Advertisement
ದ.ಕ.ಜಿಲ್ಲೆಯಲ್ಲಿ 48,700, ಉಡುಪಿ ಯಲ್ಲಿ 25,000 ಫಲಾನು ಭವಿಗಳಿದ್ದಾರೆ. ಅವರಿಂದ ರಿಫಿಲ್ ಬುಕಿಂಗ್ ಮಾಡಿಸಿಕೊಳ್ಳಲು ಗ್ಯಾಸ್ ಏಜೆನ್ಸಿಗಳು ನಿರಂತರವಾಗಿ ಮನೆ -ಮನೆಗಳಿಗೆ ತೆರಳುತ್ತಿವೆ.
ಸರಕಾರ ಎಪ್ರಿಲ್, ಮೇ ಮತ್ತು ಜೂನ್ ತಿಂಗಳಿಗೆ ಉಚಿತವಾಗಿ ಅನಿಲ ಪೂರೈಸಲಿದ್ದು, ಈಗಾಗಲೇ ಒಂದು ತಿಂಗಳ ಫಿಲ್ಲಿಂಗ್ ಮೊತ್ತವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಎಪ್ರಿಲ್‌ನ ಸಿಲಿಂಡರ್ ಪಡೆಯುವವರು ಎ. 30ರೊಳಗೆ ಪಡೆಯಬೇಕು. ಮೇ 1ರಿಂದ ಮೇ ತಿಂಗಳಿನ ಕೋಟಾದಡಿ ಮಾತ್ರ ಸಿಗಲಿದೆ. ಎಪ್ರಿಲ್‌ನ ಕೋಟಾ ಪಡೆಯಲು ಸಾಧ್ಯ ವಿಲ್ಲ. ಅಂತೆಯೇ ಮೇ ಅಂತ್ಯದೊಳಗೆ ಪಡೆಯದಿದ್ದರೆ ಜೂನ್ ತಿಂಗಳ ಕೋಟಾ ಮಾತ್ರ ಪಡೆಯಬಹುದಾಗಿರುತ್ತದೆ.
Related Articles
ಈ ಪ್ಯಾಕೇಜ್ ಪ್ರಸ್ತುತ ಕೇವಲಕೇಂದ್ರದ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಮಾತ್ರ ಅನ್ವಯ. ಇವು ಮಹಿಳೆಯರ ಹೆಸರಿನಲ್ಲಿರುವ ಅಡುಗೆ ಅನಿಲ ಸಂಪರ್ಕಗಳು. ಈ ಹಿಂದೆ ಬಿಪಿಎಲ್ ಫಲಾನುಭವಿಗಳಿಗೆ ನೀಡ ಲಾದ ಮುಖ್ಯಮಂತ್ರಿ ಅನಿಲಭಾಗ್ಯ ಹಾಗೂ ಇತರ ಉಚಿತ ಅನಿಲ ಸಂಪರ್ಕಯೋಜನೆಗಳಿಗೆ ಅನ್ವಯಿಸುವುದಿಲ್ಲ.
Advertisement
ಮುಖ್ಯಮಂತ್ರಿ ಅನಿಲ ಸಂಪರ್ಕ ಯೋಜನೆಯಡಿ ಕೂಡ ಉಚಿತ ವಾಗಿ ಗ್ಯಾಸ್ ನೀಡುವುದಾಗಿ ಸರಕಾರ ಘೋಷಿಸಿದ್ದು, ಇನ್ನಷ್ಟೇ ಅನುಷ್ಠಾನ ಗೊಳ್ಳಬೇಕಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿಯೇ ಬುಕ್ಕಿಂಗ್ ಮೊದಲ ತಿಂಗಳಲ್ಲಿಯೇ ಶೇ. 100ರಷ್ಟು ಗುರಿ ತಲುಪುವ ಉದ್ದೇಶದಿಂದ ಪೆಟ್ರೋಲಿಯಂ ಕಂಪೆನಿಗಳು ಫಲಾನು
ಭವಿಗಳ ಮನೆ ಮನೆಗೆ ತೆರಳುತ್ತಿವೆ. ಸ್ಥಳದಲ್ಲಿಯೇ ರಿಫಿಲ್ಲಿಂಗ್ ಬುಕ್ಕಿಂಗ್ ಕೂಡ ಮಾಡಲಾಗುತ್ತಿದೆ. ಆದಾಗ್ಯೂ ಅನೇಕ ಮಂದಿ ಬುಕ್ಕಿಂಗ್ ಮಾಡಿ ಕೊಂಡಿಲ್ಲ. ಹೆಚ್ಚಿನವರು ಒಂದೇ ಸಿಲಿಂಡರ್ ಹೊಂದಿರುವ ಕಾರಣ ಅದು ಖಾಲಿಯಾಗದೆ ಬುಕಿಂಗ್ ಮಾಡುವುದು ಹೇಗೆ ಎಂಬ ಸಂಕಷ್ಟದಲ್ಲಿದ್ದಾರೆ. ಇನ್ನು ಕೆಲವು ಫಲಾನುಭವಿಗಳ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆಗಳಿರು ವುದರಿಂದಾಗಿಯೂ ವಿಳಂಬವಾಗಿದೆ. ಬ್ಯಾಂಕ್‌ಗಳ ಜತೆಗೂ ಪೆಟ್ರೋಲಿಯಂ ಕಂಪೆನಿಗಳು ಸಂಪರ್ಕದಲ್ಲಿದ್ದು ಫಲಾನುಭವಿಗಳಿಗೆ ಅಗತ್ಯ ನೆರವು ಒದಗಿಸುವಂತೆ ಸೂಚಿಸುತ್ತಿದ್ದಾರೆ. ಎ. 30 ಕೊನೆಯ ದಿನ
ಉಜ್ವಲ ಯೋಜನೆಯಡಿ ಈ ತಿಂಗಳ ಉಚಿತ ಅಡುಗೆ ಅನಿಲ ಪಡೆಯಲು ಎ. 30 ಕೊನೆಯ ದಿನ. ಫಲಾನುಭವಿಗಳು ಎರಡು ದಿನಗಳ ಮೊದಲಾದರೂ ಬುಕ್ಕಿಂಗ್ ಮಾಡಿಕೊಳ್ಳಬೇಕು. ಇಲ್ಲವಾದರೆ ಈ ತಿಂಗಳ ಕೋಟಾ ಕಳೆದುಕೊಳ್ಳುತ್ತಾರೆ. ಕೂಡಲೇ ತಮ್ಮ ಅಧಿಕೃತ ಡೀಲರ್‌ಗಳ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬೇಕು. ಸ್ಥಳೀಯಾಡಳಿತ ಸಂಸ್ಥೆಗಳು ಕೂಡ ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ.
– ಪವನ್ ನೋಡೆಲ್ ಅಧಿಕಾರಿ, ಉಜ್ವಲ ಯೋಜನೆ ದ.ಕ. ಜಿಲ್ಲೆ