Advertisement

ಬ್ರಿಟನ್‌ ಸಂಸತ್ತಿನಲ್ಲಿ ಸಂಭ್ರಮದಿಂದ ದೀಪಾವಳಿ ಆಚರಣೆ

08:55 PM Oct 18, 2022 | Team Udayavani |

ಲಂಡನ್‌: ಯುನೈಟೆಡ್‌ ಕಿಂಗ್‌ಡಂನ ಸಂಸತ್‌ ಭವನದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಲಾಯಿತು.

Advertisement

ಸಂಸತ್‌ ಭವನದ ಸ್ಪೀಕರ್‌ ಹೌಸ್‌ನ ಸ್ಟೇಟ್‌ ರೂಮ್ಸ್‌ನಲ್ಲಿ ಕಾರ್ಯಕ್ರಮ ಜರುಗಿದ್ದು, ಸಂಸದರು, ಪಕ್ಷಗಳ ನಾಯಕರು, ಸಮುದಾಯದ ನಾಯಕರು ಹಾಗೂ ಅಂತರರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘ(ಇಸ್ಕಾನ್‌)ದ ಪ್ರತಿನಿಧಿಗಳು ಭಾಗವಹಿಸಿದ್ದರು.

ಇಸ್ಕಾನ್‌ನ ಪುರೋಹಿತರು ಶಾಂತಿ ಮಂತ್ರಗಳ ಪಠಣೆ ಮಾಡಿದ್ದು, ದೀಪಗಳನ್ನು ಹಚ್ಚುವ ಮೂಲಕ ಕಾರ್ಯಕ್ರಮವನ್ನು ಚಂದಗಾಣಿಸಲಾಗಿದೆ.

“ಬ್ರಿಟನ್‌ ಹಾಗೂ ವಿಶ್ವಾದ್ಯಂತ ಇರುವ ಸಮುದಾಯಕ್ಕೆ ನಾನು ಈ ದೀಪಾವಳಿ ಸುಖ ಮತ್ತು ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ’ ಎಂದು ಸಂಸತ್ತಿನ ಸ್ಪೀಕರ್‌ ಹೊಯ್ಲೆ ಶುಭಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next