶತಕೋಟಿ ಪಟ್ಟು ಪ್ರಕಾಶಮಾನ

12:02 AM Sep 29, 2023 | Team Udayavani |

ಲಂಡನ್‌: ವಿಶ್ವದಲ್ಲೇ ಅತ್ಯಂತ ಬಲಿಷ್ಠವಾದ ಲೇಸರ್‌ ಅನ್ನು ನಿರ್ಮಿಸಲು ಯುನೈಟೆಡ್‌ ಕಿಂಗ್‌ಡಮ್‌ ಸಜ್ಜಾಗಿದೆ. ಇದು ಸೂರ್ಯನಿಗಿಂತಲೂ ಶತಕೋಟಿಗಳಿಗೂ ಅಧಿಕ ಪಟ್ಟು ಪ್ರಕಾಶಮಾನವಾಗಿರುತ್ತದೆ ಎಂದು ದಿ ಟೈಮ್ಸ್‌ ವರದಿ ಮಾಡಿದೆ.

Advertisement

ಯುಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸೌಲಭ್ಯ ಮಂಡಳಿ(ಎಸ್‌ಟಿಎಫ್ಸಿ)ಯ ವಲ್ಕನ್‌ ವ್ಯವಸ್ಥೆಯನ್ನು ಜಗತ್ತಿನಲ್ಲೇ ಅತ್ಯಂತ ಪ್ರಬಲ ಲೇಸರ್‌ ಆಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 85 ದಶಲಕ್ಷ ಪೌಂಡ್‌ ಮೊತ್ತವನ್ನು ಒದಗಿಸಲಾಗಿದೆ. ಈ ಸಾಧನಕ್ಕೆ “ವಲ್ಕನ್‌ 20-20′ ಎಂದು ಹೆಸರಿಡಲಾಗುತ್ತದೆ.

ಆಕ್ಸ್‌ಫ‌ರ್ಡ್‌ ಶೈರ್‌ನಲ್ಲಿರುವ ಎಸ್‌ಟಿಎಫ್ಸಿಯ ಕೇಂದ್ರ ಲೇಸರ್‌ ಸ್ಥಾವರದಲ್ಲಿ ಇದನ್ನು ನಿರ್ಮಿಸಲಾಗುತ್ತದೆ. ಇದು ಸ್ವಚ್ಛ ಇಂಧನ, ಕ್ಯಾನ್ಸರ್‌ ಚಿಕಿತ್ಸೆ ಸೇರಿದಂತೆ ವಿವಿಧ ವಲಯಗಳಲ್ಲಿ ಹೊಸ ಆವಿ ಷ್ಕಾರಗಳಿಗೆ ನೆರವಾಗಲಿದೆ ಮಾತ್ರವಲ್ಲ, ವೈಜ್ಞಾನಿಕ ಸಂಶೋಧನೆಯಲ್ಲಿ ಕ್ರಾಂತಿಯನ್ನು ಉಂಟು ಮಾಡಲಿದೆ ಎಂದು ಹೇಳಲಾಗಿದೆ.

ಈ ಸಾಧನವು 20 ಪೆಟಾ ವ್ಯಾಟ್ಸ್‌ ಶಕ್ತಿಯನ್ನೊಳಗೊಂಡ ಪ್ರಧಾನ ಲೇಸರ್‌ ಕಿರಣವನ್ನು, ಜತೆಗೆ 20 ಕಿಲೋಜೌಲ್ಸ್‌ನ 8 ಅಧಿಕ ಶಕ್ತಿಯನ್ನೊಳಗೊಂಡ ಕಿರಣಗಳನ್ನು ಉತ್ಪತ್ತಿ ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next