Advertisement

ಉಜ್ಜಯಿನಿ ಪೀಠಕ್ಕೆ ಉತ್ತರಾಧಿಕಾರಿ ನೇಮಕ: ರೇಣುಕ ಶ್ರೀ ವಿರೋಧ

12:55 PM Apr 08, 2017 | |

ಚನ್ನಗಿರಿ: ರಾಷ್ಟ್ರೀಯ ಪರಂಪರೆಯನ್ನು ಹೊಂದಿರುವ ವೀರಶೈವ ಧರ್ಮಕ್ಕೆ ಧಕ್ಕೆ ತರುವ ನಿಟ್ಟಿನಲ್ಲಿ ಮಧ್ಯ ಪ್ರದೇಶದ ಉಜ್ಜಯಿನಿ ಪೀಠಕ್ಕೆ ನಿಯಮಬಾಹಿರವಾಗಿ ಉತ್ತರಾಧಿಕಾರಿಯನ್ನು ನೇಮಕ ಮಾಡಿರುವುದರಿಂದ ಪಂಚಪೀಠವಾದ ವೀರಶೈವ ಧರ್ಮದಲ್ಲಿ ಬಿರುಕು ಮೂಡುವಂತಾಗಿದೆ ಎಂದು ಯಡಿಯೂರು ಕ್ಷೇತ್ರದ ತಾವರಕೆರೆ ಶಿಲಾ ಮಠದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಶುಕ್ರವಾರ ದೂರವಾಣಿ ಮೂಲಕ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಪರಂಪರೆಯನ್ನು ಹೊಂದಿರುವ ಪಂಚಪೀಠಗಳಾದ ವೀರಶೈವ ಧರ್ಮದಲ್ಲಿ ಬಿರುಕನ್ನು ಮೂಡಿಸುವಂತ ಕಾರ್ಯ ನಡೆಯುತ್ತಿದೆ. ಇದರಿಂದ ಭಕ್ತ ಸಮೂಹಕ್ಕೆ ನೋವು ಉಂಟಾಗಿದೆ. ಇನ್ನೂ ಉಳಿದ ನಾಲ್ಕು ಪೀಠಗಳಿಗೆ ಮಾಹಿತಿ ನೀಡದೆ ಕೈಗೊಂಡಿರುವ ಈ ಉತ್ತರಾಧಿಕಾರವನ್ನು ನಾವುಗಳು ವಿರೋಧಿಸುತ್ತೇವೆ ಎಂದು ತಿಳಿಸಿದರು.

ಪಂಚಪೀಠಗಳಲ್ಲಿ ಯಾವುದೇ ಪೀಠಕ್ಕೆ ಉತ್ತರಾಧಿಕಾರಿ ನೇಮಿಸಲು ಇತರ ನಾಲ್ಕು ಪೀಠದ ಶ್ರೀಗಳು ಚರ್ಚೆ ನಡೆಸಿ ಒಮ್ಮತದ ನಿರ್ಣಯವನ್ನು ಕೈಗೊಳಬೇಕು. ಆದರೆ, ಕೇದಾರ ಪೀಠದ ಭೀಮಾಶಂಕರ ಶಿವಾಚಾರ್ಯರರು ಉಳಿದ ಪೀಠಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ  ಉಜ್ಜನಿ ಪೀಠದ ತ್ರಿಲೋಚನಾ ಶಿವಾಚಾರ್ಯರಿಗೆ ಪಟ್ಟಕಟ್ಟಿದ್ದಾರೆ. 

ಜತೆಯಲ್ಲಿ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಅಶೋಕ ಸಿದ್ದಾಪುರದಲ್ಲಿ ಸರ್ವಧರ್ಮ ಅಡ್ಡಪಲ್ಲಕ್ಕಿ ಉತ್ಸವವನ್ನು ನಡೆಸಿದ್ದಾರೆ. ಇದರಿಂದ ಸಮಾಜದಲ್ಲಿ ಬಿರುಕು ಮೂಡಿದ್ದು, ಉಳಿದ ಪೀಠಗಳು ಭೀಮಾಶಂಕರ ಶ್ರೀಗಳ ಕಾರ್ಯವೈಖರಿಯ ಬಗ್ಗೆ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next