ಲಂಡನ್: ಇಂಗ್ಲೆಂಡ್ ನಲ್ಲಿ ಮೊದಲು ಪತ್ತೆಯಾದ ಕೋವಿಡ್ ವೈರಸ್ ನ ಹೊಸ ರೂಪಾಂತರವು ಮತ್ತಷ್ಟು ಮಾರಣಾಂತಿಕವಾಗಿ ಅತೀ ಹೆಚ್ಚು ಸಾವುಗಳು ಸಂಭವಿಸಬಹುದು. ಈಗಾಗಲೇ ಅಮೆರಿಕಾ ಸೇರಿದಂತೆ ಜಗತ್ತಿಗೆ ಈ ವೈರಸ್ ಹರಡಲು ಆರಂಭಿಸಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ.
ಹೊಸ ವೈರಸ್ ಹೆಚ್ಚು ಅಪಾಯಕಾರಿಯಾಗಿದ್ದು, 30 ರಿಂದ 70 ಪ್ರತಶತದಷ್ಟು ಪರಿಣಾಮ ಬೀರುತ್ತದೆ. ಲಂಡನ್ ನಲ್ಲಿ ಕಂಡು ಬಂದಿರುವ ರೂಪಾಂತರಿ ಕೋವಿಡ್ ವೈರಸ್ ವೇಗವಾಗಿ ಹರಡುವ ಜೊತೆಗೆ ಸಾವಿನ ಪ್ರಮಾಣವನ್ನು ಹೆಚ್ಚಿಸುತ್ತಿದೆ ಎಂಬುದಕ್ಕೆ ಪುರಾವೆಗಳು ಸಿಕ್ಕಿವೆ. ಹೀಗಾಗಿ ರಾಷ್ಟ್ರೀಯ ಆರೋಗ್ಯ ಸೇವೆ ಒತ್ತಡದಲ್ಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರೈತ ಮುಖಂಡರಿಗೆ ಗುಂಡಿಕ್ಕಿ, ರ‍್ಯಾಲಿ ಚದುರಿಸಲು ಸಂಚು: ಓರ್ವನ ಸೆರೆಹಿಡಿದ ರೈತರು
ವಿಜ್ಞಾನಿಗಳು ನೀಡಿರುವ ಪ್ರಾಥಮಿಕ ಡೇಟಾದ ಆಧಾರದ ಮೇಲೆ ಜಾನ್ಸನ್ ಹೊಸ ರೂಪಾಂತರ ವೈರಸ್ ಮತ್ತಷ್ಟು ಮಾರಕವೆಂದು ತಿಳಿಸಿದ್ದಾರೆ. ಮಾತ್ರವಲ್ಲದೆ ಪೈಜರ್, ಬಯೋಟೆಕ್, ಆಸ್ಟ್ರಜೆನಾಕ, ಆಕ್ಸ್ ಫರ್ಡ್ ಲಸಿಕೆಗಳನ್ನು ಬ್ರಿಟನ್ ನಲ್ಲೂ ನೀಡಲಾಗುತ್ತಿದೆ ಎಂದಿದ್ದಾರೆ.
60 ವರ್ಷ ವಯಸ್ಸಿನ ವ್ಯಕ್ತಿಗೆ ಹೊಸ ರೂಪಾಂತರ ವೈರಸ್ ನಿಂದ ಸಾವಿನ ಪ್ರಮಾಣ 1000ದಲ್ಲಿ 13ರಷ್ಟಿದೆ. ಕೋವಿಡ್ ವೈರಸ್ ನಲ್ಲಿ 1000ದಲ್ಲಿ 10 ರಷ್ಟಿತ್ತು. ಹೀಗಾಗಿ ರೂಪಾಂತರಿ ಸೋಂಕು 30 ಪ್ರತಿಶತದಷ್ಟು ಹೆಚ್ಚು ಅಪಾಯಕಾರಿ ಎಂದು ತಿಳಿಸಿದ್ದಾರೆ.
ಈಗಾಗಲೇ ಕೋವಿಡ್ ರೂಪಾಂತರಿ ಸೋಂಕು 50 ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: ಬಂಟ್ವಾಳ: ಚರ್ಚ್ ಗೆ ನುಗ್ಗಿದ ಕಳ್ಳರು; ಹಣಕ್ಕೆ ತಡಕಾಡಿ, ಪವಿತ್ರ ಸೊತ್ತುಗಳಿಗೆ ಹಾನಿ