Advertisement

ಜಲಿಯಾನ್‌ವಾಲಾ ಬಾಗ್‌ : ಬ್ರಿಟಿಷ್‌ ಭಾರತೀಯ ಇತಿಹಾಸದ ನಿರ್ಲಜ್ಜ ಕಲೆ: ತೆರೆಸಾ ಮೇ

09:50 AM Apr 12, 2019 | Sathish malya |

ಲಂಡನ್‌ : ಜಲಿಯಾನ್‌ವಾಲಾ ಬಾಗ್‌ ಹತ್ಯಾಕಾಂಡ ಬ್ರಿಟಿಷ್‌ ಭಾರತೀಯ ಇತಿಹಾಸದಲ್ಲಿನ ಅತ್ಯಂತ ನಿರ್ಲಜ್ಜ ಕಲೆ ಎಂದು ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಇಂದು ಬುಧವಾರ ಹೇಳಿದ್ದಾರೆ.

Advertisement

ಸರಿಸುಮಾರು ನೂರು ವರ್ಷಗಳ ಹಿಂದೆ, 1919ರ ಎಪ್ರಿಲ್‌ 13ರಂದು ಪಂಜಾಬ್‌ನ ಜಲಿಯಾನ್‌ವಾಲಾ ಬಾಗ್‌ ನಲ್ಲಿ ಜನರಲ್‌ ರೆಜಿನಾಲ್ಡ್‌ ಡಯರ್‌ ಅತ್ಯಂತ ನಿರ್ದಯತೆಯಿಂದ ನಡೆಸಿದ್ದ ನೂರಾರು ಭಾರತೀಯರ ನರಮೇಧ ಮತ್ತು ಸಾವಿರಾರು ಜನರು ಗುಂಡೇಟಿನಿಂದ ಗಾಯಗೊಳ್ಳುವಂತೆ ಮಾಡಿದ ಹೀನಕೃತ್ಯಕ್ಕೆ ಬ್ರಿಟನ್‌ ಭಾರತೀಯರಲ್ಲಿ ಕ್ಷಮೆ ಯಾಚಿಸಬೇಕೆಂಬ ಒತ್ತಡ ಹೆಚ್ಚುತ್ತಿದೆ.

ಈ ನಡುವೆ ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಅವರು, “ಭಾರತೀಯ ಬ್ರಿಟಿಷ್‌ ಇತಿಹಾಸದಲ್ಲಿ ಇದೊಂದು ಅತ್ಯಂತ ದುರದೃಷ್ಟಕರ ಘಟನೆ; ನಾವು ಈ ದುರಂತಕ್ಕೆ ಮತ್ತು ಇದರಿಂದ ತೀವ್ರ ವೇದನೆಗೆ ಗುರಿಯಾದವರ ಬಗ್ಗೆ ವಿಷಾದ ಹೊಂದಿದ್ದೇವೆ’ ಎಂದು ಹೇಳಿದರು.

ಒಂದು ದಿನದ ಹಿಂದಷ್ಟೇ ಬ್ರಿಟನ್‌ನ ವಿದೇಶ ಸಚಿವ ಮಾರ್ಕ್‌ ಫೀಲ್ಡ್‌ ಅವರು, “ಹಿಂದೆ ಆಗಿ ಹೋಗಿರುವ ನಿರ್ಲಜ್ಜ ಘಟನೆಗಳನ್ನು ಕೆಂಪಕ್ಷರದಲ್ಲಿ ಕಾಣಿಸಬೇಕಾಗಿದೆ; ಆದರೆ ಬ್ರಿಟನ್‌ ವಸಾಹತುಗಳಲ್ಲಿ ನಡೆದಿರುವ ಘಟನೆಗಳಿಗೆ ಪದೇ ಪದೇ ಕ್ಷಮೆಯಾಚನೆ ಮಾಡುವುದರಿಂದ ನಮಗೆ ಆರ್ಥಿಕ ತೊಂದರೆಗಳಿಗೆ ಕಾರಣವಾಗುತ್ತದೆ; ಭಾರತದೊಂದಿಗಿನ ಸಂಬಂಧಗಳು ಈಗಿನ ವಿಷಯಗಳಿಗೆ ಸಂಬಂಧಿಸಿ ಇರಬೇಕೇ ಹೊರತು ಗತಿಸಿ ಹೋಗಿರುವ ನಿರ್ಲಜ್ಜ ಘಟನೆಗಳಿಂದ ಪ್ರಭಾವಿತವಾಗಬೇಕಾದ ಅಗತ್ಯ ಇರುವುದಿಲ್ಲ’ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next