Advertisement

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

06:20 PM Nov 15, 2024 | Team Udayavani |

ಲಂಡನ್‌: ಭಾರತೀಯ ಹಿಂದುಗಳನ್ನು ಓಲೈಸಲು ಮೊದಲ ಬಾರಿ ಬ್ರಿಟನ್‌ ಪ್ರಧಾನಿ ಕೀರ್‌ ಸ್ಟರ್ಮರ್‌ ಆಯೋಜಿಸಿದ್ದ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ ಉಣಬಡಿಸಿದುದರ ಕುರಿತು ಭಾರೀ ಆಕ್ರೋಶ ವ್ಯಕ್ತವಾವಾಗಿದ್ದು, ಆ ಬಗ್ಗೆ ತಡವಾಗಿ ಬ್ರಿಟನ್‌ ಪ್ರಧಾನಿ ಕಾರ್ಯಾಲ­ಯ ಕ್ಷಮೆ ಯಾಚನೆ ಮಾಡಿದೆ.

Advertisement

ಅ.29ರಂದು ಪ್ರಧಾನಿಗಳ ಅಧಿಕೃತ ನಿವಾಸದಲ್ಲಿ ದೀಪಾ­ವಳಿ ಪಾರ್ಟಿ ಆಯೋ­­ಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಪ್ರಾರ್ಥನೆ, ಹಣತೆಗಳ ಬೆಳಗುವಿಕೆ, ಪ್ರಧಾನಿಗಳ ಭಾಷಣ ಮತ್ತು ಸಾಂಪ್ರ­ದಾಯಿಕ ಭಾರತೀಯ ನೃತ್ಯವನ್ನು ಏರ್ಪ­ಡಿಸಲಾಗಿತ್ತು. ಜತೆಗೆ ಅತಿಥಿಗಳಿಗೆ ಕುರಿ ಕಬಾಬ್‌, ಮೀನು, ಬಿಯರ್‌, ವೈನ್‌ ಬಡಿಸಲಾಗಿತ್ತು.

ಸ್ಟರ್ಮರ್‌ ಕಚೇರಿಯ ವಕ್ತಾರ ಹಿಂದೂ ಸಮುದಾಯದ ಕಾಳಜಿಯನ್ನು ಒಪ್ಪಿಕೊಂಡು ಮುಂದಿನ ಆಚರಣೆಗಳಲ್ಲಿ ಈ ರೀತಿ ಮತ್ತೆ ಸಂಭವಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ PTI ಯ ವರದಿ ತಿಳಿಸಿದೆ.

ಈ ವೇಳೆ ಕೆಲ ಅತಿ­ಥಿಗಳು ತಮ್ಮ ಅಕ್ರೋಶವನ್ನು ಅಲ್ಲಿಯೇ ಕೆಟರಿಂಗ್‌ ಸಿಬಂದಿ ವಿರುದ್ಧ ತೋರಿಸಿ­ದ್ದರು. ಆದರೆ ಅವರು ಆರ್ಡರ್‌ ಮಾಡಿರುವುದನ್ನು ಬಡಿಸಿರು­ವುದಾಗಿ ಹೇಳಿದ್ದರು. ದೀಪಾವಳಿ ಧಾರ್ಮಿಕ ಮಹ­­ತ್ವ­ವನ್ನೂ ಹೊಂದಿದೆ. ಹೀಗಾಗಿ ಸಾತ್ವಿಕ ಆಹಾರ ಬಡಿಸಬೇಕಿತ್ತು. ಮುಂದೆ ಮಾಂಸಾಹಾರ, ಮದ್ಯ ಉಣ­ಬಡಿ­ಸುವು­ದಾದರೆ ದೀಪಾವಳಿ ಪಾರ್ಟಿ­ಯನ್ನೇ ಆಯೋಜಿಸುವುದು ಬೇಡ ಎಂದು ಹಿಂದೂಗಳು ತೀವ್ರ ಆಕ್ರೋಶ ಹೊರ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next