Advertisement

ಉಜ್ವಲ ಯೋಜನೆ 2.0 ಗೆ ನಾಳೆ ಉ. ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಮೋದಿ ಚಾಲನೆ

12:19 PM Aug 09, 2021 | |

ನವ ದೆಹಲಿ : ಪ್ರಧಾನಿ ಮೋದಿ ನೇತೃತ್ವದ  ಕೇಂದ್ರದ  ಸರ್ಕಾರವು ಉಜ್ವಲ ಯೋಜನೆಯನ್ನು ಹೊಸ ಪ್ಯಾಕೇಜಿಂಗ್‌ ನೊಂದಿಗೆ ಆರಂಭಿಸಲಿದ್ದು, ಮಂಗಳವಾರ( ಆಗಸ್ಟ್ 10) ಉಜ್ವಲ ಯೋಜನೆ 2.0ಕ್ಕೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಿಂದ ಚಾಲನೆ ನೀಡಲಿದ್ದಾರೆ.

Advertisement

ಉಜ್ವಲ 2.0 ಅಡಿಯಲ್ಲಿ, ಫಲಾನುಭವಿಗೆ ಉಚಿತ ಗ್ಯಾಸ್ ಸಂಪರ್ಕ, ಗ್ಯಾಸ್ ಸ್ಟೋವ್ ಜೊತೆಗೆ ಮೊದಲ ಬಾರಿಗೆ ತುಂಬಿದ ಸಿಲಿಂಡರ್ ಸಿಗಲಿದೆ.

ಇದನ್ನೂ ಓದಿ : ಹೊಡೆದ್ರೆ ವಾಪಸ್ ಅದರಲ್ಲಿ ಹೊಡಿರಿ ಎಂದಿದ್ದು ತಪ್ಪಾ?: ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ

ಉಜ್ವಲ ಯೋಜನೆಯ  ಮೊದಲ ಆವೃತ್ತಿಯಲ್ಲಿ, ಸರ್ಕಾರವು ಎಲ್ ಪಿ ಜಿ ಸಂಪರ್ಕಗಳಿಗೆ ರೂ 1600 (ಠೇವಣಿ ಹಣ) ದ ಆರ್ಥಿಕ ಸಹಾಯವನ್ನು ಮಾತ್ರ ನೀಡುತ್ತಿತ್ತು. ಈ ಯೋಜನೆಯಡಿ, ಗ್ಯಾಸ್ ಸಂಪರ್ಕಗಳನ್ನು ಪಡೆಯುವ ಕುಟುಂಬಗಳು ಯಾವುದೇ ಬಡ್ಡಿ ಇಲ್ಲದೆ ಸ್ಟೌವ್ ಮತ್ತು ಸಿಲಿಂಡರ್‌ ಗಳಿಗಾಗಿ ಸಾಲ ತೆಗೆದುಕೊಳ್ಳಬಹುದಾಗಿತ್ತು.

ಉಜ್ವಲ 2.0 ಯೋಜನೆಯ ಅಡಿ ಕೇಂದ್ರ ಸರ್ಕಾರ ಈ ಆರ್ಥಿಕ ವರ್ಷದಲ್ಲಿ ಸುಮಾರು ಒಂದು ಕೋಟಿ ಗ್ಯಾಸ್ ಸಂಪರ್ಕ ಬಡವರಿಗೆ ಉಚಿತವಾಗಿ ಕಲ್ಪಿಸುವ ಗುರಿ ಹೊಂದಿದೆ.

Advertisement

ಸುಮಾರು ಐದು ವರ್ಷಗಳ ಹಿಂದೆ ಉತ್ತರ ಪ್ರದೇಶ ಚುನಾವಣೆಗಳಿಗೂ ಮುನ್ನ ಪ್ರಧಾನಿ ಮೋದಿ ಮೇ 1, 2016ರಲ್ಲಿ ರಾಜ್ಯದ ಬಲಿಯಾ ಜಿಲ್ಲೆಯ ಮೂಲಕ ಈ ಯೋಜನೆಯ ಮೊದಲ ಆವೃತ್ತಿಗೆ ಚಾಲನೆ ನೀಡಿದ್ದರು.

ಇನ್ನು ಉಜ್ವಲ 2. 0 ಬಗ್ಗೆ ಮಾಹಿತಿ  ನಿಡಿದ ಅಧಿಕಾರಿಯೊಬ್ಬರು, ರೂ. 800 ಕ್ಕಿಂತ ಅಧಿಕ ಬೆಲೆಯ ಸಿಲಿಂಡರ್ ಹಾಗೂ ಒಂದು ಗ್ಯಾಸ್ ಸ್ಟೋವ್ ಉಚಿತವಾಗಿ ಸಿಗುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಬಿಗಿ ಉಡುಪು ಧರಿಸಿದ್ದಾರೆಂಬ ಕಾರಣಕ್ಕೆ ಯುವತಿಯನ್ನು ಗುಂಡಿಕ್ಕಿ ಕೊಂದ ತಾಲಿಬಾನ್!

Advertisement

Udayavani is now on Telegram. Click here to join our channel and stay updated with the latest news.

Next