Advertisement

ಆನ್ ಲೈನ್ ದೋಖಾ …ಊಟ ಆರ್ಡರ್ ಮಾಡಿದವನ ಮನೆಗೆ ಬಂತು ಮೂತ್ರದ ಬಾಟಲ್  

09:27 PM Feb 22, 2021 | Team Udayavani |

ಲಂಡನ್ : ಇತ್ತೀಚಿಗೆ ಎಲ್ಲವೂ ಆನ್ ಲೈನ್ ಮಯವಾಗಿದೆ. ಒಂದು ಚಿಕ್ಕ ಸೂಜಿಯಿಂದ ಹಿಡಿದು ಹೊಟ್ಟೆಗೆ ಆಹಾರಕ್ಕೂ ಆನ್ ಲೈನ್ ಆ್ಯಪ್ ಗಳ ಮೊರೆ ಹೋಗುವುದು ಜಾಸ್ತಿಯಾಗಿದೆ. ಹೀಗೆ ಊಟ ಬೇಕೆಂದು ಆ್ಯಪ್ ನಲ್ಲಿ ಆರ್ಡರ್ ಮಾಡಿದ ಗ್ರಾಹಕನೋರ್ವನಿಗೆ ಮನುಷ್ಯರ ಮೂತ್ರದ ಬಾಟಲ್ ಬಂದಿದೆ.

Advertisement

ಹೌದು, ಇದು ಲಂಡನ್ ನಲ್ಲಿ ನಡೆದಿರುವ ಘಟನೆ. ಒಲೆವೆರ್ ಹೆಸರಿನ ವ್ಯಕ್ತಿಯೋರ್ವ ಪ್ರಸಿದ್ಧ ಆ್ಯಪ್ ವೊಂದರಲ್ಲಿ ಊಟಕ್ಕೆ ಆರ್ಡರ್ ಮಾಡಿದ್ದರು. ಊಟವೇನು ಮನೆ ಬಾಗಿಲಿಗೆ ಬಂದಿತ್ತು. ಆದರೆ, ಅದರ ಜತೆ ಕೋಕೋಕೋಲಾ ಬಾಟಲಿಯಲ್ಲಿ ಮನುಷ್ಯರ ಮೂತ್ರ ಇರುವುದನ್ನು ನೋಡಿ ಆತ ಶಾಕ್ ಆಗಿದ್ದ. ಕೂಡಲೇ ಈ ಚಿತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡು, ಆ್ಯಪ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾನು ಊಟವಷ್ಟೇ ಆರ್ಡರ್ ಮಾಡಿದ್ದೆ, ಇದನ್ನೇಕೆ ಕಳುಹಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ತಮ್ಮಿಂದಾದ ಪ್ರಮಾದ ಒಪ್ಪಿಕೊಂಡಿರುವ ‘ಫುಡ್ ಸರ್ವಿಸ್’ ಆ್ಯಪ್ ಒಲೆವೆರ್ ಅವರ ಕ್ಷಮೆಯಾಚಿಸಿದೆ. ಜತೆಗೆ ಘಟನೆ ಕುರಿತು ತನಿಖೆ ನಡೆಸುತ್ತೇವೆ ಎಂದು ಸ್ಪಷ್ಟನೆ ನೀಡಿದೆ.

 

ಒಲೆವೆರ್ ಮಾಡಿರುವ ಟ್ವೀಟ್ ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ಮುಂದೆ ಊಟದ ಜತೆ ಜ್ಯೂಸ್ ಕೊಡುವುದನ್ನು ನಿಲ್ಲಿಸುವಂತೆ ಆ್ಯಪ್ ಗೆ ಸಲಹೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next