ವಾಷಿಂಗ್ಟನ್: ತಾನು ತನ್ನ ಪತಿಗೆ ವಿಚ್ಛೇದನ ನೀಡಿದ್ದೇನೆ ಎಂಬ ವಿಚಾರವು 12 ವರ್ಷಗಳವರೆಗೂ ಪತ್ನಿಗೇ ಗೊತ್ತಿರದಿದ್ದರೆ? ಇಂಥದ್ದೊಂದು ಪ್ರಕರಣ ಅಮೆರಿಕದ ಬರ್ಕ್‌ಶೈರ್‌ನಲ್ಲಿ ನಡೆದಿದೆ.
ಭಾರತೀಯ ದಂಪತಿಯಾದ ರಚ್‌ಪಾಲ್ ಮತ್ತು ಕೇವಾಲ್ ರಾಂಧವ ಅವರು 1978ರಲ್ಲಿ ಬರ್ಕ್‌ಶೈರ್‌ನ ನೋಂದಣಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದರು. 2009ರಲ್ಲಿ ಇವರಿಬ್ಬರೂ ವಿಚ್ಛೇದನ ಪಡೆದಿದ್ದರು. ಅನಂ ತರವೂ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ದಂಪತಿಯಿಬ್ಬರೂ ಪಾಲ್ಗೊಳ್ಳುತ್ತಿದ್ದರು. ಈಗ ಕೌಟುಂಬಿಕ ನ್ಯಾಯಾಲಯವೊಂದು ಈ ದಂಪತಿಯ ವಿಚ್ಛೇದನವನ್ನೇ ವಜಾ ಮಾಡಿದೆ.
ರಾಂಧವಾ ಅವರ ಪತ್ನಿ ರಚ್‌ಪಾಲ್ ಅವರ ಸಹಿಯನ್ನು ಯಾರೋ ಫೋರ್ಜರಿ ಮಾಡಿ, ವಿಚ್ಛೇದನ ಪತ್ರದಲ್ಲಿ ಹಾಕಿದ್ದರು. ಹೀಗಾಗಿ ವಿಚ್ಛೇದನವಾಗಿರುವುದು ಸ್ವತಃ ರಚ್‌ಪಾಲ್ ಅವರಿಗೇ ಗೊತ್ತಿಲ್ಲ. ಈ ಕಾರಣಕ್ಕಾಗಿಯೇ ಡೈವೋರ್ಸ್ ಅನ್ನು ರದ್ದುಗೊಳಿಸುತ್ತಿದ್ದೇವೆ ಎಂದು ಕೋರ್ಟ್ ಹೇಳಿದೆ.
ಇದನ್ನೂ ಓದಿ:“ಶಾಕುಂತಲ’ ಪಾತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ಚಿತ್ರನಟಿ ಸಮಂತಾ ರುತ್ ಪ್ರಭು
ವಾಸ್ತವದಲ್ಲಿ ಕೇವಾಲ್ ರಾಂಧವ ಅವರು ಪತ್ನಿಗೆ ಗೊತ್ತಿಲ್ಲ ದಂತೆ 2011ರಲ್ಲಿ ಬೇರೊಬ್ಬ ಮಹಿಳೆಯನ್ನು ವಿವಾಹವಾಗಿ ದ್ದರು. ಅವರಿಗೆ ಒಂದು ಮಗುವೂ ಆಗಿತ್ತು. ರಾಂಧವ ಅವರಿಗೆ ಅನ್ಯಮಹಿಳೆಯೊಂದಿಗೆ ಸ್ನೇಹವಿರುವುದು ರಚ್‌ಪಾಲ್‌ರಿಗೆ ಗೊತ್ತಿತ್ತು. ಆದರೆ ಅವರ ವಿವಾಹವಾಗಿದ್ದು ಗೊತ್ತಿ ರಲಿಲ್ಲ. ಅಲ್ಲದೇ ತಮ್ಮ ಸಹಿಯನ್ನು ಯಾರೋ ನಕಲು ಮಾಡಿ ವಿಚ್ಛೇದನ ಪ್ರಕ್ರಿಯೆ ಮುಗಿಸಿದ್ದರು ಎಂಬ ವಿಚಾರವೂ ಅವರ ಅರಿವಿಗೇ ಬಂದಿರಲಿಲ್ಲ.