ಬೆಂಗಳೂರು: ವಿವಿಧ ಸಕಾರಣಗಳಿಂದಾಗಿ ಸುದೀರ್ಘ ಬಿಡುವು ಪಡೆದಿದ್ದು, ಪ್ರಸ್ತುತ ತಮ್ಮ ಕಾರ್ಯಕ್ಷೇತ್ರಕ್ಕೆ ತೆರಳಿ ಕರ್ತವ್ಯ ನಿರ್ವಹಿಸಲು ಉತ್ಸುಕರಾಗಿರುವ ಮಹಿಳೆಯರಿಗೆ ಸಹಾಯಕಾರಿಯಾಗುವಂತಹ “ಕರ್ತವ್ಯ ಪುನರಾರಂಭ ಅಭಿಯಾನ” ಕಾರ್ಯಕ್ರಮವನ್ನು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪ್ರಕಟಿಸಿದೆ.
ಕಾರ್ಯಕ್ಷೇತ್ರದಲ್ಲಿ ವಿಭಿನ್ನತೆಯಲ್ಲಿ ಏಕತೆ ಮತ್ತು ಸಂಸ್ಥೆಯ ಬಗ್ಗೆ ಹೆಚ್ಚಿನ ಮುತುವರ್ಜಿಯನ್ನು ರೂಢಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ನಮ್ಮ ಬದ್ಧತೆಯಾಗಿದೆ.
ಬೆಂಗಳೂರಿನ ಕೋರಮಂಗಲದಲ್ಲಿರುವ ನಮ್ಮ ನೋಂದಾಯಿತ ಕಚೇರಿಯಿಂದ 3 ಕಿಲೋಮೀಟರ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವುದರ ಮುಖಾಂತರ ನಮ್ಮ ಬ್ಯಾಂಕ್ ನ ಉದ್ಯೋಗಿಗಳು ಮಹಿಳಾ ಸಬಲೀಕರಣವನ್ನು ಮತ್ತು ಅವರು ತಮ್ಮ ಬದುಕಿನ ಮುಂದಿನ ಮೆಟ್ಟಿಲನ್ನು ಇಡುವಲ್ಲಿ ಒಂದು ಸಾಧನವಾಗಿ ಉತ್ತೇಜಿಸುವ ನಿಟ್ಟಿನಲ್ಲಿ ಬೆಂಬಲ ವ್ಯಕ್ತಪಡಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.
” ಕರ್ತವ್ಯ ಪುನರಾರಂಭ ಅಭಿಯಾನ ” ಕಾರ್ಯಕ್ರಮದ ಭಾಗವಾಗಿ ಉಜ್ಜೀವನ್ SFB ಯು ತಮ್ಮ ಕರ್ತವ್ಯಕ್ಕೆ ಮರಳುವ ಮಹಿಳೆಯರಿಗಾಗಿ ಹೊಸ ನೇಮಕಾತಿ ಮತ್ತು ಉದ್ಯೋಗಕ್ಕಾಗಿ ಶಿಫಾರಸು ಅಭಿಯಾನವನ್ನು ಸಹ ಪ್ರಕಟಿಸಿತು. ಹೊಸ ನೇಮಕಾತಿ ಅಭಿಯಾನವನ್ನು ಬ್ಯಾಂಕ್ ನ ಎಲ್ಲ ಶಾಖೆಗಳಲ್ಲಿ ಹಮ್ಮಿಕೊಳ್ಳಲಾಗುವುದು ಮತ್ತು ಇದು ಸಮಾಜದ ಎಲ್ಲ ಮಜಲಿನ ವಿಭಿನ್ನ ಹಿನ್ನೆಲೆಯುಳ್ಳ ಮಹಿಳೆಯರು ಉತ್ತೇಜಿತರಾಗಿ ಉದ್ಯೋಗಕ್ಕೆ ಅರ್ಜಿಸಲ್ಲಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ:ಗಾಂಧಿ ಮೌಲ್ಯಗಳು ಜಗತ್ತನ್ನು ಪ್ರೇರೇಪಿಸುತ್ತಿವೆ: ಸಬರಮತಿ ಆಶ್ರಮಕ್ಕೆ ಆಸ್ಟ್ರೇಲಿಯ ಪ್ರಧಾನಿ