Advertisement
ಬೆಳಗ್ಗೆ 11ಕ್ಕೆ ಆರಂಭವಾದ ಸಭೆ ಅಪರಾಹ್ನ್ನ 1ಕ್ಕೆ ವಂದನೆ ಯೊಂದಿಗೆ ಮುಕ್ತಾಯ ಆಗುವ ಮೂಲಕ ಸಮ ಯದ ಪಾಲನೆ ಮೆಚ್ಚುಗೆಗೆ ಪಾತ್ರ ವಾಯಿತು. ವೇದಿಕೆಯಲ್ಲಿ ಸಚಿವರು, ಜಿಲ್ಲೆಯ ಎಲ್ಲ ಬಿಜೆಪಿ ಶಾಸಕರು, ಗ್ಯಾಸ್ ಕಂಪೆನಿ ಮುಖ್ಯಸ್ಥರು, ಅತಿಥಿ ಉಪಸ್ಥಿತರಿದ್ದರು. ಸಭಾಂಗಣದೆದುರು ಪಕ್ಷದ ಪ್ರಮುಖರು, ಗಣ್ಯರು ಉಪಸ್ಥಿತ ರಿದ್ದರು. ಅನಂತರ ದ್ರಶ್ಯ ಮತ್ತು ಸುದ್ದಿ ಮಾದ್ಯಮಕ್ಕೆ ಪ್ರತ್ಯೇಕ ವ್ಯವಸ್ಥೆ ಆಗಿತ್ತು.
ಬೆಳಗ್ಗೆ 9ರಿಂದ ಜನರ ಆಗಮಿಸಲು ಆರಂಭಿಸಿದ್ದರು. ಭದ್ರತೆ ಉದ್ದೇಶ ದಿಂದ ಪೊಲೀಸರು ಮೆಟಲ್ ಡಿಟೆಕ್ಟರ್ ಮೂಲಕ ಸಾಗುವಂತೆ ಕ್ರಮ ಕೈಗೊಂಡಿ ದ್ದರು. ಸಾರ್ವಜನಿಕರು, ಆಶಾ ಕಾರ್ಯಕರ್ತೆಯರು, ಉಜ್ವಲ ಫಲಾನುಭವಿ ಗಳು, ಆಯುಷ್ಮಾನ್ ಯೋಜನೆ ಫಲಾನುಭವಿಗಳು ಸಭಾಂಗಣದಲ್ಲಿ ಆಸೀನರಾಗಿದ್ದರು. ಕಿಕ್ಕಿರಿದ ಸಭಾಂಗಣ
ಸಭಾಂಗಣದಲ್ಲಿ ಸುಮಾರು 12 ಸಹಸ್ರ ಮಂದಿಗೆ ಆಸನದ ವ್ಯವಸ್ಥೆ ಮಾಡಿದ್ದು, ಸಭೆ ಆರಂಭ ಆಗುವ ಹೊತ್ತಿಗೆ ಸಭಾಂಗಣ ಕಿಕ್ಕಿರಿದು ತುಂಬಿ ದ್ದಲ್ಲದೆ, ಹೊರಗೂ ಜನಸಂದಣಿ ಇತ್ತು. ಕಾರ್ಯಕ್ರಮ ಆರಂಭದಲ್ಲಿ ಗಣೇಶ್ ಪ್ರಸಾದ್ ಮಂಚಿ ಅವರು ಉಜ್ವಲ ಯೋಜನೆ ಬಗ್ಗೆ ಪ್ರಸ್ತಾವನೆ, ಆಯುಷ್ಮಾನ್ ಭಾರತ ವಿಮಾ ಯೋಜನೆ ಬಗ್ಗೆ ಮೈಸೂರು ವಿಭಾಗ ಸಲಹೆಗಾರ ಪ್ರಸಾದ್ ಎಚ್.ಎಸ್. ಮಾಹಿತಿ ನೀಡಿದರು.
Related Articles
Advertisement
ವೇದಿಕೆಯಿಂದ ಪೆಟ್ರೋಲಿಯಂ ಸಮಿತಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಸಿ.ಟಿ. ರವಿ, ಸಭಾಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಮಾತನಾಡಿದರು. ವಿ.ಪ. ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಹಿತ ಜಿಲ್ಲೆಯ ಎಲ್ಲ ಶಾಸಕರು, ಪ್ರಮುಖರು ಉಪಸ್ಥಿತರಿದ್ದರು. ಸಂಸದ ನಳಿನ್ ಕುಮಾರ್ ಕಟೀಲು ಪ್ರಸ್ತಾವಿಸಿದರು. ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ ಕಾರ್ಯಕ್ರಮದ ಪರಿಚಯ ನೀಡಿದರು. ಭಾರತ್ ಪೆಟ್ರೋಲಿಯಂ ಸಂಸ್ಥೆಯ ತಂಗವೇಲು ಸ್ವಾಗತಿಸಿ, ಅನಿಲ ಸಂಸ್ಥೆಯ ಅಂಬಾಭವಾನಿ ಕುಮಾರ್ ವಂದಿಸಿದರು.
ಊಟೋಪಚಾರಸಭೆ ಮುಕ್ತಾಯ ಘೋಷಣೆ ಆಗುತ್ತಿದ್ದಂತೆ ಊಟೋಪಚಾರಕ್ಕೆ ಸರತಿ ಸಾಲಲ್ಲಿ ಬಂದಿದ್ದ ಜನರು ಶಿಸ್ತುಬದ್ದವಾಗಿ ನಡೆದುಕೊಳ್ಳುವ ಮೂಲಕ ಸಂಘಟಕರ ಮೆಚ್ಚುಗೆ ಪಡೆದರು. ಎಷ್ಟುಬೇಕೋ ಅಷ್ಟನ್ನೇ ಬಳಸಿಕೊಳ್ಳಿ, ಉಣ್ಣುವ ಅನ್ನವನ್ನು ಚೆಲ್ಲಬೇಡಿ, ಕಸ ಮುಸುರೆಯನ್ನು ಅದಕ್ಕಾಗಿ ಇಟ್ಟಿದ ತೊಟ್ಟಿಯಲ್ಲೇ ಹಾಕಿ ಎನ್ನುವ ಘೋಷಣೆ ಸಹಿತ ಎಲ್ಲವನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆ ಸಂಘಟಿಸಲಾಗಿತ್ತು. ಶೌಚಾಲಯ ವ್ಯವಸ್ಥೆ ಮಾಡಲಾಗಿತ್ತು. ಯಕ್ಷಗಾನ ನಾಟ್ಯ ವೈಭವ
ಸಭೆ ಆರಂಭದಲ್ಲಿ ಪಿ. ವಸಂತ ಪ್ರಭು ಬಂಟ್ವಾಳ ಮತ್ತು ವಿಜೇತ ಕಾಮತ್ ವಂದೇ ಮಾತರಂ ಪ್ರಾರ್ಥನೆ ಹಾಡಿದರು. ಸಭಾ ಕಾರ್ಯಕ್ರಮ ಮುಕ್ತಾಯದಲ್ಲಿ ಪಟ್ಲ ಸತೀಶ್ ಶೆಟ್ಟಿ ಬಳಗದಿಂದ ಯಕ್ಷಗಾನ ನಾಟ್ಯ ವೈಭವ ಹಮ್ಮಿಕೊಳ್ಳಲಾಗಿತ್ತು.