Advertisement
“ಯಾರಧ್ದೋ ಹೆಸರಿಗೆ ಇನ್ನಾರಿಗೋ ಕನೆಕ್ಷನ್’ ಎಂದು ಯೋಜನೆ ಹಂಚಿಕೆಯಲ್ಲಿ ಆದ ಅಕ್ರಮ ಕುರಿತು ಉದಯವಾಣಿ ಸವಿವರವಾಗಿ ವರದಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವಾಲಯ ಕೂಡಲೇ ಕ್ರಮ ಕೈಗೊಂಡಿದ್ದವು. ಜಿಲ್ಲಾಧಿಕಾರಿಗಳು ಜು. 9ರಂದು ಜಿಲ್ಲಾ ಗ್ಯಾಸ್ ವಿತರಕರ ಸಭೆ ಕರೆದು ವಿವರವನ್ನು ನೀಡುವಂತೆ ಆದೇಶಿಸಿದ್ದರು. ಈ ಯೋಜನೆಯ ನೋಡಲ್ ಏಜೆನ್ಸಿಯಾದ ಎಚ್‌ಪಿಸಿಎಲ್ ಕಂಪೆನಿಯ ಅಧಿಕಾರಿಗಳು ನಿಜವಾದ ಫಲಾನುಭವಿಗಳಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಜತೆಗೆ ತನಿಖೆಗೂ ಸೂಚಿಸುವುದಾಗಿ ತಿಳಿಸಿದ್ದರು.
ಈ ಕುರಿತು ಮಾತನಾಡಿದ ಅಧಿಕಾರಿಗಳು, ಅರ್ಹ ಫಲಾನುಭವಿಗಳಿಗೆ ಉಜ್ವಲಾ ಯೋಜನೆ ಸಂಪರ್ಕ ದೊರೆಯದಿದ್ದರೆ ತಕ್ಷಣ ಸಮೀಪದ ವಿತರಕರನ್ನು ಭೇಟಿ ಮಾಡಿ ದಾಖಲೆ ನೀಡಿ ಸಂಪರ್ಕ ಪಡೆದುಕೊಳ್ಳಬಹುದು. ಈ ಯೋಜನೆ ದುರುಪಯೋಗದ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದು, ಅಕ್ರಮ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.
Related Articles
ಬೈಂದೂರು ಗ್ರಾಮೀಣ ಪ್ರದೇಶದ ಕೆಲವರು ಯೋಜನೆಯ ಸೌಲಭ್ಯ ಪಡೆಯಲು ಗ್ಯಾಸ್ ವಿತರಕರನ್ನು ಭೇಟಿ ಮಾಡಿದಾಗ ನಿಮ್ಮ ಖಾತೆಗೆ ಸಂಪರ್ಕ ನೀಡಿಯಾಗಿದೆ ಎಂದು ಸ್ಥಳೀಯ ಏಜೆನ್ಸಿಯವರು ತಿಳಿಸಿದ್ದಾರೆ.
ಈ ಪ್ರಕರಣದ ವಿವರ ಕಲೆಹಾಕಿ ದಾಗ ಬೈಂದೂರು ವ್ಯಾಪ್ತಿಯ ಹಲವಾರು ಮಂದಿಯ ಟಿನ್ ನಂಬರ್ ಬಳಸಿ ಗಂಗೊಳ್ಳಿ ವಿತರಕರು ಬೇರೆಯವರಿಗೆ ಗ್ಯಾಸ್ ಸಂಪರ್ಕ ನೀಡಿದ್ದರು. ಬ್ರಹ್ಮಾವರದಲ್ಲೂ ಇದೇ ರೀತಿ ಸಾವಿರಾರು ಜನರಿಗೆ ರಾಂಗ್ ಕನೆಕ್ಷನ್ ನೀಡಿರುವ ಪ್ರಕರಣ ಬೆಳಕಿಗೆ ಬಂದಿತ್ತು.
Advertisement
ಜಿಲ್ಲಾ ಪಂಚಾಯತ್ ಸಭೆಯಲ್ಲಿ ಚರ್ಚೆ; ಎಚ್‌ಪಿಸಿಎಲ್ ಅಧಿಕಾರಿಗಳಿಂದಲೂ ತನಿಖೆಉಡುಪಿ: ಉಜ್ವಲಾ ಯೋಜನೆಯಡಿ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಸಂಪರ್ಕ ಹಗರಣ ಬುಧವಾರ ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಪ್ರತಿಧ್ವನಿ ಸಿತು. ಜಿಲ್ಲೆಯ ಕೆಲವು ಗ್ಯಾಸ್ ಏಜನ್ಸಿಗಳು ಅಕ್ರಮ ಸಂಪರ್ಕ ನೀಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಬಗ್ಗೆ ತನಿಖೆಯ ಪ್ರಗತಿಯ ಕುರಿತು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಸಭೆಯಲ್ಲಿ ಪ್ರಶ್ನಿಸಿದರು. ಉತ್ತರಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರು, ಜಿಲ್ಲೆಯ ಎರಡು ಗ್ಯಾಸ್ ಏಜನ್ಸಿಗಳು ಫಲಾನುಭವಿಗಳ ಹೆಸರಿ ನಲ್ಲಿ ಬೇರೆಯವರಿಗೆ ಸಂಪರ್ಕ ನೀಡಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆಗೆ ಸೂಚಿಸಿದ್ದಾರೆ. ಉಜ್ವಲಾ ಯೋಜನೆಗೆ ಉಡುಪಿ ಜಿಲ್ಲೆಯಲ್ಲಿ ಎಚ್.ಪಿ.ಸಿ.ಎಲ್. ಸಂಸ್ಥೆಯು ನೋಡಲ್ ಆಗಿದ್ದು, ಪ್ರಕರಣದ ಬಗ್ಗೆ ಎಚ್‌ಪಿಸಿಎಲ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಉಜ್ವಲಾ ಫಲಾನುಭವಿಗಳ ಮನೆಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿದರು.